ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಜೊತೆ ಇದ್ದಾಗಲೂ ಸಹ ಜೆಡಿಎಸ್ ಬೇರೆಯಾದವರು. ಇದು ಬಿಜೆಪಿಯಿಂದ ಬೇರೆ ಬೇರೆಯಾಗುವ ಸೂಚನೆಗಳು ಎಂದರು.

ಮುಡಾ ಹಗರಣದ ವಿಚಾರವಾಗಿ ಸಿಎಂ‌ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ‌.‌ ಈ ಬಗ್ಗೆ ಈಗಾಗಲೇ ಸಮಗ್ರ ತನಿಖೆ ನಡೆಯುತ್ತಿದೆ. ಆದರೆ ಪಾದಯಾತ್ರೆ ಇದು ಕೇವಲ ರಾಜಕೀಯ ಕಾರಣಕ್ಕೆ ಮಾಡುತ್ತಿದ್ದಾರೆ. ನಾವು ಯಾವುದೇ ಕಾರಣಕ್ಕೂ ಅವರ ಪಾದಯಾತ್ರೆಗೆ ಅನುಮತಿ ನೀಡಲ್ಲ ಎಂದರು.

ಪ್ರತಿಭಟನೆ ಮಾಡುವುದು ಅವರ ಹಕ್ಕು. ಆದ್ರೆ ಕಾನೂನು ಬಾಹಿರವಾಗಿ ಪ್ರತಿಭಟಿಸಿದ್ರೆ ಸೂಕ್ತ ಕ್ರಮ‌ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಿಎಂ , ಡಿಸಿಎಂ ದೆಹಲಿ ಭೇಟಿ ವಿಚಾರವಾಗಿ ಮಾತನಾಡಿ, ಸಿಎಂ ಡಿಸಿಎಂ ದೆಹಲಿ‌ ಭೇಟಿ ವಿಚಾರದಲ್ಲಿ ಯಾವುದೇ ವಿಶೇಷತೆ ಕಲ್ಪಿಸುವ ಅಗತ್ಯವಿಲ್ಲ. ಪಿಎಸ್ ಐ ನೇಮಕಾತಿ‌ ವಿಳಂಬ ವಿಚಾರದಲ್ಲಿ ಕೆಲವೊಂದು ತಾಂತ್ರಿಕ‌ ಸಮಸ್ಯೆಗಳಿವೆ. ಕಲ್ಯಾಣ‌ ಕರ್ನಾಟಕ ಭಾಗದವರ ಮೀಸಲಾತಿ ವಿಚಾರದಲ್ಲಿ‌ ಕೆಲವು ಗೊಂದಲಗಳಿವೆ. ಅವೆಲ್ಲ ಬಗೆಹರಿಸಿ ಶೀಘ್ರವೇ ಈ ವಿಚಾರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬೆಳೆಹಾನಿ ಪರಿಶೀಲನೆ ಕುರಿತು ಎಲ್ಲ ಜಿಲ್ಲಾ ಉಸ್ತುವಾರಿ‌ ಸಚಿವರುಗಳು ಆಯಾ ಜಿಲ್ಲೆಗಳಲ್ಲಿ ಪರಿಶೀಲನೆ ಮಾಡುತ್ತಿದ್ದಾರೆ. ಕಂದಾಯ ಸಚಿವರು ಸಹ ಎಲ್ಲ‌ ಕಡೆಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಈಗ ಜನರ ನೆನಪಾಗಿದೆ ಎಂದರು.

Leave a Reply

Your email address will not be published. Required fields are marked *