ಹೆಬ್ಬಾಳ ಕ್ಷೇತ್ರದಲ್ಲಿ ನಕಲಿ ವೋಟರ್ ಐಡಿ ಪತ್ತೆ ಪ್ರಕರಣವನ್ನು ಸಿಸಿಬಿ ಬದಲಾಗಿ ಸಿಬಿಐ ಅಥವಾ ಎನ್​ಐಎ ತನಿಖೆಗೆ ಒಪ್ಪಿಸಬೇಕು ಎಂದು ಶಾಸಕ ಎಸ್‌. ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಭದ್ರತೆಗೆ ವಿರುದ್ಧವಾಗಿರುವ ಕೆಲಸ ಮಾಡಲಾಗಿದೆ.

ಸಚಿವ ಬೈರತಿ ಸುರೇಶ್ ತನ್ನ ಚುನಾವಣಾ ಗೆಲುವಿಗೋಸ್ಕರ ಇದನ್ನು ಮಾಡಿಸಿದ್ದಾರೆ. ಚುನಾವಣಾ ಆಯೋಗಕ್ಕೆ ನಾವು ದೂರು ತೆಗೆದುಕೊಂಡು ಹೋಗುತ್ತೇವೆ. ಸಿಎಂ ಸಿದ್ದರಾಮಯ್ಯ ಈ ವಿಚಾರದಲ್ಲಿ ಗಾಂಭೀರ್ಯತೆಯನ್ನು ತೋರಿಸಬೇಕು.

ಪ್ರಕರಣದಲ್ಲಿ ಬೈರತಿ ಸುರೇಶ್ ಕೂಡ ವಿಚಾರಣೆಗೆ ಒಳಪಡಬೇಕು. ಆರೋಪ ಕೇಳಿ ಬಂದಿರುವ ಎಂಎಸ್​ಎಲ್ ಟೆಕ್ನೋ ಸಂಸ್ಥೆ ಮುದ್ರಿಸಿರುವ ಆಧಾರ್ ಕಾರ್ಡ್​​ಗಳ‌ನ್ನು ಅಮಾನತು ಮಾಡಬೇಕು ಎಂದು ಶಾಸಕ ಎಸ್‌. ಸುರೇಶ್ ಕುಮಾರ್ ಆಗ್ರಹಿಸಿದರು.

Leave a Reply

Your email address will not be published. Required fields are marked *

Latest News