ಈ ವಾರದ ಕೊನೆಯ ವಹಿವಾಟಿನ ದಿನದಂದು ಪ್ರಮುಖ ಈಕ್ವಿಟಿ ಸೂಚ್ಯಂಕಗಳು ಋಣಾತ್ಮಕವಾಗಿ ಫ್ಲಾಟ್ ಲೈನ್ ಬಳಿ ವಹಿವಾಟು ನಡೆಸುತ್ತಿವೆ. ಬಿಎಸ್ಇ ಸೆನ್ಸೆಕ್ಸ್ ಬೆಳಿಗ್ಗೆ 34.01 ಅಂಕ ಅಥವಾ ಶೇ.0.05ರಷ್ಟು ಇಳಿಕೆ ಕಂಡು 62,814.63ಕ್ಕೆ ತಲುಪಿದ್ದರೆ, ನಿಫ್ಟಿ 50 ಸೂಚ್ಯಂಕವು 12.40 ಅಂಕ ಅಥವಾ ಶೇ.0.07ರಷ್ಟು ಕುಸಿದು 18,622.15ಕ್ಕೆ ಮುಟ್ಟಿತ್ತು. ಈ ವೇಳೆ ಏಥರ್ ಇಂಡಸ್ಟ್ರೀಸ್, ಎಚ್‌ಎಎಲ್‌, ಗ್ರೀನ್‌ಲಾಮ್ ಇಂಡಸ್ಟ್ರೀಸ್ ಷೇರುಗಳು ಟ್ರೆಂಡಿಂಗ್‌ನಲ್ಲಿದ್ದವು.

Top Trending Stock

ವಾರದ ಕೊನೆಯ ವಹಿವಾಟಿನ ದಿನದಂದು ಪ್ರಮುಖ ಈಕ್ವಿಟಿ ಸೂಚ್ಯಂಕಗಳು ಫ್ಲಾಟ್ ಲೈನ್ ಬಳಿ ಸ್ವಲ್ಪಮಟ್ಟಿಗೆ ಋಣಾತ್ಮಕವಾಗಿ ವಹಿವಾಟು ನಡೆಸುತ್ತಿವೆ. ಐಟಿ ಷೇರುಗಳು ಸತತ ಎರಡನೇ ವಹಿವಾಟಿನಲ್ಲೂ ನಷ್ಟ ದಾಖಲಿಸಿವೆ. ಎಸ್‌&ಪಿ ಬಿಎಸ್ಇ ಸೆನ್ಸೆಕ್ಸ್ ಬೆಳಿಗ್ಗೆ 10:28ರ ಹೊತ್ತಿಗೆ 34.01 ಅಂಕ ಅಥವಾ ಶೇ. 0.05ರಷ್ಟು ಇಳಿಕೆ ಕಂಡು 62,814.63ಕ್ಕೆ ತಲುಪಿತ್ತು. ಇನ್ನೊಂದೆಡೆ ನಿಫ್ಟಿ 50 ಸೂಚ್ಯಂಕವು 12.40 ಅಂಕ ಅಥವಾ ಶೇ. 0.07ರಷ್ಟು ಕುಸಿದು 18,622.15ಕ್ಕೆ ಮುಟ್ಟಿತ್ತು. ಇಡೀ ಮಾರುಕಟ್ಟೆಯು ಪ್ರಮುಖ ಸೂಚ್ಯಂಕಗಳನ್ನು ಮೀರಿಸಿದೆ. ಎಸ್&ಪಿ ಬಿಎಸ್ಇ ಮಿಡ್‌ಕ್ಯಾಪ್ ಸೂಚ್ಯಂಕವು ಶೇ. 0.33ರಷ್ಟು ಗಳಿಕೆ ಕಂಡಿದ್ದರೆ, ಎಸ್&ಪಿ ಬಿಎಸ್ಇ ಸ್ಮಾಲ್‌ಕ್ಯಾಪ್‌ ಸೂಚ್ಯಂಕವು ಶೇ. 0.23ರಷ್ಟು ಏರಿಕೆ ಕಂಡಿದೆ.

ಜೂನ್‌ 9, 2023 ಶುಕ್ರವಾರದಂದು ಈ ಟ್ರೆಂಡಿಂಗ್‌ ಷೇರುಗಳ ಬಗ್ಗೆ ಗಮನ ಹರಿಸಿ:

