ತನಗೆ ಮೋಸ ಮಾಡಿದ ವ್ಯಕ್ತಿಗೆ ಬಿಜೆಪಿಯ ಒಂದು ವರ್ಷ ರಕ್ಷಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ತೊರೆಯುವುದಾಗಿ ಘೋಷಿಸಿದ್ದಾರೆ.
ಬಹುಭಾಷಾ ನಟಿ ಎಕ್ಸ್ ನಲ್ಲಿ ಪೋಸ್ಟ್ ಮೂಲಕ ಬಿಜೆಪಿ ತೊರೆಯುವ ಮೂಲಕ ಪಕ್ಷದ ಜೊತೆಗಿನ ೨೫ ವರ್ಷಗಳ ನಂಟು ಕೊನೆಗೊಳಿಸುತ್ತಿರುವುದಾಗಿ ನಟಿ ಗೌತಮಿ ತಡಿಮಲ್ಲ ಘೋಷಿಸಿದ್ದಾರೆ.

2021ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡುವ ಭರವಸೆಯನ್ನು ಪಕ್ಷ ನೀಡಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಟಿಕೆಟ್ ಕೈತಪ್ಪಿತ್ತು. ಹೀಗಿದ್ದರೂ, ನಾನು ಬಿಜೆಪಿಗೆ ಬದ್ಧವಾಗಿದ್ದೆ ಎಂದು ಗೌತಮಿ ಟ್ವೀಟ್ನಲ್ಲಿ ಲಗತ್ತಿಸಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾರವಾದ ಹೃದಯ ಮತ್ತು ಭ್ರಮನಿರಸನದಿಂದ ಪಕ್ಷಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಹೇಳಿರುವ ಗೌತಮಿ, ತಮ್ಮ ಪೋಸ್ಟ್‌ ಅನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಬಿಜೆಪಿ ತಮಿಳು ನಾಡು ಮುಖ್ಯಸ್ಥ ಕೆ ಅಣ್ಣಾಮಲೈ ಸೇರಿದಂತೆ ಇತರರನ್ನು ಟ್ಯಾಗ್ ಮಾಡಿದ್ದಾರೆ.

ನನ್ನ ಹಣ, ಆಸ್ತಿ ಮತ್ತು ದಾಖಲೆಗಳನ್ನು ವಂಚಿಸಿದ ವ್ಯಕ್ತಿಗೆ ಪಕ್ಷದಲ್ಲಿನ ಕೆಲವರು ಬೆಂಬಲ ನೀಡುತ್ತಿದ್ದಾರೆ. ತನಗಾದ ವಂಚನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ. ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆಯಿದ್ದು, ತನಗೆ ನ್ಯಾಯ ಸಿಗುವ ಭರವಸೆ ಇದೆ ಎಂದು ಹೇಳಿದ್ದಾರೆ.

2021ರ ಚುನಾವಣೆಯ ಸಮಯದಲ್ಲಿ ರಾಜಪಾಳ್ಯಂ ಕ್ಷೇತ್ರದ ಅಭಿವೃದ್ಧಿಯನ್ನು ತನಗೆ ವಹಿಸಲಾಗಿತ್ತು ಮತ್ತು ಅಲ್ಲಿಂದಲೇ ತನ್ನನ್ನು ಕಣಕ್ಕಿಳಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಟಿಕೆಟ್ ಅನ್ನು ಕೈತಪ್ಪಿಸಲಾಗಿದೆ. ಆಗಲೂ, ನಾನು ಪಕ್ಷಕ್ಕಾಗಿ ದುಡಿದೆ. ಬಳಿಕ ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ನಾನು ಕೆಲಸ ಮಾಡಿದ್ದೇನೆ. ಆದರೆ, ಪಕ್ಷಕ್ಕೆ 25 ವರ್ಷ ಸೇವೆ ಸಲ್ಲಿಸಿದರೂ, ನನಗೆ ಯಾವುದೇ ಬೆಂಬಲ ಸಿಲುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಎಫ್ಐಆರ್ ದಾಖಲಿಸಿದ ನಂತರವೂ, ಕಳೆದ 40 ದಿನಗಳಿಂದ ತನಗೆ ವಂಚಿಸಿದ ವ್ಯಕ್ತಿ ತಪ್ಪಿಸಿಕೊಳ್ಳಲು ಪಕ್ಷದ ಹಲವಾರು ಹಿರಿಯ ಸದಸ್ಯರು ಸಹಾಯ ಮಾಡುತ್ತಿದ್ದಾರೆ. ತಾನು ರಾಜೀನಾಮೆ ಪತ್ರವನ್ನು ‘ಅತ್ಯಂತ ನೋವು ಮತ್ತು ದುಃಖದಿಂದ ಬರೆಯುತ್ತಿದ್ದೇನೆ. ಆದರೆ, ಬಹಳ ದೃಢವಾದ ಸಂಕಲ್ಪದಿಂದ ಬರೆಯುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *