ಕಳೆದ ಮೂರು ದಿನಗಳ ಹಿಂದೆ ಚಿಕ್ಕಬಳ್ಳಾಪುರ ನಗರದಲ್ಲಿ ಸರಗಳ್ಳತನ ಪ್ರಕರಣಗಳು ಮಾಸುವ ಮುನ್ನವೇ ಇಂದು ಚಿಕ್ಕಬಳ್ಳಾಪುರ ನಗರಸಭೆಯ ಕಚೇರಿ ಪಕ್ಕದಲ್ಲಿರುವ ಸುಬ್ಬರಾಯನಪೇಟೆಯಲ್ಲಿ ಮಹಿಳೆಯರು ವಾಕಿಂಗ್ ಮಾಡುವ ವೇಳೆ ಬೈಕ್ ಬಂದ ಕಳ್ಳರು ಮಹಿಳೆಯ ಬಳಿ ಬಂದು ಕತ್ತಿನಲ್ಲಿದ್ದ ಚೈನ್ ಕದ್ದು ಪರಾರಿಯಾಗಲು ಮುಂದಾಗಿದ್ದಾರೆ. ಇದೇ ವೇಳೆ ಮಹಿಳೆ ಚೈನ್ ನ್ನು ಗಟ್ಟಿಯಾಗಿ ಹಿಡಿದುಕೊಂಡ ಹಿನ್ನಲೇ ಅರ್ಧ ಚೈನ್ ಪೀಸ್ ಆಗಿದ್ದು ಉಳಿದ ಅರ್ಧ ಚೈನ್ ತಗೆದುಕೊಂಡು ಎಸ್ಕೇಪ್ ಆಗಿದ್ದಾನೆ.
ನಗರದ ಗಾಯತ್ರಿ ಮತ್ತು ಲಕ್ಷ್ಮಿ ಎಂಬುವವರನ್ನು ಇಂದು ಬೆಳಗಿನ ಜಾವ ವಾಕಿಂಗ್ ಮಾಡುವ ವೇಳೆ ಅಪರಿಚಿತ ದ್ವಿಚಕ್ರ ವಾಹನ ಸವಾರರು ಗಾಯತ್ರಿ ಎನ್ನುವವರ ಕತ್ತಿನಲ್ಲಿದ್ದ ಮಾಂಗಲ್ಯ ಸರಕ್ಕೆ ಕೈ ಹಾಕಿದ್ದಾರೆ. ಇದರಿಂದ ಕಿರುಚಾಡಿದ ಮಹಿಳೆ ಚೈನ್ ನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾಳೆ. ಇದರಿಂದ ಅರ್ದ ಚೈನ್ ಮತ್ತು ನಾಲ್ಕು ಗುಂಡುಗಳು ಕಳ್ಳರ ಪಾಲಾಗಿದೆ. ನಂತರ, ತಮ್ಮ ಸ್ನೇಹಿತೆಯಾದ ಲಕ್ಷ್ಮಿ ಕತ್ತಿಗೆ ಕೈ ಹಾಕಲು ಮುಂದಾಗಿದ್ದು ಸಾಧ್ಯವಾಗದ ಹಿನ್ನಲೇ ತಕ್ಷಣ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ನಗರಠಾಣಾ ಪಿ ಎಸ್ ಐ ನಂಜುಂಡಯ್ಯ ಹಾಗೂ ಸಿಬ್ಬಂದಿ ಭೇಟಿ ನೀಡಿ ಸರದ ಬಗ್ಗೆ ಹಾಗೂ ಘಟನೆಯ ಬಗ್ಗೆ ಮಾಹಿತಿ ಪಡೆದು ದೂರು ದಾಖಲಿಸಿಕೊಂಡು ಕಳ್ಳರಿಗಾಗಿ ಬಲೆ ಬೀಸಿದ್ದಾರೆ. ಸದ್ಯ ಚಿಕ್ಕಬಳ್ಳಾಪುರದಲ್ಲಿ ಇತ್ತಿಚಿನ ದಿನಗಳಲ್ಲಿ ಏರಿಕೆಯಾಗಿರುವ ಸರಗಳ್ಳತನ ಪ್ರಕರಣಗಳು ಜನರಲ್ಲಿ ಆತಂಕವನ್ನು ಉಂಟುಮಾಡಿವೆ. ನಾಗರಿಕರು ತಮ್ಮ ಸುರಕ್ಷತೆ ಬಗ್ಗೆ ಹೆಚ್ಚಿನ ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ಸಲಹೆ ನೀಡಿದ್ದಾರೆ.