ಕಡಿಮೆ ಅಂಕ ಬಂತು ಎಂಬ ಕಾರಣಕ್ಕೆ 4ನೇ ತರಗತಿ ವಿದ್ಯಾರ್ಥಿಯನ್ನು ಶಿಕ್ಷಕಿ ಬಾಸುಂಡೆ ಬರುವಂತೆ ಹೊಡೆದಿದ್ದು ಶಿಕ್ಷಕಿ ವಿರುದ್ಧ ಪೋಷಕರು ದೂರು ದಾಖಲಿಸಿದ್ದಾರೆ.

Chikkaballapur News: ಟೆಸ್ಟ್​ನಲ್ಲಿ ಕಡಿಮೆ ಅಂಕ, 4ನೇ ತರಗತಿ ವಿದ್ಯಾರ್ಥಿನಿಗೆ ಬಾಸುಂಡೆ ಬರುವಂತೆ ಹೊಡದ ಶಿಕ್ಷಕಿ

ಸಾಂದರ್ಭಿಕ ಚಿತ್ರ

ಚಿಕ್ಕಬಳ್ಳಾಪುರ: ಅಜ್ಞಾನವೆಂಬ ಕತ್ತಲ ಕಳೆದು ಜ್ಞಾನವೆಂಬ ಬೆಳಕು ನೀಡುವ ಗುರುಗಳು ದಂಡಿಸೋದು ಸಾಮಾನ್ಯ. ಆದ್ರೆ ಬಾಸುಂಡೆ ಬರುವಂತೆ ಬಾರಿಸೋದಾ? ನಾಲ್ಕನೇ ತರಗತಿ ವಿದ್ಯಾರ್ಥಿನಿ(Student) ಮೇಲೆ ಶಿಕ್ಷಕಿ(Teacher) ಮನಸ್ಸೊ ಇಚ್ಚೆ ಥಳಿಸಿರುವ ಅಮಾನವೀಯ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ತಿಮ್ಮಸಂದ್ರ ಬಳಿ ಇರುವ ಡೇ ಪ್ರೀತಿ ಪಬ್ಲಿಕ್ ಶಾಲೆಯಲ್ಲಿ ನಡೆದಿದೆ.

ಚಿಂತಾಮಣಿ ಬೆಂಗಳೂರು ಮುಖ್ಯ ರಸ್ತೆಯಲ್ಲಿರುವ ಪ್ರೀತಿ ಪಬ್ಲಿಕ್ ಶಾಲೆಯಲ್ಲಿ ವೆಂಕಟಗಿರಿ ಕೋಟೆ ಬಡಾವಣೆಯ ನಿವಾಸಿ ದಯಾನಂದ ಎಂಬುವರ ಪುತ್ರಿ ಚೈತನ್ಯ ನಾಲ್ಕನೆ ತರಗತಿಯಲ್ಲಿ ವಾಸಂಗ ಮಾಡುತಿದ್ದು ಟೆಸ್ಟ್ ನಲ್ಲಿ ಉತ್ತಮ ಅಂಕ ಗಳಿಸಿಲ್ಲ ಎಂದು ಸಿಂಧೂಶ್ರೀ ಎಂಬ ಶಿಕ್ಷಕಿ ಕೋಲಿನಿಂದ ಮನಬಂದಂತೆ ಥಳಿಸಿದ್ದು, ಮೈ ಮೇಲೆ ಬಾಸುಂಡೆ ಬಂದು ರಕ್ತ ಹೆಪ್ಪುಗಟ್ಟಿದೆ ,ತನ್ನ ಮಗಳ ಸ್ಥಿತಿ ಕಂಡು ಕ್ಷೇತ್ರ ಶಿಕ್ಷಣಾಧಿಕಾರಿ ಎದುರು ಕಣ್ಣೀರಾಕಿದ್ದಾರೆ.

ಮಗಳು ಶಾಲೆಯಿಂದ ಮನೆಗೆ ಬಂದ ಬಳಿಕ ಶಾಲೆಯಲ್ಲಾದ ಘಟನೆಯನ್ನು ಪೋಷಕರಿಗೆ ವಿವರಿಸಿದ್ದಾಳೆ. ಆಗ ಮಗಳ ಬೆನ್ನ ಮೇಲೆ, ಕೈ ಮೇಲೆ ಊತ ಕಂಡ ಫೋಷಕರು ಮಗಳನ್ನು ಚಿಂತಾಮಣಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಶಾಲೆಗೆ ಹೋಗಿದ್ದಾರೆ. ಶಾಲೆಯ ವೈಸ್ ಪ್ರಿನ್ಸಿಪಲ್ ಬಳಿ ಈ ಬಗ್ಗೆ ಪ್ರಶ್ನಿಸಿದ್ದಾರೆ. ಮಕ್ಕಳನ್ನು ಹೊಡೆಯಬೇಡಿ ಎಂದು ಹೇಳೀದರೂ ಟೆಸ್ಟ್​ನಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕಾಗಿ ಶಿಕ್ಷಕಿ ಹೊಡೆದಿದ್ದಾರೆ ಎಂದು ಚೇತನ್ಯಾಳ ತಂದೆ ಪ್ರಿನ್ಸಿಪಲ್​ ಮೇಲೆ ಸಿಟ್ಟಾಗಿದ್ದಾರೆ. ಈ ವೇಳೆ ಪ್ರಿನ್ಸಿಪಲ್, ನಾವು ಶಿಕ್ಷಕರಿಗೆ ಹೊಡೆಯದಂತೆ ಎಚ್ಚರಿಕೆ ನೀಡಿದ್ದೇವೆ. ಆದ್ರೆ ಈ ಶಿಕ್ಷಕಿ ಹೊಡೆದಿದ್ದಾರೆ. ಈಗ ಅವರು ಮನೆಗೆ ಹೋಗಿದ್ದಾರೆ. ನಾವು ಅವರಿಗೆ ಬುದ್ಧಿ ಹೇಳುತ್ತೇವೆ ಹೋಗಿ ಎಂದು ಸಮಾಧಾನ ಮಾಡಿ ಕಳಿಸಿದ್ದಾರೆ. ಇದಾದ ಬಳಿಕ ಚೇತನ್ಯಾಳ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇನ್ನೂ ವಿಷಯ ತಿಳಿದ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್, ಪ್ರೀತಿ ಪಬ್ಲಿಕ್ ಶಾಲೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ರು, ಮಕ್ಕಳಿಗೆ ಥಳಿಸಬಾರದೆಂದು ನ್ಯಾಯಾಲಯದ ಆದೇಶ ಇದ್ರು, ಫಲಿತಾಂಶದ ಹಿಂದೆ ಬಿದ್ದಿರುವ ಪ್ರೀತಿ ಪಬ್ಲಿಕ್ ಎಂಬ ಖಾಸಗಿ ಶಾಲೆ, ಮಕ್ಕಳಿಗೆ ದೈಹಿಕ ಹಿಂಸೆ ಜೊತೆಗೆ ಮಾನಸಿಕ ಹಿಂಸೆ ನೀಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ನಾಲ್ಕನೆ ತರಗತಿ ವಿದ್ಯಾರ್ಥಿಗೆ ಥಳಿಸಿರುವ ಬಗ್ಗೆ ಶಿಕ್ಷಕಿ ಹಾಗು ಶಾಲೆ ಮ್ಯಾನೇಜ್ಮೆಂಟ್ ವಿರುದ್ದ ಕ್ರಮ ಕೈಗೊಳ್ತೇವೆ ಎಂದಿದ್ದಾರೆ.

Leave a Reply

Your email address will not be published. Required fields are marked *

Latest News