ಹಾಸನ: ಐಷಾರಾಮಿ ಜೀವನಕ್ಕಾಗಿ ಮಹಿಳೆಯರ ಸರ ಕದಿಯುತ್ತಿದ್ದ ಖತರ್ನಾಕ್ ಸರಗಳ್ನಳನನ್ನ ಇದೀಗ ಹಿರಿಸಾವೆ ವೃತ್ತದ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಹಾಸನ(Hassan) ಜಿಲ್ಲೆಯ, ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ಹಾಗೂ ಮಂಡ್ಯ ಜಿಲ್ಲೆಯ ಕಿಕ್ಕೇರಿ ಪೊಲೀಸ್ ವ್ಯಾಪ್ತಿಯಲ್ಲಿ ಮಹಿಳೆಯರ ಮಾಂಗಲ್ಯ ಸರಗಳ್ಳತನ ಮಾಡಿದ್ದ ಆರೋಪಿ ಚನ್ನರಾಯಪಟ್ಟಣ ತಾಲ್ಲೂಕಿನ, ಮಾಳೇನಹಳ್ಳಿ ಗ್ರಾಮದ ಸುಧಾಕರ್ (23)ನನ್ನ ಬಂಧಿಸಲಾಗಿದೆ. ಹೌದು ಆತನಿಂದ ಬರೊಬ್ಬರಿ 12,23,000ಲಕ್ಷ ರೂ ಬೆಲೆಯ 211 ಗ್ರಾಂ ತೂಕದ 7 ಚಿನ್ನದ ಮಾಂಗಲ್ಯ ಸರಗಳು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಪಲ್ಸರ್ ಬೈಕ್ನ್ನು ವಶಕ್ಕೆ ಪಡೆಯಲಾಗಿದೆ.
ಸರಗಳ್ಳನ ಚಪ್ಪಲಿ ಗುರುತು ಆದರಿಸಿ ಆರೋಪಿ ಸೆರೆ ಹಿಡಿದ ಪೊಲೀಸರು
ಹೌದು ಈ ಕುಖ್ಯಾತ ಸರಗಳ್ಳ ಸುಧಾಕರ್ ಎರಡು ತಿಂಗಳಲ್ಲಿ ಬರೊಬ್ಬರಿ ಒಂಭತ್ತು ಕಡೆ ಸರಗಳ್ಳತನ ಮಾಡಿದ್ದನು. ಎಂಟು ಕಡೆ ಕಳ್ಳತನ ಮಾಡಿದ್ರು, ಯಾರ ಕೈಗೂ ಸಿಗದೆ ತಲೆ ಮರೆಸಿಕೊಂಡಿದ್ದ. ಇತನ ಹಿಂದೆ ಬಿದ್ದ ಪೊಲೀಸರು. ಆರೋಪಿ ಸುಧಾಕರ್ನ ಚಪ್ಪಲಿ ಗುರುತು ಆಧರಿಸಿ ಆರೋಪಿಯನ್ನ ಪೊಲೀಸರು ಸೆರೆ ಹಿಡಿದಿದ್ದಾರೆ
ಬೆಂಗಳೂರಿನಲ್ಲಿ ಪೊಲೀಸರ ಕಾರ್ಯಾಚರಣೆ; ಮಾದಕ ವಸ್ತು ಸೇವಿಸುತ್ತಿದ್ದ 18 ಜನ ಸೇರಿ 3 ಡ್ರಗ್ ಪೆಡ್ಲರ್ಗಳ ಬಂಧನ
ಬೆಂಗಳೂರು: ರಾಜ್ಯ ಇತ್ತೀಚೆಗೆ ಡ್ರಗ್ಸ್ , ಗಾಂಜಾ ಜಾಲಗಳು ಪತ್ತೆಯಾಗುತ್ತಿದ್ದು, ಈ ಹಿನ್ನಲೆ ಕಟ್ಟುನಿಟ್ಟಿನ ಕ್ರಮವಹಿಸಿದ್ದ ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರು, ಡ್ರಗ್ಸ್ ದಂಧೆ ವಿರುದ್ಧ ವಿಶೇಷ ಕಾರ್ಯಾಚರಣೆ ಮಾಡಿದ್ದಾರೆ. ಹೌದು ಇಂದು(ಜೂ.1) ನಗರದ ವಿವಿಧೆಡೆ ದಾಳಿ ನಡೆಸಿದ್ದ ಪೊಲೀಸರು ಗಾಂಜಾ, ಇತರೆ ಮಾದಕ ವಸ್ತು ಸೇವಿಸುತ್ತಿದ್ದ 18 ಜನ ಸೇರಿ 3 ಡ್ರಗ್ ಪೆಡ್ಲರ್ಗಳ ಬಂಧಿಸಿದ್ದಾರೆ. ಡ್ರಗ್ ಪೆಡ್ಲರ್ ಗಳ ಬಳಿಯಿದ್ದ 2.5 ಕೆಜಿ ಗಾಂಜಾ, 11 ಗ್ರಾಂ ಎಂಡಿಎಂಎ, 7 ಗ್ರಾಂ ಹೈಡ್ರಾ ಮ್ಯಾಂಗೋ ವಶಕ್ಕೆ ಪಡೆದಿದ್ದಾರೆ.