The Ashes 2023: ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ (Ben Stokes) ತೆಗೆದುಕೊಂಡ ಈ ನಿರ್ಧಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿತು. ಜೋ ರೂಟ್ (Joe Root) ಶತಕ ಸಿಡಿಸಿ ಕ್ರೀಸ್​ನಲ್ಲಿ ಇರುವಾಗಲೇ 393 ರನ್​ಗಳಿಗೆ ಇನ್ನಿಂಗ್ಸ್ ಅಂತ್ಯಗೊಳಿಸಿತು.

ENG vs AUS, 1st Test: ಆ್ಯಶಸ್ ಆರಂಭವಾದ ಮೊದಲ ದಿನವೇ ಡಿಕ್ಲೇರ್ ಘೋಷಿಸಿದ ಇಂಗ್ಲೆಂಡ್: ಆಸೀಸ್​ಗೆ 379 ರನ್​ಗಳ ಹಿನ್ನಡೆ

Ben Stokes and Joe Root

ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ (England vs Australia) ನಡುವಣ ಪ್ರತಿಷ್ಠಿತ ಆ್ಯಶಸ್ ಟೆಸ್ಟ್‌ ಸರಣಿಗೆ ಚಾಲನೆ ಸಿಕ್ಕಿದೆ. ಶುಕ್ರವಾರ ಬರ್ಮಿಂಗ್‌ಹ್ಯಾಮ್​ನ ಎಜ್‌ಬಾಸ್ಟನ್‌ನಲ್ಲಿ ಮೊದಲ ಟೆಸ್ಟ್ ಆರಂಭವಾಗಿದ್ದು, ಅಚ್ಚರಿ ಎಂಬಂತೆ ಪ್ರಥಮ ದಿನವೇ ಇಂಗ್ಲೆಂಡ್ ಡಿಕ್ಲೇರ್ ಘೋಷಿಸಿ ಕಾಂಗರೂ ಪಡೆಗೆ ಬ್ಯಾಟಿಂಗ್​ಗೆ ಆಹ್ವಾನಿಸಿದೆ. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ (Ben Stokes) ತೆಗೆದುಕೊಂಡ ಈ ನಿರ್ಧಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿತು. ಜೋ ರೂಟ್ (Joe Root) ಶತಕ ಸಿಡಿಸಿ ಕ್ರೀಸ್​ನಲ್ಲಿ ಇರುವಾಗಲೇ 393 ರನ್​ಗಳಿಗೆ ಇನ್ನಿಂಗ್ಸ್ ಅಂತ್ಯಗೊಳಿಸಿತು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಆಂಗ್ಲರು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಆರಂಭದಲ್ಲೇ ಬೆನ್ ಡಕೆಟ್ (12) ವಿಕೆಟ್ ಕಳೆದುಕೊಂಡಿತು. ಎರಡನೇ ವಿಕೆಟ್​ಗೆ ಜಾಕ್ ಕ್ರಾವ್ಲಿ ಹಾಗೂ ಒಲಿ ಪೋಪ್ (31) 70 ರನ್​ಗಳ ಜೊತೆಯಾಟ ಆಡಿದರು. ಮತ್ತೊಂದು ತುದಿಯಲ್ಲಿ ಕ್ರಾವ್ಲಿ ಸಕಾರಾತ್ಮಕವಾಗಿ ಬ್ಯಾಟಿಂಗ್ ಮುಂದುವರಿಸಿ ಅರ್ಧಶತಕವನ್ನು ಪೂರೈಸಿದರು. 73 ಎಸೆತಗಳಲ್ಲಿ 7 ಫೋರ್​ನೊಂದಿಗೆ 61 ರನ್ ಕಲೆಹಾಕಿದರು. ಜೋ ರೂಟ್ ಜೊತೆಗೂಡಿ ಹ್ಯಾರಿ ಬ್ರೂಕ್ (37 ಎಸೆತಗಳಲ್ಲಿ 32 ರನ್) ಭೋಜನ ವಿರಾಮದ ನಂತರ ಭರ್ಜರಿಯಾಗಿ ಬ್ಯಾಟ್​ ಬೀಸಿದರು.

ಬ್ರೂಕ್ 32 ರನ್​ಗೆ ಔಟಾದರೆ, ನಾಯಕ ಬೆನ್ ಸ್ಟೋಕ್ಸ್ ಕೇವಲ 1 ರನ್​ಗೆ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಜಾನಿ ಬೇರ್​ಸ್ಟೋವ್​ (78 ಎಸೆತಗಳಲ್ಲಿ 78 ರನ್) ಮತ್ತು ಜೋ ರೂಟ್ 121 ರನ್​ಗಳ ಜತೆಯಾಟ ನೀಡಿದರು. ಆಲ್ರೌಂಡರ್ ಮೊಯಿನ್ ಅಲಿ 17 ಎಸೆತಗಳಲ್ಲಿ 18 ರನ್ ರನ್ ಗಳಿಸಿದರು. ಒಂದು ಕಡೆ ವಿಕೆಟ್ ಉರುಳಿದರೆ ಅತ್ತ ಜೋ ರೂಟ್ ನಿರಂತರವಾಗಿ ಬ್ಯಾಟ್ ಬೀಸಿ ಶತಕ ಕೂಡ ಪೂರೈಸಿದರು.

Leave a Reply

Your email address will not be published. Required fields are marked *