ಉತ್ತರ ಪ್ರದೇಶದ ಸೋನಭದ್ರಾ ಎಂಬ ಗ್ರಾಮದ ಗುಹೆಯೊಂದರಲ್ಲಿ ಯುವತಿಯೊಬ್ಬಳು ಸರ್ಪದಂತೆ ವರ್ತಿಸಿದ್ದಾರೆ. ಮಹಿಳೆ ತನ್ನ ನಾಲಿಗೆಯನ್ನು ಹಾವಿನ ರೀತಿ ಹೊರಚುಮ್ಮುತ್ತಿದ್ದಳು ಮತ್ತು ನೆಲದ ಮೇಲೆ ತೆವೆಯುವ ರೀತಿ ಮಲಗಿದ್ದಳು.ಈಗ ಆ ಯುವತಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಹಾಗಾದ್ರೆ ವಿಷಯ ಏನೆಂದು ತಿಳಿಯೋಣ

ದೊರೆತ ಮಾಹಿತಿಯ ಪ್ರಕಾರ, ಈ ಯುವತಿ ಸೋನ್‌ಭದ್ರಾದ ಕಾನ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಣಿದಿಹ್‌ನಲ್ಲಿರುವ ಗುಪ್ತಾ ಧಾಮ್ ಬೆಟ್ಟದ ಗುಹೆಯಲ್ಲಿ ಸರ್ಪದ ರೂಪದಲ್ಲಿ ಕಾಣಿಸಿಕೊಂಡಿದ್ದಾಳೆ. ಈ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಗುಹೆಯಲ್ಲಿ ಶಿವನ ದೇವಾಲಯವಿದ್ದು, ಅರ್ಚಕರು ಪ್ರತಿದಿನ ಪೂಜೆಗೆ ತೆರಳುತ್ತಾರೆ. ಶಿವರಾತ್ರಿಯಂದು ಗುಹೆಯ ಸುತ್ತ ಜಾತ್ರೆಯನ್ನೂ ನಡೆಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಪದಂತೆ ವರ್ತಿಸುವ ಮಹಿಳೆಯನ್ನು ಕಂಡು ಎಲ್ಲರೂ ಆಶ್ಚರ್ಯಗೊಂಡಿದ್ದಾರೆ.

ಪೋ‌ಷಕರಿಗೆ ಕನಸಿನಲ್ಲಿ ಬಂದು ತಿಳಿಸಿದ್ಲು ವಿಳಾಸ :

ಹೌದು ಕಳೆದ ಮೂರು ತಿಂಗಳಿನಿಂದ ಯುವತಿ ಮನೆಯಿಂದ ನಾಪತ್ತೆಯಾಗಿದ್ದಾಳೆ ಎಂದು ಆ ಯುವತಿಯ ಕುಟುಂಬಸ್ಥರು ಹುಡುಕಾಡುತ್ತಿದ್ದರು. ಕೆಲವು ದಿನಗಳ ಹಿಂದೆ, ಯುವತಿ ತನ್ನ ಕುಟುಂಬದ ಸದಸ್ಯರ ಕನಸಿನಲ್ಲಿ ಬಂದು ತಾನು ಗುಪ್ತ ಪಹಾರಿ ಗುಹೆಯಲ್ಲಿ ಇದ್ದೇನೆ ಎಂದು ಹೇಳಿದ್ದಳು. ಮಹಿಳೆ ತನ್ನ ಕುಟುಂಬ ಸದಸ್ಯರನ್ನು ಅಲ್ಲಿಗೆ ಬಂದು ಕೀರ್ತನೆ ಮಾಡುವಂತೆ ಹೇಳಿದ್ದಳು. ಕನಸಿನಲ್ಲಿ ಹೇಳಿದ ಮಾತನ್ನು ನಂಬಿದ ಯುವತಿಯ ಕುಟುಂಬ ಸದಸ್ಯರು ಗುಪ್ತಾ ಪಹಾರಿ ಬಳಿ ಬಂದಿದ್ದಾರೆ. ಇಲ್ಲಿ ದಿನವಿಡೀ ಮಹಿಳೆಗಾಗಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಅದರ ನಂತರ ಭಾನುವಾರ ರಾತ್ರಿ ಅವರೆಲ್ಲರೂ ಕೀರ್ತನೆ ಮಾಡಲು ಕುಳಿತರು.

ಕುಟುಂಬಸ್ಥರು ಯುವತಿಯನ್ನು ಗುರುತಿಸಿದ್ದಾರೆ;
ಗುಹೆಯ ಪ್ರವೇಶದ್ವಾರದಲ್ಲಿ ಇದ್ದಕ್ಕಿದ್ದಂತೆ ಹುಡುಗಿ ಹೊರಬಂದಳು ಮತ್ತು ಅವಳು ಸರ್ಪದಂತೆ ವರ್ತಿಸುತ್ತಿದ್ದಳು. ಮೊದಮೊದಲು ಜನ ಅದನ್ನು ನೋಡಿ ಭಯಭೀತರಾಗಿ ಹೆದರಿದರು. ಆದರೆ, ಕುಟುಂಬಸ್ಥರು ಹೆದರದೆ ಅಲ್ಲೇ ಕೀರ್ತನೆ ಮಾಡತೊಡಗಿದರು. ಕುಟುಂಬಸ್ಥರು ಯುವತಿಯನ್ನು ತಮ್ಮ ಮಗಳು ಎಂದು ಗುರುತಿಸಿದರು. ಯುವತಿ ಜಾರ್ಖಂಡ್‌ನ ಕರಿವಾಡಿಹ್ ಖರೋಂಧಿ ಪ್ರದೇಶದ ನಿವಾಸಿ. ಯುವತಿ ಹೊರಬಂದಾಗ, ಅವಳನ್ನು ನೋಡಲು ಜನರ ಗುಂಪು ಜಮಾಯಿಸಿತು. ಸಾಕಷ್ಟು ಮಂದಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಮಹಿಳೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಸರ್ಪದಂತೆ ವರ್ತಿಸುತ್ತಿದ್ದ ಹುಡುಗಿಯ ಸುದ್ದಿ ಇಡೀ ಪ್ರದೇಶದಲ್ಲಿ ಕಾಡ್ಗಿಚ್ಚಿನಂತೆ ಹರಡಿತು. ಈ ಶ್ರಾವಣ ಮಾಸದಲ್ಲಿ ಅನೇಕ ಜನರು ಇದನ್ನು ಶಿವನ ಪವಾಡವೆಂದು ನಂಬಿದ್ದಾರೆ, ನಂತರ ಯುವತಿಯನ್ನು ಪೂಜಿಸಲಾಗುತ್ತಿದೆ. ಯುವತಿಯ ಕುಟುಂಬವು ಅವಳನ್ನು ತಮ್ಮ ಮನೆಗೆ ಕರೆದೊಯ್ದರು, ಅಲ್ಲಿ ಅವರು ದಾರಿಯಲ್ಲಿ ಹಲವಾರು ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು.

Leave a Reply

Your email address will not be published. Required fields are marked *