*🪷,ಮನೆಯ ಸಮೃದ್ದಿ🪷*

*ಮನೆಯಲ್ಲಿ,ಒಡೆದಿರುವಅಥವಾ ಬಿರುಕು ಬಿಟ್ಟಿರುವ ಕನ್ನಡಿ ಇಡಬೇಡಿ* ; ಅದು ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ.

🪷 *,ಮನೆಯ ಯಾವುದೇ ಸ್ಥಳದ ನಲ್ಲಿಯಲ್ಲಿ ನೀರು ನಿರಂತರ ಸೋರುವಿಕೆ ಇರಬಾರದು* ; ಅದರಿಂದ ಹಣ ವ್ಯಯ ಸಂಭವ.

*🌲,ಮನೆಯ ಆವರಣದಲ್ಲಿ ಒಣಗಿದ ಗಿಡಗಳು ಇಡಬೇಡಿ* ; ಇದರಿಂದ ಮನಸ್ಸನಲ್ಲಿ ಖಿನ್ನತೆ ಉಂಟಾಗುವ ಸಂಭವ.ಹೆಚ್ಚು,

*💐,ದೇವರಿಗೆ ಮನೆಯ ಹೂವುಗಳನ್ನೇ ಅರ್ಪಿಸಲು ಪ್ರಯತ್ನಮಾಡಿ.ಹೊರಗಡೆಯಿಂದ, ತಂದ ಹೂವಿಗೆ ಮನೆಯ ನೀರನ್ನು ಸಿಂಪಡಿಸಬೇಕು.* ಶುದ್ಧ,ಮಾಡಿನಂತರಉಪಯೋಗಿಸಬೇಕು. ಇಲ್ಲದಿದ್ದರೆ ಮನೆಯ ಅಡುಗೆ ಸಾಮಗ್ರಿ ಹಾಳಾಗುವ ಸಂಭವ.ಹೆಚ್ಚು,

*🕰️,ನಿಂತ ಗಡಿಯಾರವು ಅಶುಭ ಲಕ್ಷಣ.ಇದನ್ನು* ಕೂಡಲೇ ಸರಿಪಡಿಸುವುದು ಉತ್ತಮ

*⛳,ದೇವರ ಕೋಣೆಯ ಮೇಲೆ ಅತಿಯಾದ ಭಾರವನ್ನು ಇಡಬಾರದು.ಒಡೆದುಹೋದ* ದೇವರ ಮೂರ್ತಿ ಅಥವಾ ಫೋಟೋಗಳನ್ನು ಇಡಬೇಡಿ.

*ಮನೆಯಲ್ಲಿ ಹಿರಿಯರಿಗೆ ಮತ್ತು ತಂದೆ-ತಾಯಿಯರಿಗೆ ಕಾಲುಮುಟ್ಟಿ ನಮಸ್ಕಾರ ಮಾಡುವ ಪದ್ಧತಿಯನ್ನು ಮಕ್ಕಳಲ್ಲಿ ಬೆಳೆಸಿ* . ಹೆತ್ತವರಿಗೆ ಇದರ ಅವಶ್ಯಕತೆ ಇಲ್ಲದೆ ಇರಬಹುದು.ಆದರೆ ಹೆತ್ತವರ ಆಶೀರ್ವಾದವು ಮಕ್ಕಳನ್ನು ನಿರಂತರ ರಕ್ಷಿಸಲು ಇದು ಅತ್ಯಂತ ಸಹಕಾರಿ

*🪔,ದೇವರ ಕೋಣೆಯಲ್ಲಿ ಒಂಟಿ ದೀಪ ಉರಿಸಬಾರದು* . ಸಣ್ಣ ದೀಪವಾದರೂ ಅಡ್ಡಿ ಇಲ್ಲ, ಎರಡು ದೀಪಗಳನ್ನು ಇಡಿ.ಚಾಪೆ ಬಳಸುತ್ತಿದ್ದರೆ ಮುಗುಚಿ ಹಾಕಬಾರದು.
*ಸಂಜೆ ಗುಡಿಸಿದ ಕಸವನ್ನು ಹೊರಗೆ ಹಾಕಬಾರದು.*
ಯಾವುದೇ ಹೊಸ ಬಟ್ಟೆ ಅಥವಾ *ಒಡವೆಗಳನ್ನು ತಂದರೆ ಮೊದಲುದೇವರಸನ್ನಿಧಾನದಲ್ಲಿಟ್ಟು,ತೆಗೆದುಕೊಳ್ಳುವುದು. ಉತ್ತಮ* ,

