ಬಿಗ್ ಬಿ ಅಮಿತಾಭ್ ಬಚ್ಚನ್ ಜೊತೆಗಿರುವ ಫೋಟೊವನ್ನು ಸೂಪರ್ ಸ್ಟಾರ್ ರಜನಿಕಾಂತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸುದೀರ್ಘ ಸಮಯದ ನಂತರ ಇಬ್ಬರೂ ಜೊತೆಯಾಗಿ ನಟಿಸುವ ಸುಳಿವು ನೀಡಿದ್ದಾರೆ.
ಟಿಜೆ ಜ್ಞಾನವೆಲ್ ನಿರ್ದೇಶನದ ತಲೈವಾರ್ 170 ಚಿತ್ರದಲ್ಲಿ ರಜನಿಕಾಂತ್ ಈ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಕೂಡ ನಟಿಸಲಿದ್ದಾರೆ. ಈ ಮೂಲಕ ಇಬ್ಬರು ಸ್ಟಾರ್ ನಟರು ಸುಮಾರು 33 ವರ್ಷಗಳ ನಂತರ ಮೊದಲ ಬಾರಿ ಜೊತೆಯಾಗಿ ನಟಿಸಲಿದ್ದಾರೆ.
ಅಕ್ಟೋಬರ್ 25ರಂದು ತಲೈವಾ್ 170 ಚಿತ್ರದ ಚಿತ್ರೀಕರಣ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಎಕ್ಸ್ ನಲ್ಲಿ ನನ್ನ ಮಾರ್ಗದರ್ಶಿ ಎಂದು ಹೇಳಿಕೊಂಡು ಅಮಿತಾಬ್ ಜೊತೆಗಿರುವ ಹೊಸ ಫೋಟೊವನ್ನು ರಜನಿಕಾಂತ್ ಹಂಚಿಕೊಂಡಿದ್ದಾರೆ.
ನನ್ನ ಮಾರ್ಗದರ್ಶಿ ಜೊತೆ 33 ವರ್ಷಗಳ ನಂತರ ಮತ್ತೆ ಸಿನಿಮಾ ಮಾಡುತ್ತಿದ್ದೇನೆ. ಇದೊಂದು ಅದ್ಭುತ ಅನುಭವ ಆಗಿದ್ದು, ನನ್ನ ಹೃದಯ ಖುಷಿಯಿಂದ ಮಿಡಿಯುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಟಿಜೆ ಜ್ಞಾನವೇಶ್ ಜೈ ಭೀಮ್ ಚಿತ್ರದಿಂದ ಖ್ಯಾತಿ ಪಡೆದ ನಿರ್ದೇಶಕರಾಗಿದ್ದು, ರಜನಿಕಾಂತ್ ಗೆ ಮೊದಲ ಬಾರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷ ಅಂದರೆ ಈ ಚಿತ್ರದಲ್ಲಿ ಇಬ್ಬರು ಹಿರಿಯ ನಟರು ಒಂದಾಗಿ ನಟಿಸುತ್ತಿರುವುದು.
1991ರಲ್ಲಿ ಸೂಪರ್ ಹಿಟ್ ಚಿತ್ರ ಹಮ್ ಚಿತ್ರದಲ್ಲಿ ಇಬ್ಬರು ಸ್ಟಾರ್ ಗಳು ಒಟ್ಟಿಗೆ ನಟಿಸಿದ್ದರು.
ಜೈಲರ್ ಚಿತ್ರ 650 ಕೋಟಿ ರೂ. ಸಂಗ್ರಹಿಸಿದ್ದು, ರಜನಿಕಾಂತ್ ಸತತ ವೈಫಲ್ಯದ ನಂತರ ಭರ್ಜರಿ ಯಶಸ್ಸಿಗೆ ಮರಳಿದ್ದಾರೆ. ಇದರಿಂದ ಈ ಚಿತ್ರದ ಬಗ್ಗೆಯೂ ಕುತೂಹಲ ಹೆಚ್ಚಾಗಿದೆ.