ಶಕ್ತಿ ಯೋಜನೆಗೆ ಬಲ ತುಂಬಲು 5000 ಕೋಟಿ ಹೊಸ ಬಸ್ ಖರೀದಿಸಲಾಗುವುದು. ಇದಕ್ಕಾಗಿ 2000 ಕೋಟಿ ರೂ. ವೆಚ್ಚವಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ಇಲಾಖೆ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಸಭೆ ಮಾಡಿದ್ದು, ಶಕ್ತಿ ಯೋಜನೆಯಿಂದ ರಾಜ್ಯದಲ್ಲಿ 80 ಕೋಟಿ ಜನರು ಲಾಭ ಪಡೆಯುತ್ತಿರುವ ಮಾಹಿತಿ ನೀಡಿದ್ದೇನೆ ಎಂದರು.
ಕೇರಳದ 4 ವರ್ಷಗಳಿಂದ ಬಸ್ ಖರೀದಿ ಮಾಡಿರಲಿಲ್ಲ. ಸಿಎಂ ಶೀಘ್ರವೇ ಬಸ್ ಖರೀದಿ ಮಾಡಲು ಸೂಚಿಸಿದ್ದಾರೆ. 5500 ಸಾವಿರ ಬಸ್ ಖರೀದಿ ಮಾಡಲಿದ್ದೇವೆ. ಡೀಸಲ್, ನಾನ್ ಡೀಸಲ್, ಬ್ಯಾಟರಿ, ಸ್ಲೀಪರ್ ಸೇರಿದಂತೆ ಎಲ್ಲಾ ಮಾದರಿಯ ಬಸ್ ಇರಲಿದೆ. ಇದಕ್ಕಾಗಿ 2ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಅವರು ಹೇಳಿದರು.
ಮೈಸೂರು ಎರಡು ಡಿವಿಷನ್ ಮಾಡಲು ಸೂಚಿಸಿದ್ದೇವೆ. 8 ಸಾವಿರ ಜನರನ್ನ ಹೊಸದಾಗಿ ಅಪಾಯಿಂಟ್ ಮಾಡಿಕೊಳ್ಳಲು ಸೂಚಿಸಲಾಗಿದೆ. ಬಸ್ ಕೂಡ ಬರಲಿದೆ, ಹೊಸ ಅಪಾಯಿಂಟ್ ಕೂಡ ನಡೆಯಲಿದೆ. ಸಿಎಂ ಬಳಿ ವಾಹನ ತೆರಿಗೆಯಿಂದ ವಿನಾಯಿತಿ ನೀಡಲು ಕೋರಲಾಗಿದೆ ಎಂದು ಅವರು ಹೇಳಿದರು.
5ರಿಂದ 15 ಲಕ್ಷದ ವಾಹನಗಳಿಗೆ ಲೈಫ್ ಟ್ಯಾಕ್ಸ್ ಹಾಕಲಾಗ್ತಿತ್ತು. ಸಂಘಗಳು ವಿನಾಯಿತಿ ನೀಡಲು ಕೇಳಿದ್ದವು. ಆ ಬಗ್ಗೆಯೂ ಸಿಎಂ ಬಳಿ ಮನವಿ ಮಾಡಿದ್ದೇವೆ. ಎಲ್ಲೋ ಬೋರ್ಡ್ ನವರು ಲೋನ್ ತಗೋತಾರೆ. ಹಳೆ ಗಾಡಿ ತಗೋತಾರೆ. ಹಾಗಾಗಿ ಹಿಂದಿನ ರೀತಿಯಲ್ಲೇ ಟ್ಯಾಕ್ಸ್ ಇರಲಿದೆ ಎಂದು ಅವರು ವಿವರಿಸಿದರು.
ಶಕ್ತಿ ನೂರಕ್ಕೆ ನೂರು ಸಕ್ಸಸ್ ಆಗಿದೆ. 80 ಕೊಟಿ ಜನ ಸಾರಿಗೆ ಬಸ್ ನಲ್ಲಿ ಸಂಚರಿಸಿದ್ದಾರೆ. ರೇಷನ್, ಬದಲಿಗೆ ಹಣ ಹೋಗುತ್ತಿದೆ. ಗೃಹಲಕ್ಷ್ಮಿ ಮನೆಗೆ ಹೋಗುತ್ತಿದೆ. ಗೃಹಜ್ಯೋತಿ ಯೋಜನೆ ಕರೆಂಟ್ ಎಲ್ಲಾ ಕಡೆ ಇಲ್ಲ. ಜಲಾಶಯಗಳಲ್ಲಿ ನೀರಿಲ್ಲ. ನೀರಿಲ್ಲದಿದ್ದಾಗ ಸಹಜವಾಗಿ ಉತ್ಪಾದನೆ ಕಡಿಮೆಯಾಗಲಿದೆ ಎಂದು ಅವರು ಹೇಳಿದರು.