ನ್ಯೂಸ್ ಆ್ಯರೋ : ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ಸ್ವಾಮೀಜಿ ನಿಖರ ಭವಿಷ್ಯ ನುಡಿಯುವುದಕ್ಕೆ ಹೆಸರಾದವರು. ಇದೀಗ ಅವರು ಹುಬ್ಬಳ್ಳಿಯಲ್ಲಿ ಮಾತನಾಡಿ ಭಯಾನಕ ಭವಿಷ್ಯತ್ತಿನ ಸೂಚನೆ ನೀಡಿದ್ದಾರೆ.
ಸ್ವಾಮೀಜಿ ಹೇಳಿದ್ದೇನು?
ಪ್ರಕೃತಿ ಮಾತೆ ಮುನಿದಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿ ಜಲ ಪ್ರಳಯವೇ ಸಂಭವಿಸಲಿದೆ ಎಂದಿದ್ದಾರೆ. ಜಾಗತಿಕ ಮಟ್ಟದಲ್ಲೂ ದುರಂತ ಸಂಭವಿಸಲಿದೆ. ಜಗತ್ತಿಗೆ ಮೂರು ಗಂಡಾಂತರ ಕಾದಿದ್ದು, ಒಂದೆರಡು ದೇಶಗಳೇ ಮುಚ್ಚಿ ಹೋಗಲಿವೆ ಎಂದು ಹೇಳಿದ್ದಾರೆ.
ವಿಜಯ ದಶಮಿಯಿಂದ ಸಂಕ್ರಾಂತಿವರೆಗೆ ಜಗತ್ತಿನಲ್ಲಿ ದುರ್ಘಟನೆ ನಡೆಯಲಿದ್ದು, ಜನರು ಅಕಾಲಿಕವಾಗಿ ಮೃತಪಡಲಿದ್ದಾರೆ. ಆಳುವವರು ಅರಿತರೆ ಸಂಕಷ್ಟದಿಂದ ಪಾರಾಗಬಹುದು. ದೈವ ಕೃಪೆಯಿಂದ ವಿಪತ್ತು ದೂರವಾಗುತ್ತದೆ ಎಂದು ಪರಿಹಾರ ಸೂಚಿಸಿದ್ದಾರೆ.
ಗ್ಯಾರಂಟಿ ಬಗ್ಗೆ ಏನಂದ್ರು?
ಸ್ವಾಮೀಜಿ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗೆ ಮೆಚ್ಚುಗೆ ಸೂಚಿಸಿದರು. ಬಡವರಿಗೆ ಗ್ಯಾರಂಟಿ ಒಳ್ಳೆಯದೆ. ಯಾವ ಹೆಣ್ಣಿಗೆ ಸ್ವತಂತ್ರ ಇರಲಿಲ್ಲವೋ ಈಗ ಅಂತಹ ಹೆಣ್ಣು ಸ್ವತಂತ್ರವಾಗಿ ಹೊರಗೆ ಬಂದಿದ್ದಾಳೆ ಎಂದಿದ್ದಾರೆ.
ಇನ್ನು ಕಾಂಗ್ರೆಸ್ ಸರಕಾರ ಪೂರ್ಣಾವಧಿ ನಡೆಸುತ್ತ ಎನ್ನುವ ಪ್ರಶ್ನೆಗೆ ಸ್ವಾಮೀಜಿ ನೇರವಾಗಿ ಉತ್ತರಿಸದೆ ಮಾರ್ಮಿಕ ಪ್ರತಿಕ್ರಿಯೆ ನೀಡಿದ್ದಾರೆ. ಬಾಯಿಯ ವಾಸನೆ ಮೂಗಿಗೆ ಬಡಿಯುವುದಿಲ್ಲ. ಆದರೆ ಊರಿನಲ್ಲಿನ ಎಲ್ಲಾ ವಾಸನೆ ಮೂಗಿಗೆ ಬಡಿಯುತ್ತದೆ ಎಂದು ಒಗಟಿನ ರೂಪದಲ್ಲಿ ಉತ್ತರಿಸಿದ್ದಾರೆ.
ಚುನಾವಣಾ ಪೂರ್ವ ಭವಿಷ್ಯ
ರಾಜ್ಯ ವಿಧಾನಸಭೆ ಚುನಾವಣೆಯ ಮೊದಲೇ ಭವಿಷ್ಯ ನುಡಿದಿದ್ದ ಸ್ವಾಮೀಜಿ, ಕರ್ನಾಟಕದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ. ಸ್ಥಿರ ಸರಕಾರ ರಚನೆಯಾಗಲಿದೆ ಎಂದಿದ್ದರು.