ಏಥರ್ ಇಂಡಸ್ಟ್ರೀಸ್: ಸೌದಿ ಅರಾಮ್ಕೊ ಟೆಕ್ನಾಲಜೀಸ್ ಸಂಸ್ಥೆಯೊಂದಿಗೆ ರಾಸಾಯನಿಕಗಳ ಸಂಸ್ಥೆಯು ಪರವಾನಗಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಷೇರಿನ ಬೆಲೆಯು ಶೇ. 7ರಷ್ಟು ಏರಿಕೆ ಕಂಡು ಜೂನ್ 9ರಂದು ಬಿಎಸ್‌ಇನಲ್ಲಿ 52 ವಾರಗಳ ಗರಿಷ್ಠ ಮಟ್ಟವಾದ 1,055.95 ರೂ.ಗೆ ತಲುಪಿದೆ. ಸುಸ್ಥಿರ ಕನ್ವರ್ಜ್ ಪಾಲಿಯೋಲ್ಸ್ ತಂತ್ರಜ್ಞಾನವನ್ನು ವಾಣಿಜ್ಯೀಕರಿಸಲು ಸೌದಿ ಅರಾಮ್ಕೊ ಟೆಕ್ನಾಲಜೀಸ್‌ನೊಂದಿಗೆ ಪರವಾನಗಿ ಒಪ್ಪಂದಕ್ಕೆ ವಿಶೇಷ ರಾಸಾಯನಿಕ ಕಂಪನಿಯು ಸಹಿ ಹಾಕಿದೆ. ಈ ಒಪ್ಪಂದದ ಮೂಲಕ ಕನ್ವರ್ಜ್ ಪಾಲಿಯೋಲ್ಸ್ ತಂತ್ರಜ್ಞಾನ ಮತ್ತು ಉತ್ಪನ್ನ ಸರಣಿಯನ್ನು ತಯಾರಿಸುವ ಮತ್ತು ವಾಣಿಜ್ಯೀಕರಣಗೊಳಿಸುವ ಏಥರ್‌ನ ಪ್ರಯತ್ನ ಔಪಚಾರಿಕವಾಗಿ ಪ್ರಾರಂಭವಾಗಲಿದೆ.

ಹಿಂದೂಸ್ತಾನ್ ಏರೋನಾಟಿಕ್ಸ್: ಈಕ್ವಿಟಿ ಷೇರುಗಳನ್ನು ಉಪವಿಭಾಗ ಮಾಡುವ ಪ್ರಸ್ತಾವನೆಯ ಬಗ್ಗೆ ಚರ್ಚೆ ಮಾಡಲು ನಿರ್ದೇಶಕರ ಮಂಡಳಿಯು ಜೂನ್ 27 ರಂದು ಸಭೆ ಸೇರಲಿದೆ ಎಂದು ಸರ್ಕಾರಿ ಸ್ವಾಮ್ಯದ ರಕ್ಷಣಾ ನಿಗಮ ಪ್ರಕಟಿಸಿದೆ. ಜೂನ್ 27, 2023 ರಂದು ನಿಗದಿಪಡಿಸಲಾದ ಸಭೆಯಲ್ಲಿ ಕಂಪನಿಯ ಈಕ್ವಿಟಿ ಷೇರುಗಳನ್ನು ಉಪವಿಭಾಗ ಮಾಡುವ ಪ್ರಸ್ತಾಪದ ಬಗ್ಗೆ ಚರ್ಚೆ ನಡೆಸಲು ಕಂಪನಿಯ ನಿರ್ದೇಶಕರ ಮಂಡಳಿಯು ನಿರ್ಧರಿಸಿದ ನಂತರ ಜೂನ್ 9 ರಂದು ಆರಂಭಿಕ ವಹಿವಾಟಿನಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಷೇರಿನ ಬೆಲೆಯು ಶೇ.3 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ.

ಗ್ರೀನ್‌ಲಾಮ್ ಇಂಡಸ್ಟ್ರೀಸ್: ಸಂಸ್ಥೆಯು ತಮಿಳುನಾಡು ಉತ್ಪಾದನಾ ಘಟಕದಲ್ಲಿ ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸಿದ ನಂತರ ಷೇರು ಶೇ. 10ರಷ್ಟು ಏರಿಕೆ ಕಂಡಿದ್ದು 52 ವಾರಗಳ ಗರಿಷ್ಠ ಮಟ್ಟವಾದ 446.40 ರೂ. ಅನ್ನು ತಲುಪಿದೆ. ವಾರ್ಷಿಕವಾಗಿ 18.9 ಮಿಲಿಯನ್ ಚದರ ಮೀಟರ್ ಸ್ಥಾಪಿತ ಸಾಮರ್ಥ್ಯದೊಂದಿಗೆ ತಮಿಳುನಾಡಿನ ತಿಂಡಿವನಂನಲ್ಲಿನ ಉತ್ಪಾದನಾ ಸೌಲಭ್ಯವು ಜೂನ್ 9, 2023 ರಂದು ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸಿದೆ ಎಂದು ಗ್ರೀನ್‌ಲಾಮ್ ಇಂಡಸ್ಟ್ರೀಸ್ ಹೇಳಿದೆ. ಪೂರ್ಣ ಸಾಮರ್ಥ್ಯದ ಬಳಕೆಯಲ್ಲಿ ವರ್ಷಕ್ಕೆ 400 ಕೋಟಿ ರೂ. ಆದಾಯದ ಸಾಮರ್ಥ್ಯ ಇದಕ್ಕಿದೆ ಎಂದು ಕಂಪನಿ ತಿಳಿಸಿದೆ.

Leave a Reply

Your email address will not be published. Required fields are marked *