ಹುಬ್ಬಳ್ಳಿ: ನಗರದ ಎಸ್‌ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಕಿಡ್ನಾಪ್ ಪ್ರಕರಣ ಸುಖಾಂತ್ಯಗೊಂಡಿದೆ. ಹುಬ್ಬಳ್ಳಿಯ ಸಿಲ್ವರ್ ಟೌನ್ ಕ್ರಾಸ್ ಬಳಿ ಇರುವ ಸೆಂಟ್ ಪಾಲ್ಸ್ ಶಾಲೆಯ ಶರಣು ತೇಜಿ ಎನ್ನುವ ವಿದ್ಯಾರ್ಥಿಯನ್ನು ದುಷ್ಕರ್ಮಿಗಳು ಕಿಡ್ನಾಪ್ ಮಾಡಿದ್ದರು. ಬೆಳಿಗ್ಗೆ ಶಾಲೆಯ ಮುಂದುಗಡೆ ಬಂದು ದ್ವಿಚಕ್ರವಾಹದಲ್ಲಿ ಕಿಡ್ನಾಪ ಮಾಡಿಕೊಂಡು ಪರಾರಿಯಾಗಿದ್ದರು. ವಿಷಯ ತಿಳಿಯುತ್ತಿದಂತೆ ಪೊಲೀಸರು ಅಲರ್ಟ್ ಆಗಿ ಕಾರ್ಯಾಚರಣೆಗೆ ಇಳಿಯುತ್ತದಂತೆ ಅಪಹರಣಕಾರರು ಬಾಲಕನನ್ನು ಶಾಲೆಯ ಬಳಿಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಅಪಹರಣಗೊಳ್ಳಗಾಗಿದ್ದ
ಶರಣು ತೇಜಿ ರೈತ ಹೋರಾಟಗಾರ ಸಿದ್ದಣ್ಣ ತೇಜಿಯವರ ಎರಡನೇ ಮಗನಾಗಿದ್ದಾನೆ.
ಈಕುರಿತಂತೆ ಹು-ಧಾ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ ಪ್ರತಿಕ್ರಿಯೆ ನೀಡಿದ್ದು, ಗೋಕುಲ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಕಿಡ್ನಾಪ್ ಆಗಿದೆ ಅನ್ನೋ ಮಾಹಿತಿ ಬಂದಿದೆ. ವಿದ್ಯಾರ್ಥಿ ಕಿಡ್ನಾಪ ಮಾಡಿ ಮರಳಿ ಶಾಲೆಯ ಬಳಿ ಬಿಟ್ಟು ಹೋಗಿದ್ದಾರೆ. ಆ ವಿದ್ಯಾರ್ಥಿ ಏನು ಹೇಳ್ತಾನೆ ಅನ್ನೋದನ್ನ ಕೇಳಬೇಕು.
ಪೋಷಕರಿಗೂ ಸಹ ಠಾಣೆಗೆ ಬಂದು ದೂರು ಕೊಡಲು ಹೇಳಿದ್ದೇನೆ. ದೂರು ನೀಡಿದ್ರೆ ಪ್ರಕರಣ ದಾಖಲು ಮಾಡಿಕೊಂಡು ವಿಚಾರಣೆ ಮಾಡಲಾಗುತ್ತದೆ ಎಂದರು.