ಗುಬ್ಬಿ:- ತಾಲ್ಲೂಕಿನ ಕಡಬ ಹೋಬಳಿ ಬಿಳಿನಂದಿ ಗ್ರಾಮದ ಸ.ನಂ 86 ರಲ್ಲಿ ಅರಣ್ಯ ಇಲಾಖೆಗೆ ಸೇರಿದ ಸುಮಾರು 45 ಎಕರೆ ಭೂಮಿಯಲ್ಲಿನ ಸಾವಿರಾರು ಮರಗಳನ್ನು ರಾತ್ರೋರಾತ್ರಿ ಕಡಿದು ಭೂ ಕಬಳಿಕೆ ನಡೆಸಿ 1 ಎಕರೆ ಭೂಮಿಯನ್ನು 5 ಲಕ್ಷ ಹಣಕ್ಕೆ ಬೆಂಗಳೂರಿನ ಭೂ ಮಾಫಿಯಾಗೆ ಮಾರಾಟ ಮಾಡುವ ಹುನ್ನಾರ ನಡೆಸಿದ ಕೆಲವು ಮಂದಿ ಭೂಗಳ್ಳರ ವಿರುದ್ಧ ಗುಬ್ಬಿ ವಲಯ ಅರಣ್ಯಾಧಿಕಾರಿಗಳ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದ್ದು ಒಂದು ಜೆಸಿಬಿ ಯಂತ್ರ ಮತ್ತು ಕಾರು ವಶಪಡಿಸಿಕೊಂಡ ಘಟನೆ ನಡೆದಿದೆ.
ಅರಣ್ಯ ಇಲಾಖೆಗೆ ಸೇರಿದ 45 ಎಕರೆ ಭೂಮಿಯಲ್ಲಿನ ಮರಗಳನ್ನು ಕಡಿದಿದ್ದು ಕೆಲವು ಮಂದಿ ವಿರುದ್ದ ದೂರು ದಾಖಲಿಸಿ ಕೃತ್ಯಕ್ಕೆ ಬಳಸಿದ್ದ ಜೆಸಿಬಿ ಯಂತ್ರ ಮತ್ತು ಕಾರು ಸಿಜ್ ಮಾಡಿದ್ದು ಜೊತೆಗೆ ಯಾವುದೇ ಕಾರಣಕ್ಕೂ ಮಂಜೂರು ಮಾಡುವುದಕ್ಕೆ ಬಿಡುವುದಿಲ್ಲ,
ಅರ್ಜಿಗಳನ್ನು ವಜಾ ಮಾಡುತ್ತೇವೆ ಇದೊಂದು ದೊಡ್ಡ ದಂಧೆಯಾಗಿದ್ದು 5 ಎಕರೆ 10 ಎಕರೆ ಭೂಮಿಯನ್ನು ವಶಪಡಿಸಿಕೊಂಡು ಬೆಂಗಳೂರಿನ ಭೂ ಮಾಫಿಯಾಗೆ ಕೋಟಿಗಟ್ಟಲೆ ಹಣಕ್ಕೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಇಂತಹ ಅಕ್ರಮಕ್ಕೆ ಯಾವುದೇ ಒತ್ತಡ ಬಂದರೂ ಕೂಡ ಬಿಡುವುದಿಲ್ಲ, ಈಗಾಗಲೇ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಚರ್ಚಿಸಿದ್ದು ಭೂಗಳ್ಳರ ಪತ್ತೆ ಮಾಡಿ ಮನೆ ಮನೆಗೆ ತೆರಳಿ ಬಂಧಿಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಎಂ.ಟಿ ಕೃಷ್ಣಪ್ಪ ಮಾತನಾಡಿದ್ದು ಹೀಗೆ.