ICC World Cup Qualifier: ಭಾರತದಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್ಗೆ ಈಗಾಗಲೇ 8 ತಂಡಗಳು ಎಂಟ್ರಿಕೊಟ್ಟಿವೆ. ಇನ್ನುಳಿದ 2 ಸ್ಥಾನಗಳಿಗಾಗಿ ಬರೋಬ್ಬರಿ 10 ತಂಡಗಳು ಕ್ವಾಲಿಫೈಯರ್ ಸುತ್ತಿನಲ್ಲಿ ಕಣಕ್ಕಿಳಿಯುತ್ತಿವೆ.
ಅಕ್ಟೋಬರ್ ಹಾಗೂ ನವೆಂಬರ್ನಲ್ಲಿ ಭಾರತದಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್ಗೆ (World Cup 2023) ಈಗಾಗಲೇ 8 ತಂಡಗಳು ಎಂಟ್ರಿಕೊಟ್ಟಿವೆ. ಇನ್ನುಳಿದ 2 ಸ್ಥಾನಗಳಿಗಾಗಿ ಬರೋಬ್ಬರಿ 10 ತಂಡಗಳು ಕ್ವಾಲಿಫೈಯರ್ ಸುತ್ತಿನಲ್ಲಿ (ICC World Cup Qualifier) ಕಣಕ್ಕಿಳಿಯುತ್ತಿವೆ. ಏಕದಿನ ವಿಶ್ವಕಪ್ಗೆ (ODI World Cup) ಎಂಟ್ರಿಕೊಡಲು ನಾಲ್ಕು ವರ್ಷಗಳಿಂದ ನಡೆದ ಈ ಪೈಪೋಟಿಯಲ್ಲಿ ಬರೋಬ್ಬರಿ 31 ತಂಡಗಳು ಭಾಗಿಯಾಗಿದ್ದವು. ಇದೀಗ ಅಂತಿಮವಾಗಿ 10 ತಂಡಗಳ ಅರ್ಹತೆಯೊಂದಿಗೆ ವಿಶ್ವ ಸಮರ ಆರಂಭವಾಗಲಿದೆ. ಅರ್ಹತ ಸುತ್ತಿನಲ್ಲಿ ಆಡಲ್ಲಿರುವ ಹತ್ತು ತಂಡಗಳನ್ನು ತಲಾ ಐದು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ವೆಸ್ಟ್ ಇಂಡೀಸ್, ಶ್ರೀಲಂಕಾ, ಐರ್ಲೆಂಡ್, ಜಿಂಬಾಬ್ವೆ, ನೆದರ್ಲ್ಯಾಂಡ್ಸ್, ಒಮನ್, ಸ್ಕಾಟ್ಲೆಂಡ್, ಯುಎಇ, ನೇಪಾಳ ಮತ್ತು ಯುಎಸ್ಎ ಈವೆಂಟ್ನಲ್ಲಿ ಆಡುವ ಹತ್ತು ತಂಡಗಳಾಗಿದ್ದು, ಇವುಗಳನ್ನು ಗುಂಪು ಎ ಮತ್ತು ಗುಂಪು ಬಿ ಎಂದು ವಿಂಗಡಿಸಲಾಗಿದೆ.
ಗ್ರೂಪ್ ‘ಎ’ ನಲ್ಲಿ ಜಿಂಬಾಬ್ವೆ, ನೇಪಾಳ, ನೆದರ್ಲ್ಯಾಂಡ್ಸ್, ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಸ್ಥಾನ ಪಡೆದಿವೆ.
ಹಾಗೆಯೇ ಗ್ರೂಪ್ ‘ಬಿ’ ಯಲ್ಲಿ ಶ್ರೀಲಂಕಾ, ಐರ್ಲೆಂಡ್, ಓಮನ್, ಸ್ಕಾಟ್ಲೆಂಡ್ ಮತ್ತು ಯುಎಇ ಸೇರಿವೆ
World Cup 2023: ಏಕದಿನ ವಿಶ್ವಕಪ್ನಿಂದ ನ್ಯೂಜಿಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಔಟ್..!
ಎಷ್ಟು ತಂಡಗಳು ಅರ್ಹತೆ ಪಡೆಯಬಹುದು?
