ಭಾರತೀಯ ಸಾಹಿತ್ಯವನ್ನು ವಿಶ್ವಮಟ್ಟದಲ್ಲಿ ಪರಿಚಯಿಸಿದ ಗುರುದೇವ್ ರವೀಂದ್ರನಾಥ್ ಠಾಗೋರ್ ಅವರು ಆಗಸ್ಟ್ 07, 1941 ರಂದು ತಮ್ಮ 80 ನೇ ವಯಸ್ಸಿನಲ್ಲಿ ನಿಧನರಾದರು.
*ದೇಶ ಕಂಡ ಶ್ರೇಷ್ಠ ಸಾಹಿತಿಗಳ ಸಾಲಿನಲ್ಲಿ ಮೊದಲಿಗರು ರವೀಂದ್ರನಾಥ ಠಾಗೋರ್* .
ಭಾರತೀಯ ಸಾಹಿತ್ಯದ ಗುರುದೇವ ಎಂದು ಕರೆಸಿಕೊಂಡು ಕವಿ, ಲೇಖಕ, ನಾಟಕಕಾರ, ಪೈಂಟರ್ ಆಗಿ ವಿಶ್ವದಾದ್ಯಂತ ಪರಿಚಿತರಾದ ರವೀಂದ್ರನಾಥ ಠಾಗೋರ್ ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯರು. ಮೇ 07, 1861 ರಂದು ಪಶ್ಚಿಮ ಬಂಗಾಲದ ಕೋಲ್ಕತ್ತಾದಲ್ಲಿ ಜನಿಸಿದರು.
* ನಮ್ಮ ರಾಷ್ಟ್ರಗೀತೆ “ಜನಗಣಮನ” ದ ಜನಕ ಠಾಗೋರ್ ಅಪ್ಪಟ ದೇಶಾಭಿಮಾನಿ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದುದಲ್ಲದೆ ದೇಶದ ಘನತೆಗೆ ಧಕ್ಕೆ ಬಂದಾಗ ತನಗೆ ದೊರಕಿದ ಅತ್ಯುನ್ನತ ಪ್ರಶಸ್ತಿಯನ್ನೇ ಹಿಂದಿರುಗಿಸಿದ ಮಹಾನ್ ಸ್ವಾಭಿಮಾನಿ.*
20ಕ್ಕೂ ಹೆಚ್ಚಿನ ಕವನ ಸಂಕಲನಗಳು, 13 ಕಾದಂಬರಿಗಳು, 80ಕ್ಕೂ ಹೆಚ್ಚಿನ ಕಥಾ ಸಂಕಲನ – ನಾಟಕಗಳು, 70ಕ್ಕೂ ಹೆಚ್ಚಿನ ಪ್ರಬಂಧಗಳನ್ನು ಬರೆದ ರವೀಂದ್ರನಾಥ್ ಠಾಗೋರ್ 20ನೇ ಶತಮಾನದ ಆರಂಭದಲ್ಲಿ ಭಾರತದ ಸಾಹಿತಿಗಳಲ್ಲಿ ಅಗ್ರಗಣ್ಯರಾಗಿ ಮೆರೆದರು. ನಮ್ಮ ರಾಷ್ಟ್ರಗೀತೆಯ ರಚನೆಕಾರರಾಗಿ ನಮ್ಮೆಲ್ಲರಲ್ಲಿ ಪ್ರತಿದಿನ ದೇಶಭಕ್ತಿಯ ಭಾವನೆ ಚಿಮ್ಮಿಸುವ ರವೀಂದ್ರರ ರಚನೆಗಳು ಬಾಂಗ್ಲಾ ಮತ್ತು ಶ್ರೀಲಂಕಾಕ್ಕೂ ರಾಷ್ಟ್ರಗೀತೆಗಳಾಗಿವೆ.