ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿಗೆ ಚಾಲಕೆ ಸಿಕ್ಕ ಬೆನ್ನಲ್ಲೇ ಟಿಕೆಟ್​ ದರದ ಬಗ್ಗೆ ಪರ-ವಿರೋಧದ ಚರ್ಚೆಗಳಾಗುತ್ತಿದ್ದ, ಇದರ ಬೆನ್ನಲ್ಲೇ ನೈರುತ್ಯ ರೈಲ್ವೆ ಇಲಾಖೆ ಟಿಕೆಟ್​ ದರವನ್ನು ಪರಿಷ್ಕರಣೆ ಮಾಡಿದೆ. ಹೊಸ ಟಿಕೆಟ್ ದರ ವಿವರ ಈ ಕೆಳಗಿನಂತಿದೆ.​

ಚಾಲನೆ ಸಿಕ್ಕ ಮೊದಲ ದಿನವೇ ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲಿನ ಟಿಕೆಟ್ ದರ ಪರಿಷ್ಕರಣೆ: ಇಲ್ಲಿದೆ ಹೊಸ ದರ ವಿವರ

ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲು

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ (ಜೂನ್ 27) ಅಷ್ಟೇ ಒಟ್ಟು ಐದು ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲಿಗೆ ಚಾಲನೆ ನೀಡಿದ್ದರು. ಇದರಲ್ಲಿ ಬೆಂಗಳೂರು-ಧಾರವಾಡ ರೈಲಿಗೂ ಚಾಲನೆ ಸಿಕ್ಕಿತ್ತು. ಆದ್ರೆ, ಈ ರೈಲಿನ ಟಿಕೆಟ್​ ದರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗಿತ್ತು. ಬಡವರು ಓಡಾಡುವ ರೈಲು ಇದಲ್ಲ ಅಂತೆಲ್ಲ ಟೀಕೆಗಳು ವ್ಯಕ್ತವಾಗುತ್ತಿದ್ದವು. ಇದರ ಬೆನ್ನಲ್ಲೇ ನೈಋುತ್ಯ ರೈಲ್ವೆಯು ಬೆಂಗಳೂರು-ಧಾರವಾಡ-ಬೆಂಗಳೂರು ವಂದೇ ಭಾರತ್‌ ರೈಲು ಟಿಕೆಟ್​ ದರವನ್ನು ಪರಿಷ್ಕರಣೆ ಮಾಡಿದೆ. ಎಕ್ಸಿಕ್ಯೂಟಿವ್‌ ಕ್ಲಾಸ್‌ ಟಿಕೆಟ್​ ದರ ಹೆಚ್ಚಿಸಿದ್ದರೆ, ಎಸಿ ಕಾರ್‌ಚೇರ್‌ ಟಿಕೆಟ್​ ದರ ಇಳಿಕೆ ಮಾಡಲಾಗಿದೆ. ಜತೆಗೆ ಪ್ರತಿ ನಿಲ್ದಾಣಗಳ ನಡುವಿನ ಪ್ರಯಾಣದ ದರವನ್ನು 20 ರೂ. ಹೆಚ್ಚಿಸಲಾಗಿದೆ. ಹಾಗಾದ್ರೆ, ಎಷ್ಟೆಷ್ಟು ಇಳಿಕೆಯಾಗಿದೆ ಎನ್ನುವ ವಿವರ ಈ ಕೆಳಗಿನಂತಿದೆ.

