ಕೃಷಿ ಸಚಿವ ಚೆಲುವರಾಯಸ್ವಾಮಿ ಚಿಕ್ಕಬಳ್ಳಾಪುರ ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಈ ವೇಳೆ ರೈತರ ಗದ್ದೆಗೆ ಇಳಿದು ನಾಟಿ ಮಾಡಿದರು. ಈ ವೇಳೆ ಮಾತನಾಡಿ,ಕೇಂದ್ರ ಸಚಿವ ಕುಮಾರಸ್ವಾಮಿ ಮೇಲೆ ವಾಗ್ದಾಳಿ ನಡೆಸಿದರು. ರಾಜ್ಯ ಪಾಲರ ಬಳಿ ಕುಮಾರಸ್ವಾಮಿಯವರನ್ನು ಪ್ರಾಸಿಕ್ಯೂಷನ್ ಗೆ ಒಪ್ಪಿಸಲು ನವೆಂಬರ್ ನಲ್ಲಿಯೇ ಕೇಳಿದ್ದಾರೆ.
ಅವರು ಅನುಮತಿ ಕೊಡಬೇಕಲ್ಲವಾ, ಸಿದ್ದರಾಮಯ್ಯನವರದ್ದು ಏನೂ ಇಲ್ಲ ಅಂದ್ರೂ ಕೊಟ್ಟಿದ್ದಾರೆ, ಅವರದ್ದು ಕೊಟ್ಟ ಮೇಲೆ ಕುಮಾರಸ್ವಾಮಿಯದ್ದೂ ಕೊಡಬೇಕಲ್ಲವಾ, ಎಷ್ಟು ದಿನ ಇವರು ಇದೇ ರೀತಿ ಆಟ ಆಡುತ್ತಾರೆ ನೋಡೋಣಾ, ಇವರ ಜೊತೆಯಲ್ಲಿ ನಿರಾಣಿ, ಶಶಿಕಲಾ ಜೊಲ್ಲೆ, ಜನಾರ್ಧನರೆಡ್ಡಿಯವರ ಪ್ರಕರಣ ಕೂಡ ಪೆಂಡಿಂಗ್ ಇದೆ. ಈ ನಾಲ್ಕು ಜನರ ವಿರುದ್ಧ ಲೋಕಾಯುಕ್ತ ಸಂಸ್ಥೆಯಲ್ಲಿ ಒಂದು ವರ್ಷದಿಂದ ಪ್ರಕರಣ ಪೆಂಡಿಂಗ್ ಇದೆ.
ಅವರ ತನಿಖೆಗೆ ಅನುಮತಿ ಕೇಳುತ್ತಿದ್ದಾರೆ. ಇಂದು ಪ್ರಾಸಿಕ್ಯೂಷನ್ ಕೊಟ್ಟಿರುವುದು ರಾಜಕೀಯ ತೀರ್ಮಾನಗಳು. ರಾಜ್ಯಪಾಲರು ಬಿಜೆಪಿ, ಆರ್ ಎಸ್ ಎಸ್, ಜೆಡಿಎಸ್ ಮತ್ತು ಕೇಂದ್ರ ಸರಕಾರ ಏನು ಹೇಳುತ್ತೋ ಅದೇ ಮಾತನ್ನು ಕೇಳುತ್ತಾರೆ. ರಾಜಭವನವನ್ನೂ ಸಹ ರಾಜಕೀಯ ಕಚೇರಿಯಾಗಿ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯಪಾಲರ ಹುದ್ದೆ ಸಂವಿಧಾನಿಕ ಹುದ್ದೆ, ಅವರು ಒತ್ತಾಯ ಪೂರ್ವಕವಾಗಿ ಕೆಲಸ ಮಾಡಬಾರದು. ನಾವು ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಿ ಸಲಹೆ ಕೊಟ್ಟರೂ ಅದನ್ನು ಪರಿಗಣಿಸಲಿಲ್ಲ ಎಂದು ಆಕ್ರೋಶ ಹೊರ ಹಾಕಿದರು.