ಉದ್ಯಮಿ ದೇವನಾತ್ ವೈಕ್ಯೆ ಅವರು ಪ್ರಶಾಂತ್ ಸಂಬರ್ಗಿ ವಿರುದ್ಧ ದೂರು ನೀಡಿದವರು. ಈ ದೂರನ್ನು ಆಧರಿಸಿ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ.

ಸುಳ್ಳು ದೂರು ಪ್ರಕರಣ; ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ವಿರುದ್ಧ ಎಫ್​ಐಆರ್​ ದಾಖಲು

ಪ್ರಶಾಂತ್ ಸಂಬರ್ಗಿ

‘ಬಿಗ್ ಬಾಸ್ ಕನ್ನಡ’ (Bigg Boss Kannada) ಎಂಟನೇ ಹಾಗೂ ಒಂಭತ್ತನೇ ಸೀಸನ್​ಗೆ ಕಾಲಿಡುವ ಮೂಲಕ ಪ್ರಶಾಂತ್ ಸಂಬರ್ಗಿ ಹೆಚ್ಚು ಗುರುತಿಸಿಕೊಂಡರು. ಅವರು ವಿವಾದಗಳ ಮೂಲಕವೂ ಹೆಚ್ಚು ಸುದ್ದಿ ಆಗುತ್ತಾರೆ. ಇತ್ತೀಚೆಗೆ ಅವರು ಶಿವರಾಜ್​ಕುಮಾರ್ (Shivarajkumar) ವಿರುದ್ಧ ಹೇಳಿಕೆ ನೀಡಿ ಟೀಕೆಗೆ ಒಳಗಾಗಿದ್ದರು. ಈಗ ಪ್ರಶಾಂತ್ ಸಂಬರ್ಗಿ ಮತ್ತೆ ಸುದ್ದಿಯಲ್ಲಿದ್ದಾರೆ. ಪ್ರಶಾಂತ್ ವಿರುದ್ಧ ಹಲಸೂರು ಗೇಟ್ ಪೊಲೀಸ್​ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸುಳ್ಳು ದೂರು ಸಲ್ಲಿಸಿ ವಂಚನೆ ಎಸಗಿದ ಆರೋಪದ ಮೇಲೆ ಕೇಸ್ ದಾಖಲಾಗಿದೆ.

ಉದ್ಯಮಿ ದೇವನಾತ್ ವೈಕ್ಯೆ ಅವರು ಪ್ರಶಾಂತ್ ಸಂಬರ್ಗಿ ವಿರುದ್ಧ ದೂರು ನೀಡಿದವರು. ಈ ದೂರನ್ನು ಆಧರಿಸಿ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ. 2017ರ ಜುಲೈನಲ್ಲಿ ದೇವನಾತ್ ಅವರು ಸಂಬರಗಿಯಿಂದ ಸಾಲ ಪಡೆದಿದ್ದರು. ಮನೆಯ ಅಸಲಿ ದಾಖಲೆ, ಖಾಲಿ ಚೆಕ್ ಕೊಟ್ಟು ಶ್ಯೂರಿಟಿ ನೀಡಿದ್ದರು. ಬಳಿಕ 2017ರ ಡಿಸೆಂಬರ್‌ನಲ್ಲಿ ಪ್ರಶಾಂತ್​​ಗೆ ದೇವನಾಥ್​ ಹಣ ವಾಪಸ್ ನೀಡಿದ್ದರು. ಇಲ್ಲಿಗೆ ಎಲ್ಲವೂ ಮುಗಿಯಿತು ಎಂದು ದೇವನಾಥ್ ಭಾವಿಸಿದರು. ಆದರೆ, ಹಾಗಾಗಲಿಲ್ಲ.

ದೇವನಾಥ್ ಬಳಿ ಹೆಚ್ಚಿನ ಬಡ್ಡಿ, ಹಣ ನೀಡಬೇಕೆಂದು ಮನೆ ದಾಖಲೆ‌ ನೀಡದೆ ಪ್ರಶಾಂತ್ ಸಂಬರ್ಗಿ ಸತಾಯಿಸಿದ್ದರು. ಅಷ್ಟೇ ಅಲ್ಲ ವಿವಿಧ ಠಾಣೆಯಲ್ಲಿ ದೇವನಾತ್ ವಿರುದ್ಧ ಸುಳ್ಳು ದೂರು ನೀಡಿದ್ದರು. ಸುಳ್ಳು ದೂರು ಹಿನ್ನೆಲೆಯಲ್ಲಿ ಪ್ರಶಾಂತ್ ಸಂಬರಗಿ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಶಿವರಾಜ್​ಕುಮಾರ್ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕೆ ಪ್ರಶಾಂತ್ ಸಂಬರ್ಗಿ ಹಲವು ರೀತಿಯಲ್ಲಿ ಟೀಕೆ ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಹಲವು ಬಗೆಯ ಪೋಸ್ಟ್​ಗಳನ್ನು ಹಾಕಿ, ನಾಲಿಗೆ ಹರಿಬಿಟ್ಟಿದ್ದರು. ಈ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾದ ಬೆನ್ನಲ್ಲೇ ಪ್ರಶಾಂತ್ ಸಂಬರ್ಗಿ ತಾವು ಆಡಿದ ಮಾತನ್ನು ಹಿಂದಕ್ಕೆ ಪಡೆದಿದ್ದರು. ‘ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು’ ಎನ್ನುವ ಮಾತನ್ನು ಪ್ರಶಾಂತ್ ಸಂಬರ್ಗಿಗೆ ಫ್ಯಾನ್ಸ್ ನೆನಪಿಸಿದ್ದರು.

Leave a Reply

Your email address will not be published. Required fields are marked *