ಪೊನ್ನಿಯಿನ್ ಸೆಲ್ವನ್ 2 ಸಿನಿಮಾದ ಮೂಲಕ ಮತ್ತೆ ಸದ್ದು ಮಾಡುತ್ತಿರುವ ನಟಿ ಶೋಭಿತಾ ಧೂಲಿಪಾಲ (Shobhita Dhulipala) ಈ ಹಿಂದೆ ಡೇಟಿಂಗ್ (Dating) ವಿಚಾರವಾಗಿ ಸಾಕಷ್ಟು ಸುದ್ದಿಯಾಗಿದ್ದರು. ಅದರಲ್ಲೂ ನಟ ನಾಗ ಚೈತನ್ಯ (Naga Chaitanya) ಜೊತೆ ಲಂಡನ್ ಹೋಟೆಲ್ ವೊಂದರಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ನಾಗ ಚೈತನ್ಯ ಮತ್ತು ಶೋಭಿತಾ ಡೇಟಿಂಗ್ ಮಾಡುತ್ತಿರುವ ವಿಚಾರ ಹಲವು ಅನುಮಾನಗಳನ್ನೂ ಮೂಡಿಸಿತ್ತು.
ಸಮಂತಾ (Samantha) ಜೊತೆಗಿನ ಬಾಂಧವ್ಯ ಕಡಿದುಕೊಂಡ ನಂತರ ನಾಗ ಚೈತನ್ಯ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದ್ದು, ಈ ವೇಳೆಯಲ್ಲಿ ಗೆಳೆತನಕ್ಕೆ ಸಿಕ್ಕವರೇ ಶೋಭಿತಾ ಎಂದು ಹೇಳಲಾಗುತ್ತಿದೆ. ನಾಗ ಚೈತನ್ಯಗೆ ಸ್ನೇಹಿತೆಯಾಗಿ ಅವರ ಜೀವನವನ್ನು ಮತ್ತಷ್ಟು ಚಂದಗೊಳಸಿದರು ಎನ್ನುವ ಮಾತಿದೆ. ಹಾಗಾಗಿ ಇಬ್ಬರೂ ಒಟ್ಟಿಗೆ ಹಲವು ದೇಶಗಳನ್ನು ಸುತ್ತಿದ್ದಾರೆ ಎನ್ನವುದಕ್ಕೆ ಲಂಡನ್ ನಲ್ಲಿ ಸಿಕ್ಕ ಫೋಟೋ ಸಾಕ್ಷಿ ಹೇಳಿತ್ತು.
ಡೇಟಿಂಗ್ ವಿಚಾರ ಸಾಕಷ್ಟು ಸದ್ದು ಮಾಡಿದ್ದರೂ, ಈವರೆಗೂ ಒಂದೇ ಒಂದು ಪ್ರತಿಕ್ರಿಯೆ ಕೂಡ ನಾಗ ಚೈತನ್ಯ ಕೊಟ್ಟಿರಲಿಲ್ಲ. ಇದೇ ಮೊದಲ ಬಾರಿಗೆ ಶೋಭಿತಾ ಜೊತೆಗಿನ ಡೇಟಿಂಗ್ ವಿಚಾರವನ್ನು ಮಾತನಾಡಿದ್ದು, ಜೊತೆಗೆ ಡಿವೋರ್ಸ್ ಬಳಿಕದ ಜೀವನವನ್ನೂ ಅಭಿಮಾನಿಗಳ ಮುಂದೆ ತೆರೆದಿಟ್ಟಿದ್ದಾರೆ. ಸಮಂತಾ ಬಗ್ಗೆಯೂ ಮಾತನಾಡಿದ್ದಾರೆ.
‘ಡಿವೋರ್ಸ್ (Divorce) ಬಳಿಕ ತಾವು ಯಾವತ್ತೂ ಖಿನ್ನತೆಗೆ ಒಳಗಾಗಿಲ್ಲ, ಎಲ್ಲವೂ ಪಾಠ. ಅದರ ಬಗ್ಗೆ ನನಗೆ ಯಾವುದೇ ಪಶ್ಚಾತಾಪವಿಲ್ಲ ಎಂದಿದ್ದಾರೆ ನಾಗ ಚೈತನ್ಯ. ಅಲ್ಲದೇ ಶೋಭಿತಾ ಡೇಟಿಂಗ್ ವಿಚಾರದ ಬಗ್ಗೆ ತಮಗೇನೂ ಗೊತ್ತಿಲ್ಲ. ಆ ಕುರಿತು ಮಾತನಾಡಲಾರೆ ಎಂದು ಹೇಳುವ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.