Bullion Market 2023, June 20th: ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 55,070 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 60,070 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್​ಗೆ 73.50 ರು ಆಗಿದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Silver Price on 20 June: ದುಬೈನಲ್ಲಿ ಚಿನ್ನ ಇನ್ನಷ್ಟು ಅಗ್ಗ; ಭಾರತದ ವಿವಿಧೆಡೆ ತುಸು ಬೆಲೆ ಇಳಿಕೆ; ಇಲ್ಲಿದೆ ಇವತ್ತಿನ ಚಿನ್ನ, ಬೆಳ್ಳಿ ದರಗಳು

ಚಿನ್ನ

ಬೆಂಗಳೂರು: ಈ ವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and Silver Prices) ತುಸು ಇಳಿಕೆ ಕಾಣುತ್ತಿರುವ ಸೂಚನೆ ಇದೆ. ಆದರೂ ಜಾಗತಿಕವಾಗಿ ಚಿನಿವಾರಪೇಟೆಯಲ್ಲಿ ಅನಿಶ್ಚಿತತೆ ಮನೆಮಾಡಿದೆ. ಚಿನ್ನದ ಬೆಲೆ ಎಲ್ಲೆಡೆ ಅಲ್ಪ ಇಳಿಕೆಯಾಗಿದೆ. ದುಬೈನಲ್ಲಿ ಚಿನ್ನದ ಬೆಲೆ ಸತತವಾಗಿ ಇಳಿಯುತ್ತಿರುವುದು ಗಮನಾರ್ಹ. ಅಮೆರಿಕದಲ್ಲಿ ಯಥಾಸ್ಥಿತಿ ಮುಂದುವರಿದೆ. ಭಾರತದ ವಿವಿಧೆಡೆ ಚಿನ್ನ ತುಸು ಇಳಿದಿದೆ. ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 55,070 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 60,070 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,350 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 55,120 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,475 ರುಪಾಯಿಯಲ್ಲಿ ಇದೆ.

ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜೂನ್ 20ಕ್ಕೆ):

 • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 55,070 ರೂ
 • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 60,070 ರೂ
 • ಬೆಳ್ಳಿ ಬೆಲೆ 10 ಗ್ರಾಂಗೆ: 735 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

 • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 55,120 ರೂ
 • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 60,110 ರೂ
 • ಬೆಳ್ಳಿ ಬೆಲೆ 10 ಗ್ರಾಂಗೆ: 74.75 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

 • ಬೆಂಗಳೂರು: 55,120 ರೂ
 • ಚೆನ್ನೈ: 55,400 ರೂ
 • ಮುಂಬೈ: 55,070 ರೂ
 • ದೆಹಲಿ: 55,350 ರೂ
 • ಕೋಲ್ಕತಾ: 55,070 ರೂ
 • ಕೇರಳ: 55,070 ರೂ
 • ಅಹ್ಮದಾಬಾದ್: 55,120 ರೂ
 • ಜೈಪುರ್: 55,350 ರೂ
 • ಲಕ್ನೋ: 55,350 ರೂ
 • ಭುವನೇಶ್ವರ್: 55,070 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

 • ಮಲೇಷ್ಯಾ: 2,890 ರಿಂಗಿಟ್ (51,179 ರುಪಾಯಿ)
 • ದುಬೈ: 2192.50 ಡಿರಾಮ್ (48,917 ರುಪಾಯಿ)
 • ಅಮೆರಿಕ: 600 ಡಾಲರ್ (49,282 ರುಪಾಯಿ)
 • ಸಿಂಗಾಪುರ: 814 ಸಿಂಗಾಪುರ್ ಡಾಲರ್ (49,750 ರುಪಾಯಿ)
 • ಕತಾರ್: 2,250 ಕತಾರಿ ರಿಯಾಲ್ (50,641 ರೂ)
 • ಓಮನ್: 239 ಒಮಾನಿ ರಿಯಾಲ್ (50,938 ರುಪಾಯಿ)
 • ಕುವೇತ್: 187.50 ಕುವೇತಿ ದಿನಾರ್ (50,053 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

 • ಬೆಂಗಳೂರು: 7,475 ರೂ
 • ಚೆನ್ನೈ: 7,880 ರೂ
 • ಮುಂಬೈ: 7,350 ರೂ
 • ದೆಹಲಿ: 7,350 ರೂ
 • ಕೋಲ್ಕತಾ: 7,350 ರೂ
 • ಕೇರಳ: 7,880 ರೂ
 • ಅಹ್ಮದಾಬಾದ್: 7,350 ರೂ
 • ಜೈಪುರ್: 7,350 ರೂ
 • ಲಕ್ನೋ: 7,350 ರೂ
 • ಭುವನೇಶ್ವರ್: 7,880 ರೂ

(ಗಮನಿಸಿ: ಇಲ್ಲಿ ನೀಡಲಾಗಿರುವ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

Leave a Reply

Your email address will not be published. Required fields are marked *