🌸 **ಇದರಿಂದ ವಸ್ತುವಿನಲ್ಲಿ ಇದ್ದ ಕಲಿ ದೋಷದೂರವಾಗುವುದು*
ಕುಲದೇವರಿಗೆ ;ಇಷ್ಟದೇವರಿಗೆ;ಗ್ರಾಮ ದೇವರಿಗೆಮನೆಯ ಎಲ್ಲಶುಭಕಾರ್ಯಗಳಲ್ಲಿ ಕಾಣಿಕೆಯನ್ನು,ತೆಗೆದುಇಡುವುದನ್ನುರೂಢಿ ಮಾಡಿ.ಜೇಡರಬಲೆ ಮನೆಯಲ್ಲಿ ಕಟ್ಟಿದ್ದರೆ ತಕ್ಷಣ ನಿವಾರಿಸಿ-ಅದು ಅಶುಭತರುವಸಂಕೇತ.
*🏛️,ಮನೆಯನ್ನುಎಷ್ಟುಶುಚಿಯಾಗಿಇಟ್ಟುಕೊಳ್ಳುತ್ತೇವೆ, ಅಷ್ಟುದೈವಿಕ* ,ಕಳೆವೃದ್ಧಿಸುವುದು

*🦜,🕊️ಮನೆಯ ಯಾವುದೇ ಜಾಗದಲ್ಲಿ ಪಾರಿವಾಳಗಳು ಮನೆ ಮಾಡಿದರೆ – ಅದು ಕಷ್ಟಗಳು ಎದುರಾಗುವ  ಸಂಕೇತ* . ಅವುಗಳ ಪ್ರಾಣ ಹಾನಿ ಆಗದಂತೆ ಅಲ್ಲಿಂದ ಓಡಿಸಬೇಕು.

*🐝,ಜೇನಿನ ಗೂಡು ಮನೆಯಲ್ಲಿ ಕಟ್ಟಬಾರದು* . ಸಾಧ್ಯವಾದಷ್ಟು ಮನೆಯೊಳಗೆ ಯಾವುದೇ ಜೀವಿಗಳಿಗೆ ಜೀವ ಹಾನಿ ಮಾಡಬೇಡಿ.

*🦇  ಎಚ್ಚರವಹಿಸಿಹಿರಿಯರು ನಂಬಿಕೊಂಡು ಬಂದ ದೈವಗಳಿಗೆ* ; ಅವರದೇಆದಸಂಪ್ರದಾಯಗಳಿಗೆ,ಗೌರವ ತೋರಿಸುವುದು ನಮ್ಮ ಆದ್ಯ ಕರ್ತವ್ಯ.

*🤔,ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗಬಾರದು* . ದಕ್ಷಿಣ ದಿಕ್ಕಿಗೆ ಮುಖಮಾಡಿನಿರಂತರಕುಳಿತುಕೊಳ್ಳುವವ್ಯವಸ್ಥೆಇರಬಾರದು
ಬರೀನೆಲದಲ್ಲಿ ಮಲಗುವುದಾಗಲಿ, ಹರಿದ ವಸ್ತ್ರಗಳನ್ನು ಧರಿಸುವುದು ಮಾಡಬೇಡಿ.

*🪔,ಪ್ರತೀ ದಿನ ಬೆಳಗ್ಗೆ ಮತ್ತು ಸಂಜೆ ಸಂಧ್ಯಾಕಾಲದಲ್ಲಿ ದೇವರಿಗೆ ದೀಪ ಬೆಳಗುವ ಅಭ್ಯಾಸ ರೂಢಿಮಾಡಿ* . ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ವಿಷ್ಣು ಸಹಸ್ರನಾಮ ಅಥವಾ ನಿಮ್ಮ ಇಷ್ಟದೇವರ ಯಾವುದೇ ಸ್ತೋತ್ರ ಮಂತ್ರ {ಭಜನೆ}ಪಠಿಸಿ ಅಥವಾ ಅದನ್ನು ಮನೆಯಲ್ಲಿ ಕೇಳುವಂತೆ ನಿತ್ಯವ್ಯವಸ್ಥೆಮಾಡಿ. ಇದರಿಂದ ಮನೆಯಲ್ಲಿ ಸಾತ್ವಿಕ ವಾತಾವರಣ ವೃದ್ಧಿಯಾಗುತ್ತದೆ

*♨️,ಆಗ್ನೇಯ ದಿಕ್ಕಿನಲ್ಲಿ, ಅಂದರೆ ದಕ್ಷಿಣ ಮತ್ತು ಪೂರ್ವ ಮಧ್ಯದ ದಿಕ್ಕಿನಲ್ಲಿ ಅಡುಗೆ ಮನೆ ಇರಬೇಕು.ಅದುಇಲ್ಲವೆಂದಾದಲ್ಲಿ* , ನಿಮ್ಮ ಅಡುಗೆ ಮನೆಯ ಆಗ್ನೇಯ ದಿಕ್ಕಿನಲ್ಲಿ ಗ್ಯಾಸ್ ಸ್ಟವ್ ಅನ್ನಾದರೂ ಇಡಬೇಕು.🫘,ಅಡುಗೆ ಮನೆಯಲ್ಲಿ ಔಷಧಗಳನ್ನ ಇಡಬೇಡಿ. ನೆಗಟಿವ್ ಎನರ್ಜಿ ವಕ್ಕರಿಸುವ ಅಪಾಯವಿರುತ್ತದೆ.

