ಕರ್ನಾಟಕದ 9ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ, ಆರೆಂಜ್ ಅಲರ್ಟ್ ಘೊಷಿಸಲಾಗಿದೆ.
ಮಳೆ
ಕರ್ನಾಟಕದ 9ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ, ಆರೆಂಜ್ ಅಲರ್ಟ್ ಘೊಷಿಸಲಾಗಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ತುಮಕೂರಿನಲ್ಲೂ ಅಧಿಕ ಮಳೆಯಾಗಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಚಾಮರಾಜನಗರ ಜಿಲ್ಲೆಗಳಲ್ಲೂ ಮಳೆಯಾಗಲಿದೆ.
ಪಣಂಬೂರು, ಕೋಟ, ಕ್ಯಾಸಲ್ ರಾಕ್, ಶಿರಾಲಿ, ಗೇರುಸೊಪ್ಪ, ಮಂಗಳೂರು, ಉಡುಪಿ, ಕೊಲ್ಲೂರು, ಹೊನ್ನಾವರ, ಕಾರವಾರ, ಮಂಕಿ, ಲಿಂಗನಮಕ್ಕಿ, ಶೃಂಗೇರಿಯಲ್ಲಿ ಅಧಿಕ ಮಳೆಯಾಗಿದೆ. ಅಂಕೋಲಾ, ಸಿದ್ದಾಪುರ, ಕುಂದಾಪುರ, ಕಮ್ಮರಡಿ, ಸುಬ್ರಹ್ಮಣ್ಯ, ಮುಲ್ಕಿ, ಕದ್ರಾ, ಕುಮಟಾ, ಸುಳ್ಯ, ಬೇಲಿಕೇರಿ, ಗೋಕರ್ಣ, ಭಾಲ್ಕಿ, ತಾಳಗುಪ್ಪ, ಮಂಚಿಕೆರೆ, ಜಾಲಮನೆ, ಬೆಳ್ತಂಗಡಿ,ಮಾಣಿ, ಪುತ್ತೂರು, ಧರ್ಮಸ್ಥಳ, ಸವಣೂರು, ಖಜೂರಿ, ಕೊಪ್ಪ, ಹಳಿಯಾಳ, ಮುಂಡಗೋಡ, ನರಗುಂದ,ಶಿರಹಟ್ಟಿ, ಬೆಳ್ಳಟ್ಟಿ, ಕುಂದಗೋಳ, ಅಡಕಿ, ರಾಜೇಶ್ವರ, ನಿಟ್ಟೂರು,ಹಿರೇಕೆರೂರು, ಹೆಸರಘಟ್ಟ, ಜಯಪುರ, ಕಳಸ, ಬೆಂಗಳೂರು ನಗರ, ಸುಂಟಿಕೊಪ್ಪ, ಮೂರ್ನಾಡು, ಹುಂಚದಕಟ್ಟೆ, ಆನವಟ್ಟಿ, ಅಕ್ಕಿಆಲೂರು, ಹಾವೇರಿ, ಗುತ್ತಲ, ಹಾನಗಲ್, ರಾಣೆಬೆನ್ನೂರು, ಹುಣಸಗಿ, ಸೈದಾಪುರ, ಮುಧೋಳ, ಸೇಡಂ, ಚಿಂಚೋಳಿ, ಹುಬ್ಬಳ್ಳಿ, ಅಣ್ಣಿಗೆರೆ, ಬೈಲಹೊಂಗಲ, ಪೊನ್ನಂಪೇಟೆ, ವಿರಾಜಪೇಟೆ, ಸೋಮವಾರಪೇಟೆ, ಮಾಲೂರು, ಬಾಳೆಹೊನ್ನೂರು, ದಾವಣಗೆರೆ, ಭದ್ರಾವತಿ, ಸರಗೂರಿನಲ್ಲಿ ಮಳೆಯಾಗಿದೆ.
ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದೆ, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಎಚ್ಎಎಲ್ನಲ್ಲಿ 28.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 28.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 28.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.