ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಬಂಡಬೊಯೀನಹಳ್ಳಿ ಗ್ರಾಮದಲ್ಲಿ13 ವರ್ಷಗಳಿಂದ ಪೂರ್ಣಗೊಳ್ಳದ ಅಂಗನವಾಡಿ ಕಾಮಗಾರಿ.ಸೂಕ್ತ ಕಟ್ಟಡವಿಲ್ಲದೆ ಮಳೆ ಗಾಳಿಯಲ್ಲೆ ನಮ್ಮ ಗ್ರಾಮದ ಮುಗ್ಧ ಮಕ್ಕಳು ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿ ಸೂಕ್ತ ಅಂಗನವಾಡಿ ಕಟ್ಟಡಕ್ಕೆ ಆಗ್ರಹಿಸಿದರು .
ಗ್ರಾಮದ ಮುಖಂಡ ಚೆಲುವರಾಜು ಮಾತನಾಡಿ ನಮ್ಮ ಗ್ರಾಮ ಪಟ್ಟಣದಿಂದ ಕೇವಲ ನಾಲ್ಕು ಕಿಲೋಮೀಟರ್ ವ್ಯಾಪ್ತಿಯಲ್ಲಿದೆ ಆದರೆ 2009ರಲ್ಲಿ ಪ್ರಾರಂಭಗೊಂಡ ಅಂಗನವಾಡಿ ಕೇಂದ್ರಕ್ಕೆ.2013 ರಲ್ಲಿ ಸುಸರ್ಜಿತ ಅಂಗನವಾಡಿ ಕಟ್ಟಡ ಕಾಮಗಾರಿ ಆರಂಭಗೊಂಡು 13 ವರ್ಷಗಳು ಕಳೆದರೂ ಕಾಮಗಾರಿ ಮಾತ್ರ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತು ಗಿಡ ಗೆಡ್ಡೆಗಳ ತಾಣವಾಗಿದೆ. ಸೂಕ್ತ ಕಟ್ಟಡವಿಲ್ಲದ ಪರಿಣಾಮ ನಮ್ಮ ಗ್ರಾಮದ ಮಕ್ಕಳು ಮೊದಲ ತಳಪಾಯದ ಶಿಕ್ಷಣವನ್ನು ಗ್ರಾಮದಲ್ಲಿರುವ ಸರ್ಕಾರಿ ಶಾಲಾ ಹೊರ ಭಾಗದಲ್ಲಿರುವ ಜಗಲಿಯ ಮೇಲೆ ಬಿಸಿಲು ಗಾಳಿ ಮಳೆಗಾಲದಲ್ಲೂ ಪಡೆದುಕೊಳ್ಳುತ್ತಿದ್ದಾರೆ ಈ ಅವ್ಯವಸ್ಥೆಯಿಂದ ನಮ್ಮ ಗ್ರಾಮದ ಪುಟ್ಟ ಮಕ್ಕಳ ಶಿಕ್ಷಣ ಕುಂಠಿತಗೊಂಡು ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀಳುತ್ತಿದೆ ಹಾಗೂ ಮಳೆ ಬಂದರೆ ಈ ಸ್ಥಳ ಸೋರುತ್ತದೆ. ಇರುವ ಸರ್ಕಾರಿ ಶಾಲೆಯ ಸಣ್ಣ ಕೊಠಡಿಯಲ್ಲಿಯೇ ಅಡುಗೆ ಅನಿಲ ಸಿಲಿಂಡರ್ ಇಟ್ಟುಕೊಂಡು ಅಡುಗೆ ಮಾಡುತ್ತಾರೆ. ಪಕ್ಕದಲ್ಲಿ ಕೊಠಡಿಯಲ್ಲಿ ಅಡುಗೆ ಸಾಮಗ್ರಿ ಶೇಖರಿಸಿಟ್ಟುಕೊಂಡಿದ್ದಾರೆ. ಇಂತಹ ಅಧ್ವಾನದ ವ್ಯವಸ್ಥೆ ಇದ್ದರೂ ಸರ್ಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಅರ್ಧ ನಿಂತಿರುವ ಕಟ್ಟಡ ಪೂರ್ಣಗೊಳಿಸಲು ಚಿಂತಿಸುತ್ತಿಲ್ಲ ಎಂದು ದೂರಿದರು.
ಶಾಸಕ ಭೇಟಿ ಬಂಡಬೊಯೀನಹಳ್ಳಿ ಗ್ರಾಮಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ತೆರಳಿದ ಸಂದರ್ಭದಲ್ಲಿ ಬಗ್ಗೆ ಗ್ರಾಮಸ್ಥರು ಶಾಸಕ ಹೆಚ್. ಟಿ ಮಂಜು ಅವರಿಗೆ ಮನವಿ ಮಾಡಿದ ಹಿನ್ನಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಕರೆಯ ಮೂಲಕ ಮಾತನಾಡಿ ಶೀಘ್ರವೇ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾ.ಮ ಸದಸ್ಯ ಪಯಾಜ್ ಉಲ್ಲಾಖಾನ್, ಗ್ರಾ.ಪಂ ಮಾಜಿ ಅಧ್ಯಕ್ಷ ರಾಮಕೃಷ್ಣೇಗೌಡ, ಯುವ ಮುಖಂಡ ಹರೀಶ್, ಜಗದೀಶ್, ಕುಮಾರ್, ಸೇರಿದಂತೆ ಇತರರಿದ್ದರು.