ಗ್ರಾಹಕರಿಗೆ ವಿದ್ಯುತ್‌ ದರ ಏರಿಕೆ ಬಳಿಕ ಮತ್ತೊಂದು ಶಾಕ್‌ :‌ ಏಕಾಏಕಿ ವಾಟರ್‌ ಬಿಲ್‌ ಡಬಲ್

ಬೆಂಗಳೂರು : ಒಂದು ಕೈನಲ್ಲಿ ಕೊಟ್ಟು ಮತ್ತೊಂದು ಕೈನಲ್ಲಿ ಕಿತ್ತುಕೊಳ್ಳುತ್ತಿದೆಯಾ ಸರ್ಕಾರ ಎಂದು ಜನಸಾಮಾನ್ಯರಲ್ಲಿ ಪ್ರಶ್ನೆ ಮೂಡುತ್ತಿದೆ. ಸರ್ಕಾರದ ಉಚಿತ ಭಾಗ್ಯಗಳ ನಡುವೆ ರಾಜ್ಯದ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ಜೂನ್‌ ತಿಂಗಳಲ್ಲಿ ಬಂದಿರುವ ವಾಟರ್ ಬಿಲ್ ಏಕಾಏಕಿ ಡಬಲ್‌ ಆಗಿದೆ.

ಕೆಲ ಮನೆಗಳಿಗೆ ಬಂದಿರುವ ನೀರಿನ ಬಿಲ್‌ ಮೂರ‍್ನಾಲ್ಕು ಪಟ್ಟು ಹೆಚ್ಚಾಗಿದೆ. ಇದು ಬೇಕಂತಲೇ ಮಾಡಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರಿನ ಕೆಲವು ಮನೆಗಳಲ್ಲಿ ಏಕಾಏಕಿ ಮನೆಯ ನೀರಿನ ಬಳಕೆಯ ಬಿಲ್ ಡಬಲ್, ತ್ರಿಬಲ್ ಆಗಿದೆ. ಹೀಗೆ ಹಲವು ರೀತಿಯಲ್ಲಿ ಬೆಲೆ ಏರಿಕೆ ಬಾಣ ಜನರಿಗೆ ಚುಚ್ಚುತ್ತಿದೆ. ಸರ್ಕಾರ ಒಂದು ಕೈನಲ್ಲಿ ಕೊಟ್ಟು ಮತ್ತೊಂದು ಕೈನಲ್ಲಿ ಕಿತ್ತುಕೊಳ್ತಿದೆಯಾ ಅನ್ನೋ ಆರೋಪ ಕೂಡಾ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಏಕಾಏಕಿ ನೀರಿನ ಶುಲ್ಕ ಹೆಚ್ಚಳ ಆಗಿದೆ. ಇದರಿಂದಾಗಿ ಸಾರ್ವಜನಿಕರು ಕಂಗಾಲಾಗಿದ್ದಾರೆ. ಕಳೆದ ತಿಂಗಳು 930 ರೂ. ಬಂದಿತ್ತು, ಈ ತಿಂಗಳು ಏಕಾಏಕಿ 3,000 ದಾಟಿದೆ. ವಯಾಲಿಕಾವಲ್ ಬಳಿ ಒಂದೇ ರಸ್ತೆಯ ಹತ್ತಾರು ಮನೆಗಳಲ್ಲಿ ನೀರಿನ ಬಿಲ್ ಡಬಲ್ ಆಗಿರೋದು ನೋಡಿ ಜನ ಶಾಕ್ ಆಗಿದ್ದಾರೆ. ಉಚಿತ ಭಾಗ್ಯ ಅಂತ ಈ ರೀತಿ ಮಾಡಿದ್ದಾರೆ ಎಂದು ಜಲಮಂಡಳಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಫ್ರೀ ಭಾಗ್ಯ ಒಕೆ ಅದ್ರೇ ಈ ರೀತಿ ಬೇರೆ ರೀತಿಯಲ್ಲಿ ಸರ್ಕಾರ ನಮಗೆ ಬರೆ ಹಾಕ್ತಿದೆ ಅಂತ ಜನ ಆಕ್ರೋಶಗೊಂಡಿದ್ದಾರೆ. ಇನ್ನೂ ಜಲಮಂಡಳಿ ಅಧಿಕಾರಿಗಳನ್ನ ಕೇಳಿದ್ರೇ ಹೀಗೆ ಆಗಲು ಸಾಧ್ಯವಿಲ್ಲ. ಹೆಚ್ಚಿಗೆ ಬಿಲ್‌ಗೆ ಲೀಕೇಜ್ ಕಾರಣ ಇರಬಹುದು. ಒಂದೇ ರಸ್ತೆಯಲ್ಲಿ ಹತ್ತಾರು ಮನೆಗಳಿಗೆ ಈ ರೀತಿ ಆಗಿದೆ ಅಂದ್ರೆ ಪರಿಶೀಲನೆ ಮಾಡುತೇವೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *