ದಿವಂಗತ ರಾಜಾ ವಸಂತನಾಯಕ ನನಗೆ ತಮ್ಮನಾಗಿದ್ದರು ಸಹ ತಂದೆಯ ಸ್ಥಾನದಲ್ಲಿ ನಿಂತು ಧೈರ್ಯ ತುಂಬುವ ಕೆಲಸ ಮಾಡಿದ್ದರು,ಅಂತಹ ವ್ಯಕ್ತಿಯನ್ನು ಕಳೆದುಕೊಂಡಿರುವುದು ನೋವಿನ ಸಂಗತಿ ಎಂದು ಪುರಸಭೆ ಮಾಜಿ ಅಧ್ಯಕ್ಷೆ ಲಕ್ಷ್ಮಿದೇವಿ ನಾಯಕ ತಿಳಿಸಿದರು.

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ನಾಲಾ ರೋಡ್ ನಲ್ಲಿ ನೇತಾಜಿ ಯುವಕರ ಸಂಘ ಗಣೇಶ ಚತುರ್ಥಿ ಅಂಗವಾಗಿ ದಿವಂಗತ ರಾಜಾ ವಸಂತನಾಯಕರ ಸ್ಮರಣಾರ್ಥ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ನೇತಾಜಿ ಯುವಕ ಸಂಘ ನನ್ನ ಸಹೋದರನ ನೆನಪಿನಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ. ನನ್ನ ಸಹೋದರ ರಾಜಾ ವಸಂತನಾಯಕ ಯಾವುದೆ ಪಕ್ಷದ ನಾಯಕರಿರಲಿ ಅವರೊಂದಿಗೆ ಯಾವ ರೀತಿ ಇದ್ದರು ಎನ್ನುವುದು ಹಿರಿಯರು ವ್ಯಕ್ತಪಡಿಸಿದ ಅಭಿಪ್ರಾಯವೇ ತೋರಿಸುತ್ತದೆ.

ಡಾಕ್ಟರ್ ಚಂದ್ರಶೇಖರ ಸ್ವಾಮಿ ಮಾತನಾಡಿ, ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ನಂತರ ಅವರ ಸೇವೆ ಎಂತದ್ದು ಎಂದು ನಾವು ನೋಡಿದ್ದೇವೆ.ಅದೆ ರೀತಿಯಲ್ಲಿ ರಾಜಾ ವಸಂತನಾಯಕ ನಮ್ಮೊಂದಿಗಿಲ್ಲದಿದ್ದರು ಅವರು ಮಾಡಿದ ಸೇವೆ,ಅವರು ಸತ್ತಾಗ ಜನ ಸೇರಿರುವುದೆ ಸಾಕ್ಷಿ ಎಂದು ಬಣ್ಣಿಸಿದರು.

Leave a Reply

Your email address will not be published. Required fields are marked *