ಜೇನಿನಂಥ ಹುಡುಗಿ ಮೌನ..!! ‘ರಾಮಚಾರಿ’ಗೆ ಜೀವ ತುಂಬಿದ ಚಾರುಗೆ ಅಂದು ಕಾದಿತ್ತು ಸರ್ಪ್ರೈಸ್​..!

ಕನ್ನಡದ ಕಿರುತೆರೆಯ ಬ್ಯೂಟಿಫುಲ್ ನಟಿಯರಲ್ಲಿ ಚಾರು ಕೂಡ ಒಬ್ಬರು. ರಾಮಾಚಾರಿನ ಅರಸಿ ಚಾರು ಕೆಲವೊಮ್ಮೆ ತುಂಬಾ ಮುದ್ದು , ಕೆಲವೊಮ್ಮೆ ತುಂಬಾ ಕೋಪಿಷ್ಟೇ. ತನ್ನ ರಾಮಚಾರಿಗೋಸ್ಕರ ಚಾರು ಏನ್ಬೇಕಾದರೂ ಮಾಡ್ತಾಳೆ. ಇದು ಸಿರಿಯಲ್ ಕತೆಯಾದ್ರೆ ಚಾರು ಪಾತ್ರ ನಿರ್ವಹಿಸುತ್ತಿರುವ ನಟಿ ಮೌನ ಗುಡ್ಡೆಮನೆ ಅವ್ರು ಕೋಪಿಷ್ಟೆನೂ ಅಲ್ಲ, ಮುಖದ ತುಂಬಾ ಸಿಟ್ಟು ಇರೋ ಹುಡ್ಗಿನೂ ಅಲ್ಲ.. ಬರೀ ಸಿಹಿ ತುಂಬಿರೋ ಜೇನಿನಂಥ ಹುಡುಗಿ ಮೌನ.

ಇತ್ತೀಚೆಗಷ್ಟೇ ಮೌನ, ಅವ್ರು ತಮ್ಮ ಹುಟ್ಟು ಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡ್ಕೊಂಡಿದ್ದಾರೆ. ಫ್ರ್ಯಾಂಡ್ಸ್ ಆ್ಯಂಡ್ ಫ್ಯಾಮಿಲಿ ಜೊತೆ ನೆನ್ನೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ತಮ್ಮ ಬಾಳಿನ ಹೊಸ ಅಧ್ಯಾಯಕ್ಕೆ ಖುಷಿಯಿಂದ ಕಾಲಿರಿಸಿದ್ದಾರೆ.

ಮೌನ ತಮ್ಮ ಫ್ಯಾಮಿಲಿ ಜೊತೆ ಸೆಲೆಬ್ರೇಟ್ ಮಾಡಿಕೊಳ್ಳುವುದರ ಜೊತೆಗೆ ರಾಮಾಚಾರಿಯ ಸೆಟ್​ನಲ್ಲಿಯೂ ಕೂಡ ಮೌನ ಅವ್ರ ಹುಟ್ಟು ಹಬ್ಬ ತುಂಬಾ ಜೋರಿತ್ತು. ಫ್ರೆಂಡ್ಸ್ ಕಡೆಯಿಂದ ಸಿಕ್ಕಾಪಟ್ಟೆ ಗಿಫ್ಟ್ಸ್​ಗಳು ಹರಿದು ಬಂದಿವೆ ಮೌನ ಅವ್ರಿಗೆ. ಇನ್ನೂ ಮೌನ ಅವ್ರ ಅಭಿಮಾನಿಗಳು ಕೂಡ ಅವರ ಹುಟ್ಟು ಹಬ್ಬಕ್ಕೆ ಭರಪೂರ ವಿಶಸ್​ ತಿಳಿಸಿದ್ದಾರೆ.

Leave a Reply

Your email address will not be published. Required fields are marked *