🤔,ಆಹಾರ ಸೇವಿಸಿದ ನಂತರ ಎಂಜಲು ಮುಸುರೆ ಗಳನ್ನು ತುಂಬಾ ಕಾಲ ಹಾಗೆಯೇ ತೊಳೆಯದೆ ಇಡಬೇಡಿ

*🛌,ನೀವು ಮಲಗುವ ಕೋಣೆಯಲ್ಲಿಕನ್ನಡಿಇಟ್ಟುಕೊಳ್ಳಬೇಡಿ* . ಒಂದು ವೇಳೆ, ಕನ್ನಡಿ ತೆಗೆದುಹಾಕಲು ಸಾಧ್ಯವಿಲ್ಲವೆಂದಾದರೆ, ನಿಮ್ಮಮುಖಕಾಣದಂತೆ ಕನ್ನಡಿಯನ್ನದೂರಇಡಿ. ರಾತ್ರಿಹೊತ್ತಿನಲ್ಲಿಕನ್ನಡಿನೋಡುವುದು ಅಷ್ಟು ಸಮಂಜಸವಲ್ಲ

🛕 *,ವರ್ಷಕ್ಕೆ ಒಮ್ಮೆಯಾದರೂ ಗಣ ಹೋಮವನ್ನು ಮಾಡಿದರೆ ತುಂಬಾ ಉತ್ತಮ.* ಇದರಿಂದ ವಾಸ್ತು ಸದೃಢವಾಗಿರುತ್ತದೆ

*👨‍👩‍👦 ,ವರ್ಷಕ್ಕೆ ಒಮ್ಮೆಯಾದರೂ ಶ್ರೀವೈಷ್ಣವ  ಬ್ರಾಹ್ಮಣ ಸುವಾಸಿನಿ {ಅತಿಥಿಸತ್ಕಾರ} ಪೂಜೆ ಮಾಡಿ. ಯೋಗ್ಯರಿಗೆ ದಾನ ಮಾಡಿ* . ಇದರಿಂದ ಸಂಪತ್ತು ದೈವಿಕ ರೂಪ ಪಡೆಯುತ್ತದೆ
ಸಾಧ್ಯವಿದ್ದಲ್ಲಿ ನಿತ್ಯವೂ ಮಾಡಿ,

*🎪ಮನೆಯ ಸಮೀಪದ ದೇವಾಲಯಮತ್ತುಗ್ರಾಮದೇವರ ಸಂದರ್ಶನ ಉತ್ತಮ .*

🏤,ವರ್ಷಕ್ಕೆ ಒಮ್ಮೆಯಾದರೂ ಸಮಾಜದ {ಕುಟುಂಬದ} ಗುರುಪೀಠದಫಲಮಂತ್ರಾಕ್ಷತೆಯನ್ನು, ತರುವುದು.

🐡,ಮನೆಯ ಹಾಲ್ ನಲ್ಲಿ ಅಕ್ವೇರಿಯಂಇದ್ದರೆ,ಆಗ್ನೇಯಸೌಥ್ ಈಸ್ಟ್} ದಿಕ್ಕಿನಲ್ಲಿ ಅಕ್ವೇರಿಯಂ ಇಟ್ಟರೆಒಳ್ಳೆಯದು

*🛀,ಸ್ನಾನವಿಲ್ಲದೆ ಊಟ ಮಾಡುವುದು ಒಳ್ಳೆಯದಲ್ಲ. ಅನ್ನವು ದೇವರಿಗೆ ಸಮಾನ.*
ನಿಮಗೆ ಸಮಯವಿಲ್ಲದಿದ್ದರೂ ಕೆಲವು ನಿಯಮಗಳನ್ನಾದರೂ ಪಾಲಿಸಿ.ತಾನಾಗಿಯೇಮನೆಯಲ್ಲಿ, ಶಾಂತಿ ನೆಮ್ಮದಿ ಸಿಗುತ್ತೆ. ಹಣದಿಂದ ನಾವು ಏನೆಲ್ಲ ಕೊಂಡು ಕೊಳ್ಳಬಹುದು ಆದರೆ ಮನಸ್ಸಿಗೆಶಾಂತಿನೆಮ್ಮದಿಯನ್ನಲ್ಲ. ಅದು ಸಿಗಬೇಕು ಅಂದರೆ ನಮ್ಮ ಪೂರ್ವಜರುಹೇಳಿಕೊಟ್ಟ ಸಂಪ್ರದಾಯಗಳನ್ನುಆಚರಿಸಿದಾಗ, ಮಾತ್ರ ಸಾಧ್ಯ, 🙏

Leave a Reply

Your email address will not be published. Required fields are marked *