ಈ ಹತ್ತು ತಂಡಗಳಲ್ಲಿ ಕೇವಲ 2 ತಂಡಗಳು ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ನಡೆಯುವ ಮುಖ್ಯ ವಿಶ್ವಕಪ್ ಪಂದ್ಯಾವಳಿಗೆ ಅರ್ಹತೆ ಪಡೆಯುತ್ತವೆ. ಈ ಎಲ್ಲಾ ತಂಡಗಳು ತಮ್ಮದೇ ಆದ ಗುಂಪಿನ ತಂಡಗಳ ವಿರುದ್ಧ ರೌಂಡ್-ರಾಬಿನ್ ಮಾದರಿಯಲ್ಲಿ ಆಡುತ್ತವೆ. ಆದ್ದರಿಂದ ಗುಂಪು ಹಂತದಲ್ಲಿ ಪ್ರತಿಯೊಂದು ತಂಡವೂ ತಲಾ ನಾಲ್ಕು ಪಂದ್ಯಗಳನ್ನು ಆಡಲಿದೆ. ಪ್ರತಿ ಗುಂಪಿನಿಂದ ಅಗ್ರ ಮೂರು ತಂಡಗಳು ಸೂಪರ್ ಸಿಕ್ಸ್ ಹಂತಕ್ಕೆ ಮುಂದುವರಿಯುತ್ತವೆ.
ಸೂಪರ್ ಸಿಕ್ಸ್ ಹಂತಕ್ಕೆ ಎಂಟ್ರಿಕೊಡುವ ಪ್ರತಿಯೊಂದು ತಂಡವು ಇನ್ನೊಂದು ಗುಂಪಿನ ತಂಡಗಳ ವಿರುದ್ಧ ಸೆಣಸಲಿದೆ. ಸೂಪರ್ ಸಿಕ್ಸ್ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಏಕದಿನ ವಿಶ್ವಕಪ್ಗೆ ಅರ್ಹತೆ ಪಡೆಯಲಿವೆ. ಇದರಲ್ಲಿ ಮೊದಲ ಎರಡು ಸ್ಥಾನ ಪಡೆದ ತಂಡಗಳ ನಡುವೆ ಫೈನಲ್ ಪಂದ್ಯ ಕೂಡ ನಡೆಯಲಿದೆ.
ಅರ್ಹತಾ ಸುತ್ತು ಯಾವಾಗ ಪ್ರಾರಂಭ?
ಜೂನ್ 18 ರಿಂದ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಾವಳಿಗೆ ಚಾಲನೆ ದೊರೆಯಲಿದೆ. ಇದರಲ್ಲಿ ಗುಂಪು ಹಂತದ ಪಂದ್ಯಗಳು ಜೂನ್ 27 ರವರೆಗೆ ನಡೆಯಲಿವೆ. ಆ ಬಳಿಕ ಸೂಪರ್ ಸಿಕ್ಸ್ ಹಂತವು ಜೂನ್ 29 ರಿಂದ ಪ್ರಾರಂಭವಾಗಲಿದ್ದು, ಜುಲೈ 7 ರವರೆಗೆ ನಡೆಯಲಿದೆ. ಫೈನಲ್ ಜುಲೈ 9 ರಂದು ನಡೆಯಲಿದೆ.
ಅರ್ಹತಾ ಸುತ್ತಿನ ಪಂದ್ಯಗಳು ಎಲ್ಲಿ ನಡೆಯುತ್ತಿವೆ?
ಕ್ವಾಲಿಫೈಯರ್ ಪಂದ್ಯಗಳು ಜಿಂಬಾಬ್ವೆಯಲ್ಲಿ ನಡೆಯುತ್ತಿದ್ದು, ಕ್ವಾಲಿಫೈಯರ್ ಈವೆಂಟ್ಗೆ ಹರಾರೆಯ 2 ಮತ್ತು ಬುಲವಾಯೊದ 2 ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ
ಅರ್ಹತಾ ಸುತ್ತನ್ನಾಡುವ ಎಲ್ಲಾ ತಂಡಗಳ ವಿವರ ಹೀಗಿದೆ
ಐರ್ಲೆಂಡ್: ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಮಾರ್ಕ್ ಅಡೇರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಗ್ರಹಾಂ ಹ್ಯೂಮ್, ಜೋಶ್ ಲಿಟಲ್, ಆಂಡಿ ಮೆಕ್ಬ್ರೈನ್, ಬ್ಯಾರಿ ಮೆಕಾರ್ಥಿ, ಪಿಜೆ ಮೂರ್, ಪಾಲ್ ಸ್ಟಿರ್ಲಿಂಗ್, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಬೆನ್ ವೈಟ್, ಕ್ರೇಗ್ ಯಂಗ್.
