ಚಿಕ್ಕೋಡಿ: ಮಾಜಿ ಸಿಎಂ ಯಡಿಯೂರಪ್ಪರಿಗೆ ರಾಜ್ಯ ಪ್ರವಾಸಕ್ಕೆ ಹೈಕಮಾಂಡ್ ಬ್ರೇಕ್ ಹಾಕಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿದರು.
ಯಡಿಯೂರಪ್ಪನವರು ಹಿರಿಯ ನಾಯಕರಿದ್ದಾರೆ. ಬಡವರ ಪರ ಕಾಳಜಿ ಇಟ್ಟುಕೊಂಡಿರುವ ನಾಯಕರಿದ್ದಾರೆ. ಅವರನ್ನು ತಡೆಯುವ ಪ್ರಯತ್ನ ಯಾರು ಮಾಡಲ್ಲ. ಸರ್ಕಾರದ ವಿರುದ್ಧ ಶಾಸಕ ರಾಜು ಕಾಗೆ ಹೇಳುತ್ತಿರುವುದು ಆಡಳಿತ ಪಕ್ಷದ ಪರಿಸ್ಥಿತಿಯನ್ನು ಎತ್ತಿ ತೋರುತ್ತಿದೆ. ಅವರ ಪರಿಸ್ಥಿತಿಯೇ ಈ ರೀತಿಯಾದರೆ ವಿರೋಧ ಪಕ್ಷದ ಶಾಸಕರ ಸ್ಥಿತಿಯೇನು? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ನಿರೀಕ್ಷೆಯನ್ನು ಹೆಚ್ಚು ಮಾಡಿತ್ತು. ಉಚಿತ ವಿದ್ಯುತ್ ನೀಡುತ್ತೇವೆ ಎಂದು ಹೇಳಿ ರೈತರನ್ನು ಬೀದಿಪಾಲು ಮಾಡಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಛತ್ತೀಸ್ಘಡ್ನಿಂದ ವಿದ್ಯುತ್ ಖರೀದಿ ಮಾಡಿ ರೈತರಿಗೆ ನೀಡಿದ್ದರು ಎಂದು ಅವರು ತಿಳಿಸಿದರು.