ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರದಂದು ಎ.ಚಿತ್ರೆಶ್ ಹೊಸಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಪಕ್ಷದಲ್ಲಿ ಸುಮಾರು ವರ್ಷಗಳಿಂದ ಪ್ರಾಮಾಣಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ದುಡಿಯುತ್ತಿದ್ದು 2024ನೇ ಸಾಲಿನ ಯುವ ಕಾಂಗ್ರೆಸ್ಸಿನ ಚುನಾವಣೆ ರಾಜ್ಯದಲ್ಲಿ ಏಕಕಾಲಕ್ಕೆ ನಡೆಯುತ್ತಿದ್ದು ಚುನಾವಣೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ,
ಈ ಬಾರಿ 2024ರ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಪಾರದರ್ಶಿಕವಾಗಿ ಚುನಾವಣೆ ನಡೆಯಬೇಕೆಂಬುದು ನಮ್ಮೆಲ್ಲರ ನಂಬಿಕೆಯಾಗಿದೆ ಕಾರಣ. ರಾಜೀವ್ ಗಾಂಧಿಯವರ ಕನಸು, ಯುವ ಕಾಂಗ್ರೆಸ್ ಯುವಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿ ಸಂಘಟನೆ ಮಾಡುವುದರೊಂದಿಗೆ ಪಕ್ಷದ ಬೇರನ್ನು ಭದ್ರ ಪಡಿಸುವುದಾಗಿತ್ತು.
ಈ ಸಾಮಾನ್ಯ ಚುನಾವಣೆಯಲ್ಲಿ ಹಣದ ಆಮಿಷವನ್ನು ಹರಿಸೋದರೊಂದಿಗೆ ಯುವ ಕಾಂಗ್ರೆಸ್ ಚುನಾವಣೆ ನಡೆಯುತ್ತಿದೆ ಎಂಬ ಆರೋಪ ಯುವ ಕಾಂಗ್ರೆಸ್ ಸ್ಪರ್ಧಾರ್ಥಿ ಎ. ಚಿತ್ರೆಶ್ ಪತ್ರಿಕಾಗೋಷ್ಠಿಯ ಮೂಲಕ ಶೋಷಿತರ ದಮನಿತರ ದೀನದಲಿತರ ಬಡವರ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷವು ಇದು ಬಂಡವಾಳಶಾಹಿಗಳ ಮುಕ್ತ ವಂಶ ಪರಂಪರೆಯ ರಾಜಕಾರಣಕ್ಕೆ ಬಲಿಯಾಗುತ್ತಿದೆ ಎಂದು ಆರೋಪ ಮಾಡಿದರು,
ಈ ಬಾರಿ ಪಾರದರ್ಶಕವಾಗಿ ಚುನಾವಣೆ ನಡೆಯುವುದೇ ನಮ್ಮ ಮಹಾದಾಸೆಯಾಗಿದೆ ಆದ್ದರಿಂದ ಮಾನ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಇದರ ಕುರಿತು ಪ್ರಾಮಾಣಿಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ನ್ಯಾಯ ಸಿಗಬೇಕಾಗಿದೆ, ತಮ್ಮ ಪ್ರಾಮಾಣಿಕ ಮನದಾಳದ ಮಾತನ್ನು ಪತ್ರಿಕಾಗೋಷ್ಠಿ ಮೂಲಕ ತಿಳಿಸಿದ್ದಾರೆ