ನೇಪಾಳ: ರೋಹಿತ್ ಪೌಡೆಲ್ (ನಾಯಕ), ಕುಶಾಲ್ ಭುರ್ಟೆಲ್, ಆಸಿಫ್ ಶೇಖ್, ಜ್ಞಾನೇಂದ್ರ ಮಲ್ಲ, ಕುಶಾಲ್ ಮಲ್ಲ, ಆರಿಫ್ ಶೇಖ್, ದೀಪೇಂದ್ರ ಸಿಂಗ್ ಐರಿ, ಗುಲ್ಸನ್ ಝಾ, ಸೋಂಪಾಲ್ ಕಮಿ, ಕರಣ್ ಕೆಸಿ, ಸಂದೀಪ್ ಲಾಮಿಚಾನೆ, ಭೀಮ್ ಶರ್ಕಿ, ಲಲಿತ್ ರಾಜಬಂಶಿ, ಪ್ರತೀಶ್ ಜೆಸಿ, ಅರ್ಜುನ್ ಸೌದ್, ಕೆಶೂರ್ ಮಹತೋ.
ನೆದರ್ಲ್ಯಾಂಡ್ಸ್: ಸ್ಕಾಟ್ ಎಡ್ವರ್ಡ್ಸ್ (ನಾಯಕ), ಮ್ಯಾಕ್ಸ್ ಒ’ಡೌಡ್, ಲೋಗನ್ ವ್ಯಾನ್ ಬೀಕ್, ವಿಕ್ರಮ್ ಸಿಂಗ್, ಆರ್ಯನ್ ದತ್, ವಿವ್ ಕಿಂಗ್ಮಾ, ಬಾಸ್ ಡಿ ಲೀಡೆ, ನೋಹ್ ಕ್ರೋಸ್, ರಿಯಾನ್ ಕ್ಲೈನ್, ತೇಜಾ ನಿಡಮನೂರು, ವೆಸ್ಲಿ ಬ್ಯಾರೆಸಿ, ಶರೀಜ್ ಅಹ್ಮದ್, ಕ್ಲೇಟನ್ ಫ್ಲಾಯ್ಡ್, ಮೈಕೆಲ್ ಲೆವಿಟ್, ಸಾಕಿಬ್ ಜುಲ್ಫಿಕರ್.
ಓಮನ್: ಜೀಶನ್ ಮಕ್ಸೂದ್ (ನಾಯಕ), ಅಕಿಬ್ ಇಲ್ಯಾಸ್ (ಉಪನಾಯಕ), ಜತೀಂದರ್ ಸಿಂಗ್, ಕಶ್ಯಪ್ ಪ್ರಜಾಪತಿ, ಶೋಯೆಬ್ ಖಾನ್, ಮೊಹಮ್ಮದ್ ನದೀಮ್, ಸಂದೀಪ್ ಗೌಡ್, ಅಯಾನ್ ಖಾನ್, ಸೂರಜ್ ಕುಮಾರ್, ಅದೀಲ್ ಶಫೀಕ್, ನಸೀಮ್ ಖುಷಿ, ಬಿಲಾಲ್ ಖಾನ್, ಕಲೀಮುಲ್ಲಾ, ಫಯಾಜ್ ಬಟ್, ಜೇ ಒಡೆದ್ರಾ ಸಮಯ್ ಶ್ರೀವಾಸ್ತವ್, ರಫೀವುಲ್ಲಾ.
ಸ್ಕಾಟ್ಲೆಂಡ್: ರಿಚಿ ಬೆರಿಂಗ್ಟನ್ (ನಾಯಕ), ಮ್ಯಾಥ್ಯೂ ಕ್ರಾಸ್, ಅಲಾಸ್ಡೈರ್ ಇವಾನ್ಸ್, ಕ್ರಿಸ್ ಗ್ರೀವ್ಸ್, ಜ್ಯಾಕ್ ಜಾರ್ವಿಸ್, ಮೈಕೆಲ್ ಲೀಸ್ಕ್, ಟಾಮ್ ಮ್ಯಾಕಿಂತೋಷ್, ಕ್ರಿಸ್ ಮೆಕ್ಬ್ರೈಡ್, ಬ್ರಾಂಡನ್ ಮೆಕ್ಮುಲ್ಲೆನ್, ಜಾರ್ಜ್ ಮುನ್ಸೆ, ಆಡ್ರಿಯನ್ ನೀಲ್, ಸಫ್ಯಾನ್ ಷರೀಫ್, ಕ್ರಿಸ್ ಸೋಲ್, ಹಮ್ಜಾ ತಹೀರ್ ವಾಮ್ಜಾ.
