ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಏಕದಿನ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಶ್ರೀಲಂಕಾ ತಂಡದ ಆಲ್ ರೌಂಡರ್ ಆಂಜೆಲೊ ಮ್ಯಾಥ್ಯೂಸ್ ಟೈಮ್ಡ್ ಔಟ್ ಆದ ವಿವಾದದ ಬೆನ್ನಲ್ಲೇ ಶಕೀಬ್ ಅಲ್ ಹಸನ್ ಹೊರಬಿದ್ದಿರುವುದು ಅಚ್ಚರಿ ಮೂಡಿಸಿದೆ. ಆದರೆ ತಂಡದ ಆಡಳಿತ ಮಂಡಳಿ ಗಾಯದ ಕಾರಣ ಅವರು ಹೊರಗುಳಿಯಲಿದ್ದಾರೆ ಎಂದು ತಿಳಿಸಿದೆ.
ಬಾಂಗ್ಲಾದೇಶ ವಿಶ್ವಕಪ್ ನ ಅಂತಿಮ ಲೀಗ್ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದ್ದು, ಈ ಪಂದ್ಯಕ್ಕೆ ಶಕೀಬ್ ಅಲ್ ಹಸನ್ ಅಲಭ್ಯರಾಗಿದ್ದಾರೆ.
ಶಕೀಬ್ ಅಲ್ ಹಸನ್ ಎಡಗೈ ಬೆರಳಿಗೆ ಗಾಯವಾಗಿದ್ದು, ಹಿಂದಿನ ಪಂದ್ಯಗಳಲ್ಲಿ ನೋವು ನಿವಾರಕ ಔಷಧಗಳನ್ನು ಪಡೆದು ಆಡಿದ್ದರು. ಆದರೆ ಮುಂದಿನ ಪಂದ್ಯದಲ್ಲಿ ನೋವಿನ ನಡುವೆ ಆಡುವುದು ಸಾಧ್ಯವಿಲ್ಲ ಎಂದು ತಂಡ ಹೇಳಿದೆ.