ಕಠ್ಮಂಡು: ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಭಾನುವಾರ 6.1 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ. ರಾಷ್ಟ್ರೀಯ ಭೂಕಂಪ ಮಾನಿಟರಿಂಗ್‌ ಮತ್ತು ಸಂಶೋಧನಾ ಕೇಂದ್ರ ಪ್ರಕಾರ, ಧಾಡಿಂಗ್‌   ಜಿಲ್ಲೆಯಲ್ಲಿ ಭೂಕಂಪನವು ಬೆಳಗ್ಗೆ 7.39ಕ್ಕೆ ದಾಖಲಾಗಿದೆ.

ಭೂಕಂಪನದಿಂದ  ಯಾವುದೇ ಸಾವು-ನೋವು, ಪ್ರಾಣಹಾನಿ ಸಂಭವಿಸಿಲ್ಲ. ಧಾಡಿಂಗ್‌ ಮಾತ್ರವಲ್ಲದ, ಬಾಗೃತಿ ಮತ್ತು ಗಂಡಕಿ ಪ್ರಾಂತ್ಯಗಳ ಇತರೆ ಜಿಲ್ಲೆಗಳಲ್ಲೂ ಕಂಪನವಾಗಿದೆ.

ನೇಪಾಳದಲ್ಲಿ ಭೂಕಂಪನಗಳು ಸಾಮಾನ್ಯವಾಗಿವೆ. ಇದು ಟಿಬೇಟಿಯನ್‌ ಮತ್ತು ಭಾರತೀಯ ಟೆಕ್ಟೋನಿಕ್‌ ಫ್ಲೇಟ್‌ಗಳು ಸಂಧಿಸುವ ಪರ್ವತಶ್ರೇಣಿಯ ಮೇಲೆ ನೆಲೆಗೊಂಡಿದೆ ಮತ್ತು ಪ್ರತಿ ಶತಮಾನಕ್ಕೂ ಎರಡು ಮೀಟರ್‌ಗಳಷ್ಟು ಒಂದಕ್ಕೊಂದು ಹತ್ತಿರವಾಗುತ್ತವೆ.

ಇದು ಭೂಕಂಪನಗಳ ರೂಪದಲ್ಲಿ ಬಿಡುಗಡೆಯಾಗುವ ಒತ್ತಡಕ್ಕೆ ಕಾರಣವಾಗುತ್ತದೆ. 2015ರಲ್ಲಿ ನೇಪಾಳದಲ್ಲಿ 7.8 ತೀವ್ರತೆಯ ಭೂಕಂಪನ ಉಂಟಾಗಿತ್ತು. ಇದರಲ್ಲಿ 9 ಸಾವಿರ ಮಂದಿ ಮೃತಪಟ್ಟಿದ್ದರು. ಪಿಡಿಎನ್‌ಎ ವರದಿಯಂತೆ ನೇಪಾಳವು ವಿಶ್ಬದ 11ನೇ ಅತಿ ಹೆಚ್ಚು ಭೂಕಂಪನ ಪೀಡಿತ ರಾಷ್ಟ್ರವಾಗಿದೆ.

Leave a Reply

Your email address will not be published. Required fields are marked *