ಹುಬ್ಬಳ್ಳಿ: ಕಳೆದ ಒಂದುವರೆ ವರ್ಷದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಬಹುದೊಡ್ಡ ಭ್ರಷ್ಟಾಚಾರದ ಕೂಪದಲ್ಲಿ ನಲುಗುತ್ತಿದೆ. ಭ್ರಷ್ಟಾಚಾರ ರಹಿತ ಸರ್ಕಾರ ಎಂದು ಹೇಳಿಕೊಳ್ಳುವ ಸಮಾಜವಾದಿ ಪಕ್ಷದ ಸಿಎಂ ಸಿದ್ಧರಾಮಯ್ಯನವರೇ ಮುಡಾ, ವಾಲ್ಮೀಕಿ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಈಗಾಗಲೇ ಕೋರ್ಟ್ ನಲ್ಲಿ ಮುಡಾ ಹಗರಣಕ್ಕೆ ಸಂಬಂಧಿಸಿದ ವಾದ ವಿವಾದಗಳು ನಡೆಯುತ್ತಿದೆ. ಆದರೆ ಇನ್ನೂ ವಿಚಾರಣೆ ನಡೆಯುತ್ತಿರುವಾಗಲೇ ಸಿಎಂ ಕುರ್ಚಿಗೆ ಬಹುತೇಕ ಕಾಂಗ್ರೆಸ್ ನಾಯಕರು ಟವಲ್ ಹಾಕಿರುವುದನ್ನು ನೋಡಿದರೇ ನಿಜಕ್ಕೂ ಅಚ್ಚರಿಯಾಗುತ್ತದೆ ಎಂದರು.
ಇನ್ನೂ ಈಗಾಗಲೇ ಸಿಎಂ ಸಿದ್ಧರಾಮಯ್ಯನವರನ್ನು ಸಿಎಂ ಕುರ್ಚಿಯಿಂದ ಇಳಿಸುವ ಎಲ್ಲ ಕಾರ್ಯತಂತ್ರ ನಡೆಯುತ್ತಿವೆ. ಎಂ.ಬಿ.ಪಾಟೀಲ, ಸತೀಶ ಜಾರಕಿಹೊಳಿ, ಆರ್.ವಿ.ದೇಶಪಾಂಡೆ ಹೀಗೆ ಬಹುತೇಕ ನಾಯಕರು ಸಿಎಂ ಆಗಲು ತಯಾರಿ ನಡೆಸಿರುವುದನ್ನು ನೋಡಿದರೇ ಸಿದ್ಧರಾಮಯ್ಯನವರನ್ನು ಹೊರಹಾಕಲು ತಯಾರಿ ನಡೆದಿದೆ ಎಂದು ಲೇವಡಿ ಮಾಡಿದರು.
ಇನ್ನೂ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ತೆಗೆದುಕೊಂಡ ನಿರ್ಧಾರದಂತೆ ಕೋರ್ಟ್ ನಿರ್ಣಯ ಬರಬಹುದು ಎಂಬುವಂತದ್ದು, ಮೇಲ್ನೋಟಕ್ಕೆ ಅರ್ಥವಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.