ಚಿಕ್ಕೋಡಿ: ದುರ್ಗಾದೇವಿ ಮೂರ್ತಿಗೆ ತಲವಾರ್ ನಿಂದ ಬೆರಳಿನಿಂದ ಕೊಯ್ದುಕೊಂಡು ರಕ್ತ ದರ್ಪಣೆಯನ್ನು ಶ್ರೀರಾಮಸೇನೆ ಕಾರ್ಯಕರ್ತನೊಬ್ಬನು ಮಾಡಿದ್ದಾನೆ.
ಈ ರೀತಿ ರಕ್ತ ದರ್ಪಣೆ ಮಾಡಿರುವುದು ಭಕ್ತಿಯ ಪರಕಾಷ್ಠೆಯನ್ನು ಎತ್ತಿ ತೋರುತ್ತದೆ. ನವರಾತ್ರಿ ಉತ್ಸವದಲ್ಲಿ ಚಿಕ್ಕ ಮಕ್ಕಳಿಂದ ದೊಡ್ಡವರವರೆಗೆ ತಲವಾರ್ ಹಿಡಿದುಕೊಂಡು ಜಾಥಾ ನಡೆಸಿದರು.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಕಾಡಸಿದ್ದೇಶ್ವರ ದೇವಸ್ಥಾನದ ಬಳಿ ಪ್ರತಿಷ್ಠಾಪಿಸಿರುವ ದುರ್ಗಾದೇವಿ ಮೂರ್ತಿಗೆ ರಕ್ತದ ದರ್ಪಣೆ ಮಾಡಲಾಯಿತು.
ಕೈಯಲ್ಲಿ ತಲವಾರ್ ಹಿಡಿದು ಮೆರವಣಿಗೆ ನಡೆಸಿದ ನೂರಾರು ಹಿಂದೂ ಸಂಘಟನೆಗಳ ಕಾರ್ಯಕರ್ತರಲ್ಲಿ ಹಲವು ಬಾಲಕರು ಮತ್ತು ಬಾಲಕಿಯರು ಸೇರಿದ್ದರು. ಇದೇ ಜಾಥಾದಲ್ಲಿ ಹಲವು ಯುವಕ ಯುವತಿಯರು ಭಾಗಿಯಾಗಿದ್ದರು. ಪಾಕಿಸ್ತಾನ ದೇಶದ ಧ್ವಜದ ರಂಗೋಲಿ ಬಿಡಿಸಿ ಕಾಲಿನಿಂದ ತುಳಿದು ಯುವಕರು ಸಂಭ್ರಮಿಸಿದರು.