ತುರುವೇಕೆರೆ: ತಾಲೂಕಿನ ಮಾಯಸಂದ್ರ ಪಶು ಆಸ್ಪತ್ರೆ ಆವರಣದಲ್ಲಿ ಇಂದು ಕಲ್ಪತರು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ಇಂದು 2023 -24ನೇ ಸಾಲಿನಲ್ಲಿ ಮೂರನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಆಯೋಜಿಸಲಾಯಿತು,

ಈ ಕಾರ್ಯಕ್ರಮದ ಉದ್ಘಾಟನೆಯನ್ನು ತೆಂಗು ಮತ್ತು ಅಡಿಕೆ ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷರಾದ ಎನ್ ಆರ್ ಜಯರಾಮ್ ಅವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ನಂತರ ಮಾತನಾಡಿದ ಅವರು ನಮ್ಮ ಈ ಭಾಗದಲ್ಲಿ ಕಲ್ಪತರು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ಮೂರನೇ ವರ್ಷಕ್ಕೆ ಕಾಲಿಟ್ಟಿರೋದು ನಮ್ಮೆಲ್ಲರಿಗೂ ಸಂತಸದ ಕ್ಷಣ,ಸಹಕಾರ ಸಂಘಗಳನ್ನು ನಡೆಸುವುದು ಬಹಳ ಕಷ್ಟಕರ ಸಂಗತಿ ಆದರೂ ಸಹ ಸುಮಾರು 500 ಸದಸ್ಯತ್ವ ಉಳ್ಳ ಈ ಸಂಘ ಕೇವಲ ಮೂರೇ ವರ್ಷದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯುತ್ತದೆ ಅಂದರೆ ಅದರಲ್ಲಿರುವ ಕಾರ್ಯಕಾರಿ ಮಂಡಳಿ ಸದಸ್ಯರುಗಳು ಕುರಿ ಸಾಕಾಣೆದಾರರಿಗೆ ಎಷ್ಟರಮಟ್ಟಿಗೆ ಅನುಕೂಲವಾಗುವ ರೀತಿಯಲ್ಲಿ ಮನಮುಟ್ಟುವಂತೆ ಮನವೊಲಿಸಿ ಇಂತಹ ಸಂಘಗಳಿಂದ ಯಾವೆಲ್ಲ ಅನುಕೂಲವಾಗುವುದನ್ನು ಕುರಿ ಮತ್ತು ಉಣ್ಣೆಯ ಉತ್ಪಾದನೆಯ ಬಗ್ಗೆ ಜೊತೆಗೆ ಈ ಸಂಘದ ಕಾರ್ಯನಿರ್ವಹಣೆಯ ಬಗ್ಗೆ ರೈತರಿಗೆ ತಿಳಿಸಿದೆ,

ಇದರ ಜೊತೆಗೆ ನಮ್ಮ ರೈತರು ಕೂಡ ತಾಳ್ಮೆ ಸಹನೆ ಜೊತೆಗೆ ನಮ್ಮ ರೈತರು ಬುದ್ಧಿವಂತರು ಕೂಡ ಒಂದು ಮೂಕ ಪ್ರಾಣಿಯನ್ನು ಸಾಕುವಾಗ ಯಾವೆಲ್ಲ ಕ್ರಮಗಳನ್ನ ಅನುಸರಿಸಿ ಪ್ರಾಣಿಗಳ ಹಾಗೂ ಹೋಗುಗಳನ್ನು ಗಮನಿಸಿ ಅವುಗಳಿಗೆ ಆರೋಗ್ಯದ ಸಮಸ್ಯೆ ಆದರೆ ಸರಿಯಾದ ಸಮಯಕ್ಕೆ ಪಶು ವೈದ್ಯರನ್ನ ಕರೆಯಿಸಿ ಚಿಕಿತ್ಸೆಯನ್ನು ಕೊಡಿಸಿ ಉಪಚರಿಸಲು ತಾಳ್ಮೆ ಸಹನೆ ಬುದ್ಧಿವಂತಿಕೆ ಬಹಳ ಮುಖ್ಯ ಅದು ನಮ್ಮ ಕುರಿ ಸಾಕಾಣೆದಾರರ ರೈತರ ಬಳಿ ಇದೆ ಎಂದರು, ಇದಾದ ನಂತರ ನಿವೃತ್ತ ಜಾನುವಾರುಗಳ ಅಧಿಕಾರಿ ಹಾಗೂ ತಾಂತ್ರಿಕ ಸಲಹೆಗಾರರಾದ ವೆಂಕಟೇಗೌಡರು ಪ್ರಾಸ್ತಾವಿಕ ನುಡಿಯೊಂದಿಗೆ ಮತ್ತು ಮುಖ್ಯ ಅತಿಥಿಗಳಾಗಿ ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿಗಳಾದ ಡಾಕ್ಟರ್ ರೇವಣ್ಣ ಸಿದ್ದಪ್ಪ, ಡಾಕ್ಟರ್ ಆರ್ ಸಿ ಪುಟ್ಟರಾಜು, ಅವರು ಮಾತನಾಡಿ ಸರ್ಕಾರದಿಂದ ಕುರಿ ಸಾಕಾಣೆದಾರರಿಗೆ ಯಾವೆಲ್ಲ ಅನುಕೂಲಗಳು ಉದಾಹರಣೆಗೆ ಅಮೃತ ಕುರಿಗಾಹಿ ಯೋಜನೆ,

