ಬೆಂಗಳೂರು: ಅನಾರೋಗ್ಯದಿಂದ ನಟಿ ಸುನೈನಾ ಆಸ್ಪತ್ರೆ ಸೇರಿದ್ದಾರೆ. ಅವರು ನಟ ಪ್ರಜ್ವಲ್ ದೇವರಾಜ್ ನಟನೆಯ ಗಂಗೆ ಬಾರೆ ತುಂಗೆ ಬಾರೆ ಚಿತ್ರದಲ್ಲಿ ನಟಿಸಿದ್ದರು. ಸದ್ಯ ನಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ವೈರಲ್ ಆಗಿದೆ.
ಟಾಲಿವುಡ್ ಇಂಡಸ್ಟ್ರಿಯಲ್ಲಿ ಮೊದಲು ಗುರುತಿಸಿಕೊಂಡಿದ್ದ ಸುನೈನಾ ತಮಿಳು ಚಿತ್ರದಿಂದ ತಮ್ಮ ಸಿನಿ ಜರ್ನಿಯನ್ನು ಪ್ರಾರಂಭಿಸಿದ್ದರು. 2005ರಲ್ಲಿ ತೆರೆಕಂಡ ಕುಮಾರ್ vs ಕುಮಾರಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಸುನೈನಾ ಪಾದಾರ್ಪಣೆ ಮಾಡಿದ್ದರು.
2008ರಲ್ಲಿ ತೆರೆಕಂಡ ಗಂಗೆ ಬಾರೆ ತುಂಗೆ ಬಾರೆ ಚಿತ್ರದಲ್ಲಿ ಗಂಗಾ ಪಾತ್ರದಲ್ಲಿ ನಟಿಸಿದ್ದರು. ಕಳೆದ ಜೂನ್ನಲ್ಲಿ ತೆರೆಕಂಡ ರಜಿನಾ ಎಂಬ ಚಿತ್ರದಲ್ಲಿ ಕೂಡ ನಟಿಸಿದ್ದರು.