ಕಾರವಾರ: ಗಣೇಶ ಚತುರ್ದಶಿಯ ಹಬ್ಬ ಬಂತು ಅಂದರೆ ಗಣೇಶನ ನೈವೇದ್ಯಕ್ಕೆ ತರತರದ ಚಕ್ಕುಲಿಗಳು ತಯಾರಾಗುತ್ತದೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿಯ ವೈಶಿಷ್ಟ್ಯವೇ ಬೇರೆ.ಗಣೇಶ ಚತುರ್ದಶಿ ಹಬ್ಬದ ಮೊದಲೇ ತರತರದ ಚಕ್ಕುಲಿಗಳು ತಯಾರಾಗುತ್ತದೆ. ಶಿರಸಿಯ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ರೂಢಿಯಲ್ಲಿರುವ ಅಪರೂಪದ ಕಲೆ ಅಂದ್ರೆ ಕೈ ಚಕೋಲಿ ಕಂಬಳ.
ಕೈ ಚೆಕ್ಕುಲಿಯಲ್ಲಿ ಕಂಬಳದಲ್ಲಿ ಯಾವುದೇ ಆಧುನಿಕ ಯಂತ್ರಗಳನ್ನು ಬಳಸದೆ ಹಿಟ್ಟು ತಯಾರಿಸಿ ಕೈಯಲ್ಲಿ ಹದ ಮಾಡಿಕೊಂಡು ಕೈಯಲ್ಲಿ ಚಕ್ಕುಲಿ ಸುತ್ತುವ ಪದ್ಧತಿ ಇದ್ದು ಈ ಕಲೆ ಶಿರಸಿಯ ಸುತ್ತಮುತ್ತ ಹಳ್ಳಿಗಳಲ್ಲಿ ಅನೇಕ ವರ್ಷಗಳಿಂದ ಪದ್ಧತಿ ನಡೆದುಕೊಂಡು ಬಂದಿದೆ.
ಈಗಿನ ಯುವಕರು ಸಹ ಅದನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.ಶಿರಸಿಯ ಹೆಗಡೆಕಟ್ಟಾ,ಹೆಗ್ಗಾರು,ಕಲ್ಮನೆ, ಬಾಳೆಗಡ್ಡೆ ಈ ಭಾಗದ ಗ್ರಾಮೀಣ ಪ್ರದೇಶದಲ್ಲಿ ಇಂದಿಗೋ ರೂಢಿಯಲ್ಲಿದೆ.