ಒಬ್ಬ ಯುವತಿ ಎಲ್ಲರಂತೆ ಕೊಳದಲ್ಲಿ ತಾನೂ ನಾಣ್ಯ ಹಾಕಿ ತನ್ನ ದುಡ್ಡು ಖರ್ಚು ಮಾಡದೆ ತನ್ನ ಬಳಿಯಿರುವ ಅಗಾಧವಾದ ಬುದ್ಧಿವಂತಿಕೆ ಖರ್ಚು ಮಾಡಿದ್ದಾಳೆ. ಜಸ್ಟ್ ಆ ಯುವತಿ ನಾಣ್ಯ ಹಾಕುವ ಬದಲಿಗೆ ತನ್ನ ಬಳಿಯಿದ್ದ ಕ್ರೆಡಿಟ್ ಕಾರ್ಡ್ ತೆಗೆದು ಕೊಳದ ನೀರಿನಲ್ಲಿ ಕಾರ್ಡ್ ಸ್ವೈಪ್ ಮಾಡಿದ್ದಾಳೆ.
Funny Video: ಈ ಪುಣ್ಯಾತಗಿತ್ತಿ ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡಿದಳು!
ನೀವು ಏನೇ ಹೇಳಿ ತಲೆಗೊಂದು ಬುದ್ಧಿ, ಐಡಿಯಾ ಬಂದೇ ಬರುತ್ತದೆ. ಅದರಲ್ಲಿ ಒಂದಷ್ಟು ಭಾರಿ ಸಾಮ್ಯತೆಯಿದ್ದರೆ, ಬಹಳಷ್ಟು ಬಾರಿ ವಿಭಿನ್ನ ಆಲೋಚನೆಗಳು ಬಂದಿರುತ್ತವೆ. ದೊಡ್ಡವರು ಅದಕೇ ಹೇಳೋದು ಪ್ರತಿಯೊಬ್ಬರ ಅಭಿರುಚಿಯೂ ಭಿನ್ನವಾಗಿರುತ್ತದೆ. ಪ್ರತಿಯೊಬ್ಬರ ಆಲೋಚನೆ ಮತ್ತು ಅಭಿಪ್ರಾಯವೂ ಭಿನ್ನವಾಗಿರುತ್ತದೆ. ಆದಾಗ್ಯೂ, ಕೆಲವು ಸಮಯ ಸಂದರ್ಭಗಳುನ ಅಂತಾ ಇರುತ್ತವೆ. ಅದರಲ್ಲೂ ವಿಶೇಷವಾಗಿ ಧಾರ್ಮಿಕ ಚಟುವಟಿಕೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಅಲ್ಲಿನ ಪದ್ಧತಿ/ ವಾಡಿಕೆ ಹೇಗಿರುತ್ತದೋ ಅದೇ ರೀತಿ ಮಾಡಬೇಕಾಗುತ್ತದೆ. ದೇವಾಲಯ, ಪುಣ್ಯ ಕ್ಷೇತ್ರಗಳಲ್ಲಂತೂ ಭಕ್ತರು ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ಕೆಲ ದೇವಸ್ಥಾನಗಳ ಬಳಿ ಪುರಾತನ ನೀರಿನ ಕೊಳಗಳು ಇರುತ್ತವೆ. ಅಲ್ಲಿ ಜನ ಸ್ನಾನ ಮಾಡುವುದು ಅಥವಾ ಆ ಕೊಳದಲ್ಲಿ ನಾಣ್ಯಗಳನ್ನು ಹಾಕುವ ಭಕ್ತಿ ಪರಂಪರೆಯಿರುತ್ತದೆ.
ಇದನ್ನೆಲ್ಲಾ ಈಗ ಯಾಕೆ ಹೇಳಬೇಕು ಅಂದರೆ ಇತ್ತೀಚಿಗೆ ಮಹಿಳಾ ಭಕ್ತೆಯೊಬ್ಬಳು ಅದರಲ್ಲೂ ವಿದೇಶಿ ಮಹಿಳೆ ಮಾಡಿರುವ ಕೆಲಸ ತಮಾಷೆಯಾಗಿದ್ದು, ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಾಕೆಂದರೆ.. ಆ ಹುಡುಗಿ ಏನು ಮಾಡಿದಳು ಎಂಬುದು ಕುತೂಹಲಕಾರಿಯಾಗಿದೆ. ಕಾಲಾಯತಸ್ಮೈನಮಃ ಇದು ಹೇಳಿಕೇಳಿ ಡಿಜಿಟಲ್ ಯುಗ. ಅಂದ್ರೆ ಭೌತಿಕವಾಗಿ ಹಣ ವ್ಯವಹಾರ ಮಾಡುವುದು ಕಡಿಮೆಯಾಗುತ್ತಿದ್ದು, ಏನಿದ್ದರೂ ಮೊಬೈಲ್ ಅಥವಾ ಕಾರ್ಡ್ಗಳ ಮೂಲಕ ಹಣ ಪಾವತಿ ನಡೆಯುತ್ತದೆ.
