ಇತ್ತೀಚೆಗೆ ಕಳ್ಳರ ಹಾವಳಿ ಹೆಚ್ಚಾಗಿದ್ದು, ಅದು ಎಷ್ಟರ ಮಟ್ಟಿಗೆ ಅಂದರೆ, ಪೊಲೀಸರನ್ನು ಬಿಡದ ಮಟ್ಟಕ್ಕೆ ಬಂದು ತಲುಪಿದೆ. ಹೌದು ಡಿಸಿಪಿ ಕಾರಿನಲ್ಲಿದ್ದ ಡಿಎಸ್​ಸಿ(Digital Signature Certicate) ಕೀಯನ್ನೇ ಕಳ್ಳ ಎಗರಿಸಿದ ಘಟನೆ ಉಪ್ಪಾರಪೇಟೆ ಬಳಿ ಇರುವ ಬಿಬಿಎಂಪಿ ಕಚೇರಿ ಬಳಿ ನಡೆದಿದೆ.

ಡಿಸಿಪಿ ಕಾರಿನಲ್ಲಿದ್ದ ಇ-ತಂತ್ರಾಂಶದ ಸಹಿಗೆ ಬಳಸುವ DSC ಕೀ ಕಳ್ಳನ: ದೂರು ದಾಖಲು

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಇತ್ತೀಚೆಗೆ ಕಳ್ಳರ ಹಾವಳಿ ಹೆಚ್ಚಾಗಿದ್ದು, ಅದು ಎಷ್ಟರ ಮಟ್ಟಿಗೆ ಅಂದರೆ, ಪೊಲೀಸರನ್ನು ಬಿಡದ ಮಟ್ಟಕ್ಕೆ ಬಂದು ತಲುಪಿದೆ. ಹೌದು ಡಿಸಿಪಿ ಕಾರಿನಲ್ಲಿದ್ದ ಡಿಎಸ್​ಸಿ(Digital Signature Certicate) ಕೀಯನ್ನೇ ಕಳ್ಳ ಎಗರಿಸಿದ ಘಟನೆ ಉಪ್ಪಾರಪೇಟೆ ಬಳಿ ಇರುವ ಬಿಬಿಎಂಪಿ ಕಚೇರಿ ಬಳಿ ನಡೆದಿದೆ. ಪಶ್ಚಿಮ ವಿಭಾಗದ ಸಂಚಾರಿ ಡಿಸಿಪಿ ಆಗಿರುವ ಡಾ. ಸುಮನ್ ಪನ್ನೇಕರ್ ಅವರು ಬಿಬಿಎಂಪಿ ಕಚೇರಿ ಬಳಿ ತಮ್ಮ ಕಾರನ್ನು ನಿಲ್ಲಿಸಿ, ಇ- ತಂತ್ರಾಂಶದ ಸಹಿಗೆ ಬಳಸುವ ಡಿಎಸ್​ಸಿ ಕೀಯನ್ನ ಕಾರಿನ ಸೀಟ್ ಮೇಲೆ ಬಿಟ್ಟು, ಕಾರು ಲಾಕ್ ಮಾಡುವುದನ್ನ ಮರೆತು ಕಚೇರಿಗೆ ಹೋಗಿದ್ದಾರೆ. ಈ ವೇಳೆ ಚಾಲಾಕಿ ಕಳ್ಳ ತನ್ನ ಕೈ ಚಳಕ ತೋರಿಸಿದ್ದಾನೆ.

ಪೊಲೀಸ್​ ಠಾಣೆಗೆ ದೂರು

ಈ ಡಿಎಸ್​ಸಿ ಕೀಯನ್ನು ಇ- ತಂತ್ರಾಂಶದ ಸಹಿಗೆ ಬಳಸಲಾಗುತ್ತದೆ. ಇದನ್ನು ಕಾರಿನಲ್ಲಿ ಇಟ್ಟು ಮರೆತು ಬಂದಿರುವುದು ಗೊತ್ತಾಗಿ, ಮತ್ತೆ ಕಾರಿನ ಬಳಿ ಬಂದಾಗ ಕಳ್ಳತನವಾಗಿರುವುದು ಬಯಲಾಗಿದೆ. ಕೂಡಲೇ ಡಿಸಿಪಿ ಡಾ. ಸುಮನ್ ಪನ್ನೇಕರ್ ಅವರು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಷ್ಟು ದಿನ ಸಾರ್ವಜನಿಕರನ್ನ ಮಾತ್ರ ದೋಚುತ್ತಿದ್ದ ಕಳ್ಳರು ಇದೀಗ ಪೊಲೀಸರನ್ನು ಬಿಡದ ಪರಿಸ್ಥಿತಿ ಎದುರಾಗಿದೆ.

Leave a Reply

Your email address will not be published. Required fields are marked *