ಶ್ರೀಲಂಕಾ: ದಸುನ್ ಶನಕ (ನಾಯಕ), ಕುಸಾಲ್ ಮೆಂಡಿಸ್ (ಉಪನಾಯಕ), ದಿಮುತ್ ಕರುಣಾರತ್ನ, ಪಾತುಮ್ ನಿಸ್ಸಾಂಕ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವಾ, ಸದೀರ ಸಮರವಿಕ್ರಮ (ವಿಕೆಟ್ ಕೀಪರ್), ವನಿಂದು ಹಸರಂಗ, ಚಾಮಿಕ ಕರುಣರತ್ನ, ದುಷ್ಮಂತ ಚಮೀರ, ಕಸುನ್ ರಜಿತ, ಲಹೀರು ಕುಮಾರ, ಮತೀಶ ಪತಿರಾನ, ದುಶನ್ ಹೇಮಂತ.
ಯುಎಇ: ಮೊಹಮ್ಮದ್ ವಸೀಮ್ (ನಾಯಕ), ಎಥಾನ್ ಡಿಸೋಜಾ, ಅಲಿ ನಾಸೀರ್, ವೃತ್ಯ ಅರವಿಂದ್, ರಮೀಜ್ ಶಹಜಾದ್, ಜವದುಲ್ಲಾ, ಆಸಿಫ್ ಖಾನ್, ರೋಹನ್ ಮುಸ್ತಫಾ, ಅಯಾನ್ ಖಾನ್, ಜುನೈದ್ ಸಿದ್ದಿಕ್, ಜಹೂರ್ ಖಾನ್, ಸಂಚಿತ್ ಶರ್ಮಾ, ಆರ್ಯಾಂಶ್ ಶರ್ಮಾ, ಕಾರ್ತಿಕ್ ಮೇಯಪ್ಪನ್, ಬಾಸಿಲ್ ಹಮೀದ್.
ಯುಎಸ್ಎ: ಮೊನಾಂಕ್ ಪಟೇಲ್ (ನಾಯಕ), ಆರನ್ ಜೋನ್ಸ್ (ಉಪನಾಯಕ), ಅಭಿಷೇಕ್ ಪರಾಡ್ಕರ್, ಅಲಿ ಖಾನ್, ಗಜಾನಂದ್ ಸಿಂಗ್, ಜಸ್ದೀಪ್ ಸಿಂಗ್, ಕೈಲ್ ಫಿಲಿಪ್, ನಿಸರ್ಗ್ ಪಟೇಲ್, ನೋಸ್ತೂಶ್ ಕೆಂಜಿಗೆ, ಸೈತೇಜಾ ಮುಕ್ಕಮಲ್ಲ, ಸೌರಭ್ ನೇತ್ರವಾಲ್ಕರ್, ಶಯನ್ ಜಹಾಂಗೀರ್, ಸ್ಟೀವನ್ ಟೇಲರ್, ಉಶಾಂತ್ ಮೊದ್ನಿಕ್.
ವೆಸ್ಟ್ ಇಂಡೀಸ್: ಶಾಯ್ ಹೋಪ್ (ನಾಯಕ), ರೋವ್ಮನ್ ಪೊವೆಲ್ (ಉಪನಾಯಕ), ಶಮರ್ಹ್ ಬ್ರೂಕ್ಸ್, ಯಾನಿಕ್ ಕ್ಯಾರಿಯಾ, ಕೀಸಿ ಕಾರ್ಟಿ, ಜಾನ್ಸನ್ ಚಾರ್ಲ್ಸ್, ರೋಸ್ಟನ್ ಚೇಸ್, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಕೀಮೋ ಪಾಲ್, ನಿಕೋಲಸ್ ಪೂರನ್, ರೊಮಾರಿಯೊ ಶೆಫರ್ಡ್.
ಜಿಂಬಾಬ್ವೆ: ರಿಯಾನ್ ಬರ್ಲ್, ಟೆಂಡೈ ಚಟಾರಾ, ಕ್ರೇಗ್ ಎರ್ವಿನ್, ಬ್ರಾಡ್ಲಿ ಇವಾನ್ಸ್, ಜಾಯ್ಲಾರ್ಡ್ ಗುಂಬಿ, ಲ್ಯೂಕ್ ಜೊಂಗ್ವೆ, ಇನೋಸೆಂಟ್ ಕಿಯಾ, ಕ್ಲೈವ್ ಮದಂಡೆ, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮನಿ, ವೆಲ್ಲಿಂಗ್ಟನ್ ಮಸಕಡ್ಜಾ, ಬ್ಲೆಸಿಂಗ್ ಮುಜರಾಬಾನಿ, ರಿಚರ್ಡ್ ವಿಲ್ಜಾಮ್ಸ್, ಸಿಯಾನ್ದರ್ ವಿಲ್ಜಾಮ್ಸ್