ಕೆಲವು ಪುರಾತನ ದೇವಾಲಯಗಳು ಪ್ರಸಿದ್ಧ ಕೊಳಗಳನ್ನು ಹೊಂದಿವೆ. ಅಲ್ಲಿಗೆ ಭೇಟಿ ಮಾಡುವ ಭಕ್ತರು ಕೊಳಗಳಲ್ಲಿ ನಾಣ್ಯಗಳನ್ನು ಹಾಕುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಪೂರೈಸಲು ಬಯಸುತ್ತಾರೆ. ದೇವಸ್ಥಾನಗಳಲ್ಲಿ ಇಂತಹವುಗಳನ್ನು ಸಾಮಾನ್ಯವಾಗಿ ನೋಡುತ್ತಲೇ ಇರುತ್ತೇವೆ. ಇತ್ತೀಚಿಗೆ ವೈರಲ್ ಆಗಿರುವ ವಿಡಿಯೋದಲ್ಲಿಯೂ ಇಂತಹುದೆ ದೃಶ್ಯವಿದೆ.
ಅಲ್ಲೊಂದು ದೇವಸ್ಥಾನದಲ್ಲಿ ಚಿಕ್ಕ ಕೊಳವಿತ್ತು. ಅದರಲ್ಲಿ ಭಕ್ತರು ನಾಣ್ಯಗಳನ್ನು ಹಾಕುತ್ತಿದ್ದರು. ಇದನ್ನು ನೋಡಿದ ಒಬ್ಬ ಯುವತಿ ಎಲ್ಲರಂತೆ ತಾನೂ ನಾಣ್ಯ ಹಾಕಿ ತನ್ನ ಬಳಿಯಿರುವ ದುಡ್ಡನ್ನು ಖರ್ಚು ಮಾಡದೆ ತನ್ನ ಬಳಿಯಿರುವ ಅಗಾಧವಾದ ಬುದ್ಧಿವಂತಿಕೆಯನ್ನು ಖರ್ಚು ಮಾಡಿ, ತೋರಿಸಿದ್ದಾಳೆ. ಜಸ್ಟ್ ಆ ಯುವತಿ ನಾಣ್ಯ ಹಾಕುವ ಬದಲಿಗೆ ತನ್ನ ಬಳಿಯಿದ್ದ ಕ್ರೆಡಿಟ್ ಕಾರ್ಡ್ ತೆಗೆದು ಕೊಳದ ನೀರಿನಲ್ಲಿ ಕಾರ್ಡ್ ಸ್ವೈಪ್ ಮಾಡಿದ್ದಾಳೆ.
ಸಮೀಪದಲ್ಲೇ ಇದ್ದ ಕೆಲವು ಭಕ್ತರು ಈ ದೃಶ್ಯವನ್ನು ತಮ್ಮ ಫೋನ್ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ. ವಿಡಿಯೋ ನೋಡಿ ನೆಟ್ಟಿಗರು ಕಲ್ಚರಲ್, ಟ್ರೆಡಿಷನಲ್ ಶಾಕ್ (traditional shock) ಗೆ ಒಳಗಾಗಿದ್ದಾರೆ! ಎಂತಾ ಕಾಲ ಬಂತಪ್ಪಾ ಎಂದು ಮೂಗು ಮುರಿದಿದ್ದಾರೆ. ಆಕೆ ನಿಜಕ್ಕೂ ಮಹಾನ್ ಪ್ರತಿಭಾವಂತಳು ಎಂದು ವ್ಯಂಗ್ಯವಾಡಿದ್ದಾರೆ. ನೀರಿನಲ್ಲಿ ಎಷ್ಟು ದುಡ್ಡು ಸ್ವೈಪ್ ಮಾಡಿದಳಂತೆ, ಲೆಕ್ಕ ಹಾಕಿ ಹೇಳಿ ಎಂಬ ಕಾಮೆಂಟ್ಗಳು ಹರಿದಿವೆ. ಮೇಲಿನ ಫನ್ನಿ ವಿಡಿಯೋ ನೀವೂ ನೋಡಿ.