ಚಿಕ್ಕಬಳ್ಳಾಪುರ: ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ನೂತನ ಸಂಸದರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ನಗರದ ಸೂರ್ಯ ಕನ್ವೆನ್ಷನ್ ಹಾಲ್ ನಲ್ಲಿ ಹರಿನಾಥ್ ರೆಡ್ಡಿ ನೇತೃತ್ವದಲ್ಲಿ ಏರ್ಪಡಿಸಲಾಗಿತ್ತು.
ಇನ್ನು ಸಂಸದ ಸುಧಾಕರ್ ಮಾತನಾಡಿ ಬಾಗೇಪಲ್ಲಿ ಕ್ಷೇತ್ರ ಅಭಿವೃದ್ಧಿಯಿಂದ ವಂಚಿತವಾಗಿದೆ. ಮೂರು ಬಾರಿ ಗೆದ್ದಾಗ ಶಾಸಕ ಸುಬ್ಬಾರೆಡ್ಡಿ ಮಂತ್ರಿ ಸ್ಥಾನ ಸಿಗಲಿದೆ ಎಂದು ಕೊಡಿದ್ದೆ ಆದರೆ ಸಿಗಲಿಲ್ಲಾ ಇದು ಚಿಂತಾಮಣಿ ಪಾಲಾಯ್ತು ಇದನ್ನು ಪ್ರಶ್ನಿಸಲಿಲ್ಲಾ ಕನಿಷ್ಠ ಅನುದಾನವನ್ನು ತಂದಿಲ್ಲಾ, ಪ್ರತಿಭಟನೆ ನಡೆಸಲಿಲ್ಲಾ. ಶಾಸಕ ಸುಬ್ಬಾರೆಡ್ಡಿ ಈಗಲಾದ್ರು ನಿದ್ದೆಯಿಂದ ಎದ್ದೇಳಿ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಬೇಕು ಇಲ್ಲವಾದರೆ ಮುಂದಿನ ಚುನಾವಣೆ ಯಲ್ಲಿ ನೀವು ಖಂಡಿತವಾಗಿ ಮನೆಗೆ ಹೋಗುತ್ತೀರಾ ಎಂದು ಆರೋಪ ಮಾಡಿದರು.
ಇನ್ನೂ ಪೊಲೀಸ್ ಮುಂದೆ ಇಟ್ಟು ರಾಜಕೀಯ ಮಾಡಲು ಮುಂದೆ ಹೋದ್ರೆ ನಾವು ಸುಮ್ಮನೆ ಇರಲ್ಲಾ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಸರ್ಕಾರ ಶಾಶ್ವತ ಅಲ್ಲಾ ಪೊಲೀಸರು ಶಾಶ್ವತವಾಗಿ ಇರಬೇಕಾದ್ರೆ ಜನರ ಸೇವೆ ಮಾಡಿ, ಸುಳ್ಳ ಸುಳ್ಳು ಕೇಸ್ ಗಳನ್ನು ಹಾಕಿ ಮುಂದಾಗಬೇಡಿ ಎಂದು ತಿಳಿಸಿದರು ಇದು ಪೊಲೀಸರ ಕೆಲಸ ಅಲ್ಲಾ ನೀವು ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ತಿಳಿಸಿದರು