ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಆರೋಪಿಯಾಗಿ ಬಂಧಿಯಾಗಿರುವ ದರ್ಶನ್​ ವಿಚಾರಣಾಧೀನ ಕೈದಿಯಾಗಿ ಬಳ್ಳಾರಿ ಜೈಲು ಸೇರಿದ್ದು. ಆರೋಪಿಗಳ ಕಸ್ಟಡಿ ಅಂತ್ಯಗೊಂಡ ಹಿನ್ನೆ ನಿನ್ನೆ (ಸೆ.17) 24ನೇ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.ಪ್ರತಿಯೊಬ್ಬ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ರು. ವಿಚಾರಣೆ ನಡೆಸಿದ ನ್ಯಾಯಾಧೀಶರು ದರ್ಶನ್​ ಮತ್ತು ಆತನ​ ಗ್ಯಾಂಗ್​ಗೆ ಸೆಪ್ಟೆಂಬರ್ 30ರವರೆಗೂ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಆದೇಶವನ್ನ ಹೊರಡಿಸಿದ್ದಾರೆ.

ನ್ಯಾಯಾಧೀಶರ ವಿಚಾರಣೆ ವೇಳೆ ಪರಪ್ಪನ ಅಗ್ರಹಾರ ಜೈಲಿನಿಂದ ವಿಡಿಯೋ ಕಾನ್ಫೆರೆನ್ಸ್ ನಲ್ಲಿ ಪವಿತ್ರಾ ಗೌಡ ಕೈ ಎತ್ತುವ ಮೂಲಕ ಹಾಜರಾತಿಯನ್ನ ಖಚಿತಪಡಿಸಿದ್ರು. ದರ್ಶನ್ ಪರ ವಕೀಲರು ವಾದ ಮಂಡಿಸುತ್ತಿದ್ದ ವೇಳೆ ನಟಿ ಪವಿತ್ರಾ ಗೌಡ ನ್ಯಾಯಾಧೀಶರಿಗೆ ಏನನ್ನೋ ಹೇಳಲು ಮುಂದಾದ್ರು. ಈ ವೇಳೆ ನೆಟ್ ವರ್ಕ್ ಸಮಸ್ಯೆಯ ಕಾರಣದಿಂದ ಆಡಿಯೋ ಕಟ್ ಆಗಿತ್ತು.

ಮತ್ತೆ ಕನೆಕ್ಟ್ ಮಾಡುವಂತೆ ನ್ಯಾಯಾಧೀಶರು ತಿಳಿಸಿದ್ದು. ವಿಡಿಯೋ ಕನೆಕ್ಟ್ ಆದ ಬಳಿಕ ಪವಿತ್ರಾ ಗೌಡ ಮಾತಾಡಿದ್ರು. ನಮ್ಮ ಕುಟುಂಬದವರನ್ನು ಭೇಟಿ ಮಾಡಲು ಜೈಲಾಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದು ನ್ಯಾಯಾಧೀಶರ ಬಳಿ ನಟಿ ಪವಿತ್ರಾ ಗೌಡ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.

ದರ್ಶನ್ ಅಂಡ್ ಗ್ಯಾಂಗ್ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದು, 24 ನೇ ಎಸಿಎಂಎಂ ಕೋರ್ಟ್​ನಲ್ಲಿ ನ್ಯಾಯಾಧೀಶರು. ಒಬೊಬ್ಬರ ಹೆಸರನ್ನು ಕರೆದು ಈ ವೇಳೆ ದರ್ಶನ್​ ಸೇರಿದಂತೆ ಎಲ್ಲಾ ಆರೋಪಿಗಳು ಕೈ ಎತ್ತುವ ಮೂಲಕ ಹಾಜರಾತಿ ಖಚಿತಪಡಿಸಿದ್ದಾರೆ.

ಈಗಾಗಲೇ ರೇಣುಕಾಸ್ವಾಮಿ ಪ್ರಕರಣದ ಕುರಿತ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದ ತನಿಖಾಧಿಕಾರಿಗಳು ಇಂದು ಪೆಂಡಿಂಗ್ ಇದ್ದ CSFL ರಿಪೋರ್ಟ್ ಅನ್ನು ಸಹ ಕೋರ್ಟ್ ಗೆ ನೀಡಿದ್ದಾರೆ. ಹಾರ್ಡ್ ಡಿಸ್ಕ್ ಹಾಗೂ ಪೆನ್ ಡ್ರೈವ್ ನಲ್ಲಿ ದಾಖಲೆಗಳ ಸಲ್ಲಿಕೆ ಮಾಡಿದ್ದಾರೆ. ಜೊತೆಗೆ ಎಲ್ಲಾ 17 ಆರೋಪಿಗಳಿಗೆ ಕೆಲ ಟೆಕ್ನಿಕಲ್ ಎವಿಡೆನ್ಸ್ ಕೂಡ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ನೀಡಿದ್ದಾರೆ.

ಜೈಲಿನಲ್ಲಿ ನಟ ದರ್ಶನ್ ಅವರನ್ನು ಭೇಟಿಯಾಗಲು ಫ್ಯಾಮಿಲಿ ಹಾಗೂ ಸ್ನೇಹಿತರಿಗೆ ಅವಕಾಶ ಕೊಡ್ತಾ ಇಲ್ಲ ಎಂದು ನಟ ದರ್ಶನ್ ಪರ ವಕೀಲರು ವಾದ ಮಾಡಿದ್ರು. ಕೂಡಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ ಜೊತೆ ಮಾತನಾಡಲು ನ್ಯಾಯಾಧೀಶರು ಮುಂದಾದ್ರು. ಬಳಿಕ ಸ್ನೇಹಿತರು ಹಾಗೂ ಕುಟುಂಬಸ್ಥರ ಭೇಟಿಗೆ ಅವಕಾಶ ನೀಡುವಂತೆ ಜೈಲಾಧಿಕಾರಿಗಳಿಗೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.

ಒಂದು ಪೆನ್ ಡ್ರೈವ್ ಹಾಗೂ ಒಂದು ಹಾರ್ಡ್ ಡಿಸ್ಕ್ ನಲ್ಲಿ CFSL ರಿಪೋರ್ಟ್ ಅನ್ನು ತನಿಖಾಧಿಕಾರಿಗಳು ಕೋರ್ಟ್ ಗೆ ಸಲ್ಲಿಕೆ ಮಾಡಿದ್ದಾರೆ. ಆರೋಪಿ ವಿನಯ್ ಮೊಬೈಲ್ ನ ಮತ್ತೊಮ್ಮೆ FSL ಗೆ ಕಳುಹಿಸಲು ಕೋರ್ಟ್ ಗೆ ಮನವಿ ಮಾಡಲಾಗಿದೆ. ಮೊಬೈಲ್ ನಲ್ಲಿ ಇನ್ನು ಕೆಲ ಸಾಕ್ಷ್ಯಗಳ ಸಂಗ್ರಹ ಆಗಬೇಕಿದೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *