ಬೆಂಗಳೂರು: ಗಣೇಶ ಮೂರ್ತಿ( ganesh idol) ಧ್ವಂಸಗೊಳಿಸಿದ ಘಟನೆ ಭಾನುವಾರ ತಡರಾತ್ರಿ ಬೆಂಗಳೂರಿನ(Bengaluru) ವರ್ತೂರು ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗುಂಜೂರು ಹೊಸಹಳ್ಳಿ ಮುಖ್ಯರಸ್ತೆಯಲ್ಲಿ ಇರುವ ಗಣೇಶ ಮೂರ್ತಿಯನ್ನು ಕಿಡಿಗೇಡಿಗಳು ಹೊಡೆದು ಧ್ವಂಸ ಮಾಡಿದ್ದಾರೆ. ಸುತ್ತಿಗೆಯಿಂದ ಗಣೇಶ ಮೂರ್ತಿಯ ಕುತ್ತಿಗೆ ಭಾಗಕ್ಕೆ ಹೊಡೆದು ಧ್ವಂಸ ಮಾಡಿದ್ದು, ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.  ಸದ್ಯ  ಗಣೇಶ ಮೂರ್ತಿಯನ್ನು ಬಿಳಿ ಬಟ್ಟೆಯಿಂದ ಮುಚ್ಚಲಾಗಿದೆ.  ಈ ಬಗ್ಗೆ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಬಂಧನಕ್ಕೆ ಬಲೆ ಬೀಸಿದ್ದಾರೆ.

ಗಣೇಶ ಮೂರ್ತಿ ಧ್ವಂಸಗೊಳಿಸಿರುವ ಸಿಸಿ ಟಿವಿ ದೃಶ್ಯ

ಭಾನುವಾರ ತಡರಾತ್ರಿ ಹನ್ನೆರಡು ಗಂಟೆಗೆ ಕಿಡಿಗೇಡಿಯೊಬ್ಬ ಗುಂಜೂರು ಹೊಸಹಳ್ಳಿ ಮುಖ್ಯ ರಸ್ತೆಯಲ್ಲಿರುವ ಗಣೇಶ ವಿಗ್ರಹಕ್ಕೆ ಸುತ್ತಿಗೆಯಿಂದ ಹೊಡೆದು ಹಾನಿಗೊಳಿಸಿದ್ದಾನೆ. 9 ಬಾರಿ ಸುತ್ತಿಗೆಯಿಂದ ಹೊಡೆದು ಮೂರ್ತಿಯ ಮುಖವನ್ನು ವಿರೂಪಗಳಿಸಿದ್ದಾನೆ. ಇದೀಗ ಸಿಸಿ ಟಿವಿಯ ವಿಡಿಯೋ ವೈರಲ್ ಆಗಿದ್ದು, ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರವಾಗಿದೆ.

Leave a Reply

Your email address will not be published. Required fields are marked *