ಮುಖ್ಯಮಂತ್ರಿ ಅನುಗ್ರಹ ಯೋಜನೆ ಹೀಗೆ ಇನ್ನೂ ಅನೇಕ ಯೋಜನೆಗಳಿಂದಾಗಿ ಕುರಿ ಸಾಕಾಣೆದಾರರು ಅನುದಾನಗಳನ್ನು ಬಳಸಿಕೊಂಡು ಇದರ ಪ್ರಯೋಜನ ಪಡೆದುಕೊಳ್ಳಬೇಕು ಜೊತೆಗೆ ಕುರಿ ಸಾಕಾಣೆದಾರರು ತೆಗೆದುಕೊಂಡಿರುವ ಸಾಲವನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ ಈ ಸಂಘದ ಸ್ಥಾನಮಾನವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದು, ಇನ್ನೂ ದೊಡ್ಡ ಮಟ್ಟದ ಸರ್ಕಾರದ ಅನುದಾನವನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿಕೊಟ್ಟರು, ಇದೇ ವೇಳೆ ಈ ಕಾರ್ಯಕ್ರಮದಲ್ಲಿ ಹಲವು ಪಶು ಔಷಧ ತಯಾರಿಕಾ ಕಂಪನಿಗಳು ಹಾಗೂ ಪಶು ಔಷಧಿ ಅಂಗಡಿಗಳ ಮಾಲೀಕರು ಸಹ ಭಾಗಿಯಾಗಿದ್ದು, ಕೆಲ ಗ್ರಾಮ ಪಂಚಾಯಿತಿಯ ಸದಸ್ಯರು ಉಪಸ್ಥಿತರಿದ್ದು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು,

ಇನ್ನು ಈ ಸಂಘವನ್ನು ಮೂರನೇ ವರ್ಷಕ್ಕೆ ಕೊಂಡೊಯ್ಯಲು ಕಾರ್ಯಕಾರಿ ಮಂಡಳಿ ಸದಸ್ಯರುಗಳಾದ ಕೆಂಪೇಗೌಡರು ಅಧ್ಯಕ್ಷರು, ಎಂಎಸ್ ಶಿವಕುಮಾರ್ ಉಪಾಧ್ಯಕ್ಷರು, ನಿರ್ದೇಶಕರುಗಳಾದ ಆನಂದ , ಗಂಗಾಧರಯ್ಯ, ಹನುಮಂತಗೌಡರು, ಕೃಷ್ಣಮೂರ್ತಿ, ಲಕ್ಕೇಗೌಡರು, ಲಕ್ಷ್ಮಣ, ಮಹಾಲಿಂಗಯ್ಯ, ವಿ ಜಿ ನಾಗರಾಜು, ಶ್ರೀಮತಿಎಚ್ಎಸ್ ಶಾಂತಮ್ಮ, ಶ್ರೀಮತಿ ಶಬೀನ ಹಾಗೂ ನೂರಾರು ಸಂಘದ ಸದಸ್ಯರು ಜೊತೆಗೆ ಮುಖ್ಯ ಅತಿಥಿಗಳಾಗಿ ಕೆ ಎಮ್ ಗಿಡ್ಡಯ್ಯ, ಈರುಳ್ಳಿ ಶಿವಣ್ಣ, ನಂಜುಂಡಪ್ಪ, ಮಂಜಣ್ಣ, ಶ್ರೀನಿವಾಸ್, ಚಂದ್ರ ಕುಮಾರ್, ಅರುಣ್ ಕುಮಾರ್, ಕುಮಾರಸ್ವಾಮಿ, ಶ್ರೀಮತಿ ನೇತ್ರಾವತಿ, ಡಾ// ಬಿ ಆರ್ ಶಿವಕುಮಾರ್ ಅಂತರಾಷ್ಟ್ರೀಯ ಕಲಾವಿದರು, ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *