ಕಾರವಾರ: ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಗೇರುಸೊಪ್ಪದ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿದ್ದು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಇಂದು ಭೇಟಿ ನೀಡಿ ನೀರನ್ನು ಹೊರಬಿಡುವುದಕ್ಕೆ ಸಹಕರಿಸಿದ್ದಾರೆ.
6000 ಕ್ಯೂಸೆಟ್ ನೀರು ಗೇಟ್ ಮೂಲಕ ಹೊರ ಬಿಡಲಾಗಿದೆ. ಜನರಿಗೆ ಸಂತೋಷ ತಂದದೆ.ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹುತೇಕ ನದಿಗಳು ಮೈದುಂಬಿ ಹರಿಯುತ್ತಿದ್ದು ಜಿಲ್ಲೆಯ ಕೆಲ ಗುಡ್ಡಗಳು ಅಪಾಯದ ಅಂಚಿನಲ್ಲಿದ್ದು ಇದರ ಸಮೀಕ್ಷೆ ನಡೆಸಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ.