ಧಾರವಾಡ: ಕಲಘಟಗಿ ವಿಧಾನಸಭಾ-75 ಮತಕ್ಷೇತ್ರದ ರೈತರಿಗೆ ಪರಿಹಾರ ಒದಗಿಸಲು ಬಿಜೆಪಿ ಮುಖಂಡ ನಾಗರಾಜ್ ಛಬ್ಬಿಯವರಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ
ಈ ಬಾರಿ ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ ಗೋವಿನ
ಜೋಳ, ಸೋಯಾಬಿನ್ ಸಂಪೂರ್ಣ ಹಾಳಾಗಿವೆ.
ರೈತರು ಹಿಂದೆಂದೂ ಕಾಣದ ಹಸಿರು ಬರವನ್ನು ಅನುಭವಿಸಿ ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಕುರಿತು ಕೂಡಲೇ ಪರಿಹಾರ ಒದಗಿಸುವಂತೆ ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಧಾರವಾಡ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಅತಿವೃಷ್ಟಿಯಿಂದಾಗಿ ಬಡ ಜನರು ಮನೆ
ಕಳೆದುಕೊಂಡಿದ್ದಾರೆ. ನಂಜುಂಡಪ್ಪ ವರದಿ ಪ್ರಕಾರ
ಇದು ಹಿಂದುಳಿದ ಪ್ರದೇಶವಾಗಿರುವುದರಿಂದ
ಮಾನ್ಯರು ತಾಲೂಕ ಅಧಿಕಾರಿಗಳಿಗೆ ಸೂಚಿಸಿ ಶೀಘ್ರ
ಪರಿಹಾರ ಕೊಡಲು ವಿನಂತಿಸಿಕೊಂಡಿದ್ದಾರೆ.