ಈ ಮೊದಲು ಬೆಂಗಳೂರು ಸಿಟಿ ರೈಲು ನಿಲ್ದಾಣದಿಂದ (ಕೆಎಸ್‌ಆರ್‌) ಯಶವಂತಪುರಕ್ಕೆ 410 ರೂ. ಟಿಕೆಟ್​ ದರ ನಿಗದಿ ಮಾಡಲಾಗಿತ್ತು. ಈಗ 365 ರೂ.ಗೆ ಇಳಿಕೆ ಮಾಡಲಾಗಿದೆ. ಅದೇ ರೀತಿ ಧಾರವಾಡದಿಂದ ಹುಬ್ಬಳ್ಳಿಗೆ ಇದೇ ರೀತಿ ಕಡಿಮೆ ಮಾಡಲಾಗಿದೆ. ಆದರೆ ಎಕ್ಸಿಕ್ಯೂಟಿವ್‌ ಕ್ಲಾಸ್‌ನಲ್ಲಿ ಇದೇ ನಿಲ್ದಾಣಗಳ ನಡುವೆ ಸಂಚರಿಸಲು ಈ ಮೊದಲು ನಿಗದಿ ಮಾಡಿದ್ದ 545 ರೂ. ಬದಲು 690 ರೂ.ಗೆ ಹೆಚ್ಚಿಸಲಾಗಿದೆ.

ಪರಿಷ್ಕೃತ ಟಿಕೆಟ್​ ದರ ಇಂತಿದೆ

ಕೇವಲ ಎಸಿ ಕಾರ್‌ಚೇರ್‌ ಟಿಕೆಟ್​ ದರ ಇಳಿಕೆ ಮಾಡಲಾಗಿದ್ದು, ಪರಿಷ್ಕೃತ ದರ ಇಂತಿದೆ. ಬೆಂಗಳೂರು-ಧಾರವಾಡ 1185 ರೂ., ಬೆಂಗಳೂರು- ಹುಬ್ಬಳ್ಳಿ 1155 ರೂ., ಬೆಂಗಳೂರು- ದಾವಣಗೆರೆ 935 ರೂ., ಯಶವಂತಪುರ-ದಾವಣಗೆರೆ 920 ರೂ, ಯಶವಂತಪುರ-ಹುಬ್ಬಳ್ಳಿ 1155 ರೂ., ಯಶವಂತಪುರ-ಧಾರವಾಡ 1185 ರೂ., ದಾವಣಗೆರೆ-ಧಾರವಾಡ ರೂ.555, ದಾವಣಗೆರೆ-ಹುಬ್ಬಳ್ಳಿ 520 ರೂ, ಹುಬ್ಬಳ್ಳಿಯಿಂದ ಧಾರವಾಡಕ್ಕೆ 365 ರೂ. ನಿಗದಿಪಡಿಸಲಾಗಿದೆ.

ಎಕ್ಸಿಕ್ಯೂಟಿವ್‌ ಕ್ಲಾಸ್‌ ಟಿಕೆಟ್ ದರ

ಇನ್ನು ರೂಲಿನ ಎಕ್ಸಿಕ್ಯೂಟಿವ್‌ ಕ್ಲಾಸ್‌ ಟಿಕೆಟ್​ ದರ ಏರಿಕೆ ಮಾಡಲಾಗಿದ್ದು, ಅದು ಇಂತಿದೆ. ಬೆಂಗಳೂರು- ಧಾರವಾಡ 2265 ರೂ., ಬೆಂಗಳೂರು- ಹುಬ್ಬಳ್ಳಿ 2200ರೂ., ಬೆಂಗಳೂರು-ದಾವಣಗೆರೆ 1760ರೂ., ಯಶವಂತಪುರ- ಧಾರವಾಡ .2265ರೂ, ಯಶವಂತಪುರ- ಹುಬ್ಬಳ್ಳಿ 2200ರೂ., ಯಶವಂತಪುರ- ದಾವಣಗೆರೆ 1730ರೂ., ದಾವಣಗೆರೆ- ಹುಬ್ಬಳ್ಳಿ 1005ರೂ., ದಾವಣಗೆರೆ- ಧಾರವಾಡ 1075ರೂ., ಹುಬ್ಬಳ್ಳಿ -ಧಾರವಾಡ 690ರೂ.

Leave a Reply

Your email address will not be published. Required fields are marked *