ತುರುವೇಕೆರೆ: ರಾಜ್ಯ ಸರ್ಕಾರ ರಾಜಕಾರಣವನ್ನು ಬಿಟ್ಟು ಕೂಡಲೇ ಸಂಪುಟ ಸಭೆ ಕರೆದು ಸುಪ್ರಿಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ನಿವೃತ್ತ ಪ್ರಾಂಶುಪಾಲ, ಸಾಹಿತಿ ಬೆಳಗೆರೆಕೃಷ್ಣಮೂರ್ತಿ ಒತ್ತಾಯಿಸಿದರು.ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಸೋಮವಾರ ಪ್ರೊ.ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಆದಿಜಾಬವ ಮಹಾಸಭಾ, ಛಲವಾದಿ ಮಹಾಸಭಾ, ರೈತ ಸಂಘ ಹಾಗೂ ಪ್ರಗತಿ ಪರ ಸಂಘಟನೆ ಗಳ ಒಕ್ಕೂಟ ದಿಂದ ಒಳಮೀಸಲಾತಿ ಜಾರಿಗಾಗಿ ಹಮ್ಮಿಕೊಂಡಿದ್ದ ತಮಟೆ ಚಳುವಳಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಒಳ ಮೀಸಲಾತಿಯ ಜಾರಿಗಾಗಿ ರಾಜ್ಯಾದ್ಯಂತ ಹೋರಾಟಗಳನ್ನು ತೀವ್ರಗೊಳಿಸಬೇಕಿದೆ.

ಸುಮಾರು 20 ವರ್ಷಗಳಿಂದ ದಲಿತ ಸಂಘಟನೆಗಳು ಒಳ ಮೀಸಲಾತಿಗಾಗಿ ಹೋರಾಟ ಮಾಡುತ್ತಾ ಬಂದಿವೆ. ಅಂತಿಮವಾಗಿ ಸುಪ್ರಿಂಕೋರ್ಟ್ ರಾಜ್ಯ ಸರ್ಕಾರಗಳಿಗೆ ನೀಡುವಂತೆ ಸೂಚನೆ ನೀಡಿ ಆದೇಶಿಸಿದೆ. ಆದರೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ. ಸುಮಾರು ತಿಂಗಳು ಕಳೆದರೂ ಜಾರಿ ಮಾಡದೇ ಮೀನಾ ಮೇಷ ಎಣಿಸುತ್ತಿವೆ. ನಿಮ್ಮ ರಾಜಕಾರಣ ನೀವು ಮಾಡಿಕೊಳ್ಳಿ ನಮ್ಮ ಊಟ ನಾವು ಹಂಚಿಕೊಂಡು ತಿನ್ನಲು ಬಿಡಿ ಇದರಲ್ಲಿ ರಾಜಕಾರಣ ಹುಡಕಬೇಡಿ ಎಂದು ಮನವಿ ಮಾಡಿ ಕೂಡಲೇ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಡಿ.ಎಸ್ ಎಸ್. ತಾಲೂಕು ಸಂಚಾಲಕ ಮಾತನಾಡಿ ತಾಲೂಕಿನ ಎಲ್ಲಾ ದಲಿತ ಕಾಲೋನಿಗಳಲ್ಲಿ ಕೂಡಲೇ ಸಮರ್ಪಕವಾಗಿ ಸ್ಮಶಾನವನ್ನು ಮಂಜೂರು ಮಾಡಬೇಕು, ಪಟ್ಟಣದಲ್ಲಿ ಡಾ.ಅಂಬೇಡ್ಕರ್ ಭವನವನ್ನು ನಿರ್ಮಾಣ ಮಾಡಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಇ -ಸ್ವತ್ತು ಮಾಡಿಸಲು ಸಾರ್ವಜನಿಕರ ಅಲೆದಾಟವನ್ನು ತಪ್ಪಿಸಬೇಕು. ತಾಲೂಕು ಸಾರ್ವಜನಕ ಸರ್ಕಾರಿ ಆಸ್ಪತ್ರೆ ನುರಿತ ವೈದ್ಯರನ್ನು ನೇಮಕ ಮಾಡಬೇಕು ಎಂದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಮಟೆ ಬಾರಿಸಿ ಪಟ್ಟಣದ ಮುಖ್ಯ ರಸ್ತೆಯ ಮೂಲಕ ಮೆರವಣಿಗೆ ಮಾಡಿ ಸರ್ಕಾರದ ವಿರುದ್ದವಾಗಿ ಘೋಷಣೆ ಕೂಗುತ್ತಾ ತಾಲೂಕು ಕಚೇರಿವರೆಗೂ ಪ್ರತಿಭಟನಾಕಾರರು ಆಗಮಿಸಿದರು. ಪ್ರತಿಭಟನೆ ನಂತರ ತಹಶೀಲ್ದರ್ ಎನ್.ಎ.ಕುಂ.ಇ ಅಹಮದ್ ಗೆ ಮನವಿ ಪತ್ರ ನೀಡಿದರು.

ಪ್ರತಿಭಟನೆಯಲ್ಲಿ ಅದಿಜಾಂಬವ ತಾಲೂಕು ಅಧ್ಯಕ್ಷ ವಿ.ಟಿ.ವೆಂಕಟರಾಮಯ್ಯ, ರೈತ ಸಂಘದ ಅದ್ಯಕ್ಷ ಶ್ರೀನಿವಾಸ್ ಗೌಡ, ಸಿಐಟಿಯು ಸತೀಶ್, ಪಟ್ಟಣ ಪಂಚಾಯಿತಿ ಸದಸ್ಯ ಚಿದಾನಂದ್, ಡಿ.ಎಸ್.ಎಸ್ ಮುಖಂಡರಾದ ಶಾಂತಕುಮಾರ್, ನರಸಿಂಹರಾಜು, ಗೊಪಾಲ್, ಲಾವಣ್ಯ, ಲಕ್ಷ್ಮೀದೇವಮ್ಮ, ದಯಾನಂದ್, ರಾಘು, ಸುಬ್ರಮಣ್ಯ, ಗುರುಧತ್, ಕೆಂಪಣ್ಣ, ಗಂಗರಾಜು, ಕೀರ್ತೀ, ರಂಗಸ್ವಾಮಿ, ಮೂರ್ತಿ, ಮುಸ್ಲಿಂ ಮುಖಂಡ ಅಬ್ಜಲ್, ತಾಲೂಕು ಮುಖಂಡರಾದ ಡಿ.ಆರ್.ಲಕ್ಷ್ಮೀಶ,  ಗೊಂವಿಂದರಾಜು, ಪ್ರವೀಣ್, ಶಾಂತಪ್ಪ, ಶಿವನಂಜಪ್ಪ, ಬೋರಪ್ಪ, ರಾಮಚಂದ್ರ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

Latest News