ಹುಬ್ಬಳ್ಳಿ: ಕಳಸಾ ಬಂಡೂರಿ, ಮಹದಾಯಿ ಹಾಗೂ ಉತ್ತರ ಕರ್ನಾಟಕ ಭಾಗದ ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಈಗಾಗಲೇ ಕೇಂದ್ರ ಸಚಿವರಿಗೆ ಹಾಗೂ ವಿರೋಧ ಪಕ್ಷದ ನಾಯಕರಿಗೆ ಹಾಗೂ ರಾಜ್ಯ ಸರ್ಕಾರಕ್ಕೂ‌ ಮನವಿ ಸಲ್ಲಿಸಿರುವ ರೈತರು ಈಗ ಮಹತ್ವದ ಸಭೆಯ ಮೂಲಕ ಮುಂದಿನ ನಿರ್ಧಾರಕ್ಕೆ ಅಣಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಮತ್ತಷ್ಟು ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲು ರೈತ ಮುಖಂಡ ಕುರುಬೂರು ಶಾಂತಕುಮಾರ್ ಹಾಗೂ ವಿರೇಶ ಸೊಬರದಮಠ ನೇತೃತ್ವದಲ್ಲಿ ರೈತರ ಸಭೆ ನಡೆಸಲಾಯಿತು.

ಹೌದು.. ಹುಬ್ಬಳ್ಳಿಯ ಸರ್ಕಿಟ್ ಹೌಸ್ ನಲ್ಲಿಂದು ಉತ್ತರ ಕರ್ನಾಟಕ ಭಾಗದ ವಿವಿಧ ಸಂಘಟನೆಯ ಸಹಯೋಗದೊಂದಿಗೆ ಹೋರಾಟ ಮಾಡಲು ನಿರ್ಧಾರ ಮಾಡಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಮಹದಾಯಿ, ಕಳಸಾ ಬಂಡೂರಿ ಹೋರಾಟ ನಡೆಯುತ್ತಲೇ ಬಂದಿದೆ. ಸರ್ಕಾರ ಮಾತ್ರ ಮೂಗಿಗೆ ತುಪ್ಪ ಸವರುವ ಕಾರ್ಯವನ್ನು ಮಾಡುತ್ತಿದೆ. ಅಲ್ಲದೇ ರೈತರ ಮೇಲೆ ಕೇಸ್ ಮಾಡುವುದು ಕೋರ್ಟ್ ಅಲೆದಾಡಿಸುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯವನ್ನು ಮಾಡಲು ಮುಂದಾಗಿದ್ದಾರೆ.

ಈಗಾಗಲೇ ಕಳಸಾ ಬಂಡೂರಿ ಮಹದಾಯಿ ಸಂಬಂಧಿಸಿದಂತೆ ಕೇಂದ್ರದ ಸಚಿವರಿಗೆ ಹಾಗೂ ವಿರೋಧ ಪಕ್ಷದವರಿಗೂ ಮನವಿ ಮಾಡಿದ್ದು, ಇಷ್ಟು ದಿನಗಳಲ್ಲಿ ಮಾಡುವ ಹೋರಾಟಕ್ಕೆ ಹೊಸ ಅಧ್ಯಾಯವನ್ನು ಬರೆಯುವ ಸದುದ್ದೇಶದಿಂದ ಮತ್ತೊಂದು ನಿರ್ಧಾರವನ್ನು ಕೈಗೊಳ್ಳಲು ಮಹತ್ವದ ಸಭೆಯನ್ನು ಹತ್ತು ಜಿಲ್ಲೆಯ ರೈತ ಮುಖಂಡರ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿಯಿತು

Leave a Reply

Your email address will not be published. Required fields are marked *