ಗದಗ: ಆಕಸ್ಮಿಕ ಬೆಂಕಿ ತಗುಲಿ ದನದ ಕೊಟ್ಟಿಗೆ ಸಂಪೂರ್ಣ ಸುಟ್ಟು ಕರಕಲಾಗಿರೋ ಘಟನೆ ರೋಣ ತಾಲೂಕಿನ ಜಿಗಳೂರು ಗ್ರಾಮದಲ್ಲಿ ನಡೆದಿದೆ.
ರೈತ ಹನುಮಂತ ಬೇಡರ ಎನ್ನೋರಿಗೆ ದನದ ಕೊಟ್ಟಿಗೆ ಸೇರಿದ್ದಾಗಿದ್ದು ಬೆಂಕಿ ತಗುಲಿದ ವೇಳೆ ಅಲ್ಲೇ ಕಟ್ಟಿದ್ದ ಹೋರಿ ಕರು ಅಸುನೀಗಿದೆ.
ಎರಡು ಎತ್ತುಗಳಿಗೂ ಗಂಭೀರ ಗಾಯಗಳಾಗಿವೆ, ಜೊತೆಗೆ ಕೊಟ್ಟಿಗೆಯಲ್ಲಿದ್ದ ವಸ್ತುಗಳು ಹಾಗೂ ಒಣ ಕೆಂಪು ಮೆಣಸಿನಕಾಯಿ ಸಹ ಸುಟ್ಟಿವೆ.
ಜಾನುವಾರುಗಳನ್ನೇ ನೆಚ್ಚಿಕೊಂಡಿದ್ದ ರೈತನೀಗ ಸಂಕಷ್ಟಕ್ಕೀಡಾಗಿದ್ದಾನೆ. ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.