ಯಾದಗಿರಿ: ಶಹಾಪುರ ಪಟ್ಟಣದ ಪ್ರತಿಷ್ಠಿತ ಡಿ.ಡಿ.ಯು. ಶಾಲೆಯ ವಿದ್ಯಾರ್ಥಿ ಕು. ಚೇತನ್ ತಂದೆ ರಾಮು ರಾಠೋಡ್ 16 ವರ್ಷ ಅನಾರೋಗ್ಯವೆಂದು ಶಾಲಾ ಕೊಣೆಯ ಹಿಂದಿನ ಬೆಂಚ್ ಮೆಲೆ ಮಲಗಿಸಿದ ಶಿಕ್ಷಕರು ವಿಧ್ಯಾರ್ಥಿಗೆ ವಾಂತಿಯಾಗಿದ್ದರೂ, ಆಸ್ಪತ್ರೆಗೆ ಕರೆದುಕೊಂಡು ಹೋಗದೆ ನಿರ್ಲಕ್ಷ್ಯ ವಹಿಸಿದ ಶಾಲೆಯ ಆಡಳಿತ ಮಂಡಳಿ ಎರಡು ಗಂಟೆ ಅದೇ ಬೆಂಚಿನ ಮೇಲೆ ಮಲಗು ಎಂದು ಗದರಸಿದ್ದಾರೆ, ವಿದ್ಯಾರ್ಥಿಗೆ ಎರಡು ಗಂಟೆ ಮಲಗಿಸಿದ ಶಾಲೆಯ ದಿವ್ಯಾ ನಿರ್ಲಕ್ಷ ದೋರಣೆಯಿಂದ ಡಿ.ಡಿ.ಯು 10 ನೇಯ ತರಗತಿಯ ವಿಧ್ಯಾರ್ಥಿ ಚೇತನ ಸಾವು ಅಪ್ಪಿದ ಘಟನೆ ಪ್ರತಿಷ್ಠಿತ ಡಿಡಿಯು ಶಾಲೆಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ,

ಕಳೆದೆರಡು ದಿನಗಳಿಂದಲೂ ಅನಾರೋಗ್ಯವಾಗಿದ್ದ ಚೇತನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕಿರು ಪರೀಕ್ಷೆ ಎಂದು ನಿನ್ನೆ ಪರೀಕ್ಷೆಗೆ ಅಣ್ಣ ಚೇತನ ತಂಗಿ ಪವಿತ್ರ ಹಾಜರಿದ್ದರು. ಪರೀಕ್ಷೆ ಕುಳಿತದ್ದ ಚೇತನ ಪುನಃ ಆಯಾಸಗೊಂಡಾಗ, ಶಿಕ್ಷಕರು ಹಿಂದಿನ ಬೆಂಚಿನ ಮೇಲೆ ಮಲಗಿಸಿದ್ದಾರೆ. ಅಲ್ಲಿ ನಾಲ್ಕು ಬಾರಿ ವಾಂತಿ ಮಾಡಿಕೊಂಡರೂ ಆಡಳಿತ ಮಂಡಳಿ ಆಸ್ಪತ್ರೆಗೆ ಕರೆದುಕೊಂಡು ಹೊಗದೆ ವಾಂತಿಯಾದದನ್ನು, ವಿದ್ಯಾರ್ಥಿ ಆತನಿಂದಲೆ ಸ್ವಚ್ಚತೆ ಮಾಡಿಸಿದ್ದಾರೆ.

ಕನಿಷ್ಠ ಜ್ಞಾನವೂ ಕೂಡ ಇಲ್ಲದ ಆಡಳಿತ ಮಂಡಳಿ ಮತ್ತೆ ಅದೇ ಬೆಂಚ್ ಮೇಲೆ ಮಲಗಿಸಿದ್ದಾರೆ. ಆಗಲೇ ವಿದ್ಯಾರ್ಥಿ ಚೇತನ್ ತೀರಾ ಅಸ್ವಸ್ಥಗೊಂಡ ವಿದ್ಯಾರ್ಥಿ ನಿಶ್ಯಕ್ತಿ ಉಂಟಾಗಿದೆ, ಅದೇ ಶಾಲೆಯ ಕೆಲವು ವಿಧ್ಯಾರ್ಥಿಗಳೊಂದಿಗೆ ಶಿಕ್ಷಕರು ಮಗು ಚೇತನನ್ನು ಹೊತ್ತುಕೊಂಡು ಸಮಿಪದ ಖಾಸಗಿ ಸ್ಪಂದನ ಆಸ್ಪತ್ರೆಗೆ ಕರೆ ತಂದಿದ್ದಾರೆ. ಆಗಲೆ ನನ್ನ ಅಣ್ಣನ ಪ್ರಾಣ ಇರಲಿಲ್ಲ ಸರ್ ಎಂದು ತಂಗಿ ಪವಿತ್ರ ಮಾಧ್ಯಮದವರಿಗೆ ತಿಳಿಸಿದರು.

ಚೇತನ್ ತಂಗಿ ಪವಿತ್ರ ನಮ್ಮ ಅಣ್ಣನಿಗೆ ತೀರಾ ಅನಾರೋಗ್ಯವಾಗಿದ್ದಾನೆ. ಮೋಬೈಲ್ ಕೊಡಿ ಎಂದು ಪರಿಪರಿಯಾಗಿ ಬೇಡಿಕೊಂಡರು ಕೊಡದೆ, ಪರವಾನಿಗೆ ಬೇಕು ಎಂದು ನೆಪ ಹೇಳಿದರು. ಡಿ.ಡಿ.ಯು ಶಾಲೆಯಲ್ಲಿ ಶಿಕ್ಷಕರಿಗೆ ಮುಖ್ಯ ಗುರುಗಳಿಗೆ ಅಂಗಲಾಚಿದರೂ ಯಾರೂ ಕರೆ ಮಾಡಲು ಪೋನ್ ಕೊಡದೆ ಕಾಲಹರಣ ಮಾಡಿದ, ಡಿ.ಡಿ.ಯು ಶಾಲೆಯಲ್ಲಿ ಇರುವ ವಸತಿ ಶಾಲೆಯ ಮಕ್ಕಳಿಗೆ ಪ್ರಾಣಕ್ಕೆ ರಕ್ಷಣೆ ಇಲ್ಲದಂತಾಗಿದೆ.ಇಲ್ಲಿನ ಆಡಳಿತ ಮಂಡಳಿ ಬೇಜವಾಬ್ದಾರಿತನವೇ ಕಾರಣ ಎಂದು ಮೃತ ಕು, ಚೇತನ್ ತಂಗಿ ಕು, ಪವಿತ್ರ ಆರೋಪಿಸಿದ್ದಾಳೆ. ಸರ್ಕಾರಿ ಆಸ್ಪತ್ರೆಯ ಮುಂದೆ ಹೆತ್ತವರ ರೋಧನ, ಆಕ್ರಂದನ ಹೇಳತೀರದಾಗಿದೆ.

Leave a Reply

Your email address will not be published. Required fields are marked *

Latest News