Investment Advice: ಸ್ಟಾಕ್ ರಿಪೋರ್ಟ್ಸ್ ಪ್ಲಸ್ ವರದಿಯೊಂದು ಸುಮಾರು 4,000 ಷೇರುಗಳನ್ನು ಅವಲೋಕಿಸಿ ಅವರುಗಳು ಮುಂದಿನ 12 ತಿಂಗಳಲ್ಲಿ, ಅಂದರೆ ಒಂದು ವರ್ಷದಲ್ಲಿ ಎಷ್ಟು ಮೌಲ್ಯ ಹೆಚ್ಚಿಸಿಕೊಳ್ಳಬಹುದು ಎಂದು ಪಟ್ಟಿ ಮಾಡಿದೆ. ಈ ಬಗ್ಗೆ ಒಂದು ರಿಪೋರ್ಟ್.
ಹಣ ಹೂಡಿಕೆ (Investment) ಮಾಡುವುದು ಒಂದು ರೀತಿಯಲ್ಲಿ ಕಲೆ, ಇನ್ನೊಂದು ರೀತಿಯಲ್ಲಿ ತಾಳ್ಮೆ, ಮಗದೊಂದು ರೀತಿಯಲ್ಲಿ ಜಾಣ್ಮೆ. ಅದರಲ್ಲಿಯೂ ಮೂರನೇ ಅಂಶ ಜಾಣ್ಮೆ ಬಹಳ ಮುಖ್ಯ. ಹಣ ಹೂಡಿಕೆ ಮಾಡಲು ಹತ್ತಾರು ಮಾರ್ಗಗಳು ಈಗ ಇವೆ. ಬ್ಯಾಂಕ್ನಲ್ಲಿ ಎಫ್ಡಿ, ಆರ್ಡಿ ಇಡುವುದರಿಂದ ಹಿಡಿದು ವಿಮೆ, ಬಾಂಡ್, ಚಿನ್ನ, ಷೇರು, ಮ್ಯೂಚುವಲ್ ಫಂಡ್ ಇತ್ಯಾದಿ ಸಾಧನಗಳಿವೆ. ಕೆಲ ಪ್ಲಾನ್ಗಳು ಲಾಭ ಕೊಡುವುದು ಕಡಿಮೆ ಆದರೂ ಗ್ಯಾರಂಟಿ ರಿಟರ್ನ್ ಕೊಡಬಲ್ಲುವು. ಷೇರುಗಳು ಅದೃಷ್ಟ ಇದ್ದರೆ ಭರ್ಜರಿ ಲಾಭ ಕೊಡಬಹುದು. ದುರದೃಷ್ಟವಿದ್ದರೆ ಭಾರೀ ನಷ್ಟಕ್ಕೆ ದೂಡಬಹುದು. ಆದರೆ, ಮಾರುಕಟ್ಟೆ ಮತ್ತು ಉದ್ಯಮದ ಪರಿಸ್ಥಿತಿ ಅವಲೋಕಿಸಿ ತಜ್ಞರು ನೀಡುವ ಸಲಹೆಯನ್ನು ಪರಿಗಣಿಸಿ ಷೇರುಗಳ ಮೇಲೆ ಹೂಡಿಕೆ ಮಾಡಿದರೆ ಒಳ್ಳೆಯ ಲಾಭ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ.
ಸ್ಟಾಕ್ ರಿಪೋರ್ಟ್ಸ್ ಪ್ಲಸ್ ವರದಿಯೊಂದು ಸುಮಾರು 4,000 ಷೇರುಗಳನ್ನು ಅವಲೋಕಿಸಿ ಅವರುಗಳು ಮುಂದಿನ 12 ತಿಂಗಳಲ್ಲಿ, ಅಂದರೆ ಒಂದು ವರ್ಷದಲ್ಲಿ ಎಷ್ಟು ಮೌಲ್ಯ ಹೆಚ್ಚಿಸಿಕೊಳ್ಳಬಹುದು ಎಂದು ಪಟ್ಟಿ ಮಾಡಿದೆ. ಇದರಲ್ಲಿ ಆ ಕಂಪನಿಯ ಹಣಕಾಸು ಲಭ, ಅದು ಇರುವ ಉದ್ಯಮದ ಸ್ಥಿತಿ ಗತಿ ಇತ್ಯಾದಿ ಅಂಶಗಳನ್ನು ಗಣನೆಗೆ ತೆಗೆದುಕೊಂಡು ವಿವಿಧ ತಜ್ಞರ ಅಭಿಪ್ರಾಯಗಳನ್ನು ಸಂಗ್ರಹಿಸಿ ಈ ಪಟ್ಟಿ ಮಾಡಿರುವುದು ತಿಳಿದುಬಂದಿದೆ. ಈ ಪಟ್ಟಿಯಲ್ಲಿ ಬ್ಯಾಂಕುಗಳೂ ಇದ್ದು, ಒಂದು ವರ್ಷದಲ್ಲಿ ಶೇ 29ರಿಂದ ಶೇ. 38ರವರೆಗೂ ಷೇರುಬೆಲೆ ಬೆಳೆಯಬಲ್ಲ ಐದು ಬ್ಯಾಂಕುಗಳನ್ನು ಹೆಸರಿಸಲಾಗಿದೆ.